HomeKarnatakaನಕಲಿ ಔಷಧಿ ಮಾಫಿಯಾ: ಫೈಜರ್ ಕಂಪನಿಯ ಔಷದ ಸರಬರಾಜಿಗೆ ತಾತ್ಕಾಲಿಕ ತಡೆ; 15 ಫಾರ್ಮಸಿಗಳಿಗೂ ನೋಟಿಸ್;...

ನಕಲಿ ಔಷಧಿ ಮಾಫಿಯಾ: ಫೈಜರ್ ಕಂಪನಿಯ ಔಷದ ಸರಬರಾಜಿಗೆ ತಾತ್ಕಾಲಿಕ ತಡೆ; 15 ಫಾರ್ಮಸಿಗಳಿಗೂ ನೋಟಿಸ್; ಲೈಸನ್ಸ್ ರದ್ದು

ಬೆಂಗಳೂರು: ನಕಲಿ ಔಷಧ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ಔಷಧ ಆಡಳಿತ ಇಲಾಖೆ ವಿವಿಧ ಆಸ್ಪತ್ರೆಗಳಲ್ಲಿರುವ ಫಾರ್ಮಸಿಗಳಿಗೂ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಫೈಜರ್ ಕಂಪನಿಯ ಔಷಧ ಸರಬರಾಜಿಗೆ ತಾತ್ಕಾಲಿಕ ತಡೆ ನೀಡಿದೆ.

ಫೈಜರ್ ಕಂಪನಿಯ ಔಷಧಿಗಳ ಹೆಸರಲ್ಲಿ ನಕಲಿ ಔಷಧಗಳು ಸರಬರಾಜಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ಕಂಪನಿಯ ಔಷಧಿಗಳ ಸರಬರಾಜುಗಳನ್ನು ತಾತ್ಕಾಅಲಿಕವಾಗಿ ತಡೆ ಹಿಡಿಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಯಾವೆಲ್ಲ ಆಸ್ಪತ್ರೆಗಳಿಗೆ ಈ ಜಾಲ ನಕಲಿ ಔಷಧಗಳನ್ನು ಸಪ್ಲೈ ಮಾಡಿತ್ತು ಎಂಬುದನ್ನು ಎಸ್​ಐಟಿ ಅಧಿಕಾರಿಗಳು ಪತ್ತೆ ಹೆಚ್ಚಿರುವ ಬೆನ್ನಲ್ಲೇ ದೇಶದ ಹಲವೆಡೆ ಆಸ್ಪತ್ರೆಗಳಿಗೆ ಆಹಾರ ಮತ್ತು ಔಷಧ ಆಡಳಿತ ಇಲಾಖೆ (FDA) ಆಘಾತ ನೀಡಿದೆ. ಬೆಂಗಳೂರು ಸೇರಿ 15ಕ್ಕೂ ಹೆಚ್ಚು ಆಸ್ಪತ್ರೆಗಳ ಫಾರ್ಮಸಿಗಳಿಗೆ ನೋಟಿಸ್ ನೀಡಲಾಗಿದ್ದು, ಫಾರ್ಮಸಿಗಳ ಲೈಸೆನ್ಸ್ ರದ್ದು ಮಾಡಲಾಗಿದೆ.

ಇಷ್ಟೇ ಅಲ್ಲದೆ ಕ್ಯಾನ್ಸರ್ ಔಷಧ, ಜೀವ ರಕ್ಷಕ ಔಷಧ ಹಾಗೂ ICU ಇಂಜೆಕ್ಷನ್‌ಗಳನ್ನು ಆಸ್ಪತ್ರೆಗಳಿಗೆ ಪೂರೈಸಿದ ಡಿಸ್ಟ್ರಿಬ್ಯೂಟರ್‌ಗಳು, ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಯಾರೆಲ್ಲ ನಿಯಮ ಉಲ್ಲಂಘಿಸಿದ್ದಾರೆ? ಮಾನದಂಡಗಳನ್ನು ಅನುಸರಿಸಿಲ್ಲ? ಎಂಬುದರ ಪರಿಶೀಲನೆ ನಡೆಯುತ್ತಿದ್ದು, ಕೇವಲ ಆಸ್ಪತ್ರೆಗಳ ಫಾರ್ಮಸಿ ಪರವಾನಿಗೆ ಮಾತ್ರವಲ್ಲದೆ ಡಿಸ್ಟ್ರಿಬ್ಯೂಟರ್​​ಗಳ ಲೈಸೆನ್ಸ್ ರದ್ದಿಗೂ ಕ್ರಮ ಕೈಗೊಳ್ಳಲಾಗಿದೆ.

ಇದೇ ವೇಳೆ ಡಿಸ್ಕೌಂಟ್ ನೀಡಿ ಔಷಧ ಮಾರಾಟ ಮಾಡುತ್ತಿರುವ ಕಂಪನಿಗಳಿಗೆ ಆಹಾರ ಮತ್ತು ಔಷಧ ಆಡಳಿತ ಇಲಾಖೆ ಶಾಕ್ ನೀಡಿದ್ದು, ಔಷಧಗಳ ಗುಣಮಟ್ಟ ಟೆಸ್ಟ್ ಮಾಡಲು ಮುಂದಾಗಿದೆ. ರ್ಯಾಂಡಮ್​​ ಟೆಸ್ಟ್​​ ಮೂಲಕ ಗುಣಮಟ್ಟ ಪರೀಕ್ಷೆ ನಡೆಯಲಿದೆ. ಹಲವು ಮೆಡಿಸಿನ್​​ಗಳಿಗೆ ಪ್ರಿಸ್ಕ್ರಿಪ್ಷನ್ ಅತ್ಯಗತ್ಯ. ಆದರೆ ಆನ್‌ಲೈನ್‌ನಲ್ಲಿ ಔಷಧ ಆರ್ಡರ್ ಮಾಡುವಾಗ ವೈದ್ಯರ ಸಲಹೆ ಮತ್ತು ಪ್ರಿಸ್ಕ್ರಿಪ್ಷನ್ ಪರಿಶೀಲನೆ ಸರಿಯಾಗಿ ನಡೆಯುತ್ತಿಲ್ಲ. ವೈದ್ಯರು ಬರೆದಿರುವ ಔಷಧದ ಬದಲಿಗೆ ಪರ್ಯಾಯ ಬ್ರ್ಯಾಂಡ್ ಅಥವಾ ಬೇರೆ ಔಷಧದ ಸಲಹೆ ನೀಡಲಾಗುತ್ತಿದೆ. ಇದರಿಂದ ರೋಗಿಯ ಚಿಕಿತ್ಸೆಯ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಿದ್ದರೂ ಕೆಲವು ಕಂಪನಿಗಳು ಭಾರಿ ಡಿಸ್ಕೌಂಟ್ ಜಾಹೀರಾತುಗಳ ಮೂಲಕ ಗ್ರಾಹಕರನ್ನು ಸೆಳೆಯುವ ಬಗ್ಗೆ ಕೂಡ ವಿರೋಧ ಕೇಳಿ ಬಂದಿದೆ. ಹೀಗಾಗಿ ಇವುಗಳ ನಿಯಂತ್ರಣಕ್ಕೂ ಎಫ್ ಡಿಎ ಮುಂದಾಗಿದೆ. ಒಟ್ಟಾರೆ ನಕಲಿ ಔಷಧ ಜಾಲವನ್ನು ಹೆಡೆಮುರಿಕಟ್ಟಲು ಎಫ್ ಡಿಎ ಪ್ರಮುಖ ಹೆಜ್ಜೆ ಇಟ್ಟಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular