ಮಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತ ಮಹಿಳೆಯೊಬ್ಬರು ಕೋಪದ ಬರದಲ್ಲಿ ಇಬ್ಬರು ಮಕ್ಕಳನ್ನು ಬಾವಿಗೆ ಎಸೆದ ಘಟನೆ ದಕ್ಶಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ನೆ ಎಂಬಲ್ಲಿ ನಡೆದಿದೆ.
ಪತಿ ಪತ್ನಿ ನಡುವೆ ಫೋನ್ ನಲ್ಲಿ ಆರಂಭವಾದ ಜಗಳ ಈ ದುರಂತಕ್ಕೆ ಕಾರಣವಾಗಿದೆ. ಪರ್ನೆ ನಿವಾಸಿ ಸಿನಾನ್ (32) ಹಾಗೂ ಆತನ ಪತ್ನಿ ನೂರುನ್ನಿಸಾ (28) ಎಂಬವರ ನಡುವೆ ಫೋನ್ ಕರೆಯಲ್ಲಿ ಕೌಟುಂಬಿಕ ಕಲಹ ನಡೆದಿದೆ.
ಕೋಪದಲ್ಲಿ ಫೀನ್ ಕಟ್ ಮಾಡಿದ ನೀರುನ್ನೀಸಾ, ಮನೆಯಲ್ಲಿದ್ದ ತನ್ನ ಮಗು ಹಾಗೂ ಪತಿಯ ತಂಗಿಯ ಮಗು ಇಬ್ಬರನ್ನೂ ಕರೆದುಕೊಂಡು ಹೋಗಿ ಮನೆಯ ಬಳಿಯಿದ್ದ ಬಾವಿಗೆ ಎಸೆದಿದ್ದಾಳೆ. ಇದನ್ನು ಕಂಡ ಸ್ಥಳೀಯರು ತಕ್ಷಣ ಕಾರ್ಯಪ್ರವೃತ್ತರಾಗಿ ಮಕ್ಕಳಿಬ್ಬರನ್ನೂ ಬಾವಿಯಿಂದ ಮೇಲಕೆತ್ತಿದ್ದಾರೆ.
ಆದರೆ ನೀರುನ್ನೀಸಾ ಪತಿಯ ತಂಗಿಯ ಮೂರು ವರ್ಷದ ಮಗು ಸಾವನ್ನಪ್ಪಿದೆ. ಓರ್ವ ಮಗು ಸ್ಥಿತಿ ಗಂಭೀರವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರೆದಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲಿ ಪ್ರಜರಣ ದಾಖಲಾಗಿದ್ದು, ನೀರುನ್ನೀಸಾಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪತಿ-ಪತ್ನಿ ನಡುವಿನ ಕೌಟುಂಬಿಕ ಜಗಳಕ್ಕೆ ಮಗು ಬಲಿಯಾಗಿದೆ.
ಜಮೀನಿನಲ್ಲಿ ಮಹಿಳೆಯ ಬರ್ಬರ ಹತ್ಯೆ: ತಾಯಿಯ ಮೇಲೆ ಕುಳಿತು ಎರಡು ವರ್ಷದ ಕಂದಮ್ಮನ ರೋದನ
ರಾಯಚೂರು: ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಜಮೀನುವೊಂದರಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಆರ್.ಹೆಚ್.ಯಂಪ್ ಹೊರವಲಯದಲ್ಲಿ ನಡೆದಿದೆ.
ಆರ್ಹೆಚ್.ಕ್ಯಾಂಪ್ 4ರ ನಿವಾಸಿ ಸ್ನೇಹಾ (25 ) ಕೊಲೆಯಾದ ಮಹಿಳೆ. ಜಮೀನಿನಲ್ಲಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕಲ್ಲಿನಿಂದ ಜಜ್ಜಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯ ಪಕ್ಕದಲ್ಲೇ ಆಕೆಯ 2 ವರ್ಷದ ಮಗುವನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.
ತಾಯಿಯ ಸ್ಥಿತಿ ಅರಿಯದೇ ಪುಟ್ಟ ಕಂದಮ್ಮ ತಾಯಿ ಎದೆಯ ಮೇಲೆ ಕುಳಿತು ದೋದಿಸುತ್ತಿದ್ದ ದೃಶ್ಯ ಕರುಳು ಹಿಂದುವಂತಿತ್ತಿತ್ತು. ಇದನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ, ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಮಗುವಿನ ತಲೆಗೂ ಸಣ್ಣಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಂಡಿದೆ.
ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಮೃತ ಮಹಿಳೆಯ ಪತಿ ಅಮಿತ್ ಹಾಗೂ ಮೃತಳ ಪ್ರಿಯಕರ ಶುಭಂನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪತಿಯೊಂದಿಗೆ ಜಗಳ ಮಾಡಿಕೊಂಡು 15 ದಿನಗಳ ಹಿಂದೆ ಸ್ನೇಹಾ ತವರು ಮನೆಗೆ ತೆರಳಿದ್ದಳು. ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಣ್ಣನ ಮನೆಯಿಂದ ಹೊರಗಡೆ ಬಂದಿದ್ದಳು ಎಂದು ತಿಳಿದುಬಂದಿದೆ. ಈ ವೇಳೆ ಮಹಿಳೆಯ ಮೇಲೆ ಜಮೀನಿನಲ್ಲಿ ಹಲ್ಲೆ ನಡೆಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಮಹಿಳೆಯ ಪತಿ ಹಾಗೂ ಪ್ರಿಯಕರನ್ನು ವಶಕ್ಕೆ ಪಡೆಯಲಾಗಿದೆ. ತನಿಖ್ಎ ನಡೆಸಲಾಗುತ್ತಿದೆ ಎಂದು ಎಸ್ ಪಿ ಅರುಣಾಂಗ್ಷು ಗಿರಿ ತಿಳಿಸಿದ್ದಾರೆ.

