HomeHealthಮಲಬದ್ಧತೆ ಸಮಸ್ಯೆಗೆ ಗುಡ್‌ಬೈ: ಜೀರ್ಣಶಕ್ತಿ ಹೆಚ್ಚಿಸಲು ನಿಮ್ಮ ದಿನನಿತ್ಯದ ಆಹಾರದಲ್ಲಿರಲಿ ಈ 5 ಪದಾರ್ಥಗಳು!

ಮಲಬದ್ಧತೆ ಸಮಸ್ಯೆಗೆ ಗುಡ್‌ಬೈ: ಜೀರ್ಣಶಕ್ತಿ ಹೆಚ್ಚಿಸಲು ನಿಮ್ಮ ದಿನನಿತ್ಯದ ಆಹಾರದಲ್ಲಿರಲಿ ಈ 5 ಪದಾರ್ಥಗಳು!

ಮಲಬದ್ಧತೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಹದ ಹದವಿಲ್ಲದೆ ಹಲವರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಹೊಟ್ಟೆ ಸರಿಯಾಗಿ ತೊಳೆಯದಿರುವುದು, ಗ್ಯಾಸ್, ಹೊಟ್ಟೆ ಉಬ್ಬರ ಹಾಗೂ ಭಾರದ ಅನುಭವಕ್ಕೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ, ಕರುಳಿನ ಆರೋಗ್ಯ ಸರಿಯಿಲ್ಲದಿದ್ದರೆ ಮುಖದಲ್ಲಿ ಮೊಡವೆಗಳು ಮೂಡುವುದು ಮತ್ತು ತ್ವಚೆಯ ಕಾಂತಿ ಕಡಿಮೆಯಾಗುವುದಕ್ಕೂ ಇದು ಕಾರಣವಾಗಬಹುದು. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ವಿಪುಲವಾಗಿ ನೀರು ಕುಡಿಯುವುದು ಮತ್ತು ನಾರಿನಂಶ (ಫೈಬರ್) ಹೆಚ್ಚಿರುವ ಆಹಾರ ಸೇವಿಸುವುದು ಸೂಕ್ತ ಎನ್ನುತ್ತಾರೆ ತಜ್ಞರು.

ವೈದ್ಯರಾದ ಡಾ. ಶಿಲ್ಪಿ ಅರೋರಾ ಅವರ ಪ್ರಕಾರ, ಮಲಬದ್ಧತೆಯು ಕೇವಲ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಾಗಿ ಉಳಿಯುವುದಿಲ್ಲ. ಇದು ನಿರಂತರ ಸುಸ್ತು, ತ್ವಚೆಯಲ್ಲಿ ಮೊಡವೆಗಳು, ಹಾರ್ಮೋನ್ ಏರುಪೇರು ಹಾಗೂ ತೂಕ ಇಳಿಕೆಗೆ ತಡೆಯೊಡ್ಡುವ ಸಮಸ್ಯೆಗಳಿಗೂ ದಾರಿಯಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಲು ಅವರು ಕೆಲವು ಮುಖ್ಯ ಆಹಾರಗಳನ್ನು ನಿತ್ಯದ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಲು ಸಲಹೆ ನೀಡುತ್ತಾರೆ.

1. ಹಸಿ ಪಪ್ಪಾಯಿ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಸಿ ಪಪ್ಪಾಯಿಯಲ್ಲಿ ‘ಪಪೈನ್’ ಎಂಬ ಜೀರ್ಣಕಾರಿ ಕಿಣ್ವ (ಎಂಜೈಮ್) ಹಾಗೂ ಹೇರಳವಾದ ನಾರಿನಂಶವಿದೆ. ಇದು ಕರುಳಿನಲ್ಲಿ ಶೇಖರಣೆಯಾಗಿರುವ ತ್ಯಾಜ್ಯವನ್ನು ಸುಲಭವಾಗಿ ಹೊರಹಾಕಲು ಮತ್ತು ಜೀರ್ಣಾಂಗವ್ಯೂಹದ ಕಾರ್ಯವೈಖರಿಯನ್ನು ಸುಸೂತ್ರವಾಗಿಡಲು ನೆರವಾಗುತ್ತದೆ.

2. ನೆನೆಸಿದ ಒಣದ್ರಾಕ್ಷಿ

ನೀರಿನಲ್ಲಿ ನೆನೆಸಿದ ಒಣದ್ರಾಕ್ಷಿ ನೈಸರ್ಗಿಕ ವಿರೇಚಕವಾಗಿ (ಲಕ್ಸೇಟಿವ್) ಕೆಲಸ ಮಾಡುತ್ತದೆ. ಇದರಲ್ಲಿರುವ ಸೋರ್ಬಿಟಾಲ್ ಎಂಬ ನೈಸರ್ಗಿಕ ಅಂಶವು ಕರುಳಿನಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸಿ, ಮಲಬದ್ಧತೆಯನ್ನು ನಿವಾರಿಸಲು ಮತ್ತು ಮಲ ವಿಸರ್ಜನೆ ಸುಲಭವಾಗಲು ಸಹಾಯ ಮಾಡುತ್ತದೆ.

3. ಡ್ರೈ ಪ್ಲಮ್ಸ್ (ಪ್ರೂನ್ಸ್)

ಒಣಗಿಸಿದ ಪ್ಲಮ್ ಹಣ್ಣುಗಳಲ್ಲಿ ಕರಗುವ ಮತ್ತು ಕರಗದ ಎರಡೂ ರೀತಿಯ ನಾರಿನಂಶಗಳು ಸಮೃದ್ಧವಾಗಿವೆ. ಕರಗದ ನಾರಿನಂಶವು ಮಲಕ್ಕೆ ಅಗತ್ಯ ಪ್ರಮಾಣವನ್ನು ನೀಡಿದರೆ, ಕರಗುವ ನಾರಿನಂಶವು ಜೀರ್ಣಾಂಗದಲ್ಲಿ ಮಲ ಸರಾಗವಾಗಿ ಚಲಿಸುವಂತೆ ಮಾಡುತ್ತದೆ. ಮಲಬದ್ಧತೆಗೆ ಇದು ಅತ್ಯುತ್ತಮ ನೈಸರ್ಗಿಕ ಔಷಧವಾಗಿದೆ.

ಆಹಾರಕ್ರಮದಲ್ಲಿ ಮಾಡಿಕೊಳ್ಳುವ ಇಂತಹ ಸಣ್ಣಪುಟ್ಟ ಬದಲಾವಣೆಗಳು ಕರುಳಿನ ಆರೋಗ್ಯವನ್ನು ಕಾಪಾಡಿ, ನೈಸರ್ಗಿಕವಾಗಿಯೇ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular