HomeHealthವಾರಕ್ಕೆ ಎಷ್ಟು ವ್ಯಾಯಾಮ ಮಾಡಬೇಕು?: ಹೃದಯ ಆರೋಗ್ಯವಾಗಿಡಲು ತಜ್ಞ ವೈದ್ಯರು ನೀಡಿದ ಸಲಹೆ ಇಲ್ಲಿದೆ

ವಾರಕ್ಕೆ ಎಷ್ಟು ವ್ಯಾಯಾಮ ಮಾಡಬೇಕು?: ಹೃದಯ ಆರೋಗ್ಯವಾಗಿಡಲು ತಜ್ಞ ವೈದ್ಯರು ನೀಡಿದ ಸಲಹೆ ಇಲ್ಲಿದೆ

ಉತ್ತಮ ಆರೋಗ್ಯ ಮತ್ತು ಶಿಸ್ತಿನ ಜೀವನಶೈಲಿಗೆ ವ್ಯಾಯಾಮ ಅತ್ಯಗತ್ಯ. ಆದರೆ ನಮ್ಮ ಪ್ರಮುಖ ಅಂಗವಾದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ವಾರಕ್ಕೆ ಎಷ್ಟು ಪ್ರಮಾಣದ ವ್ಯಾಯಾಮ ಅಗ್ಯತ್ಯ ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಈ ಕುರಿತು ಕೋಲ್ಕತ್ತಾದ ಬಿಎಮ್ ಬಿರ್ಲಾ ಹಾರ್ಟ್ ಹಾಸ್ಪಿಟಲ್‌ನ ಹಿರಿಯ ಹೃದ್ರೋಗ ತಜ್ಞ ಡಾ. ಸಬ್ಯಾಸಾಚಿ ಪಾಲ್ ಅವರು ಹಂಚಿಕೊಂಡಿರುವ ಮುಖ್ಯ ಮಾಹಿತಿ ಇಲ್ಲಿದೆ.

ಸಾಮಾನ್ಯ ಮತ್ತು ಆರೋಗ್ಯವಂತ ವ್ಯಕ್ತಿಗೆ ವ್ಯಾಯಾಮ ಮಾಡಲು ಯಾವುದೇ ನಿರ್ದಿಷ್ಟ ಗರಿಷ್ಠ ಮಿತಿ ಇಲ್ಲ. ಆದರೆ, ವರ್ಷಗಳಿಂದ ಯಾವುದೇ ದೈಹಿಕ ಶ್ರಮವಿಲ್ಲದೆ ದಿಢೀರನೆ ಕಠಿಣವಾದ ಅಥವಾ ಸುದೀರ್ಘವಾದ ವ್ಯಾಯಾಮಗಳನ್ನು ಮಾಡುವುದು ಹೃದಯ ಮತ್ತು ಸ್ನಾಯುಗಳ ಮೇಲೆ ತೀವ್ರ ಒತ್ತಡ ಹೇರಬಹುದು. ಹೀಗಾಗಿ ವ್ಯಾಯಾಮದ ಪ್ರಮಾಣವನ್ನು ಹಂತ ಹಂತವಾಗಿ ಹೆಚ್ಚಿಸುವುದು ಸೂಕ್ತ.

ಆರೋಗ್ಯವಂತ ಹೃದಯಕ್ಕಾಗಿ ವಾರಕ್ಕೆ ಕನಿಷ್ಠ ೧೫೦ ನಿಮಿಷಗಳ ಕಾಲ ದೈಹಿಕ ಚಟುವಟಿಕೆ ಅಥವಾ ವ್ಯಾಯಾಮ ಮಾಡುವುದು ಅತ್ಯಗತ್ಯ. ಇದನ್ನು ವಾರದ ೫ ದಿನಗಳಿಗೆ ಹಂಚಿಕೊಂಡು, ದಿನಕ್ಕೆ ಸುಮಾರು ೩೦ ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಸೂಕ್ತವಾದ ಗುರಿಯಾಗಿದೆ. ಜಿಮ್‌ಗೆ ತೆರಳಿ ಕಠಿಣ ವ್ಯಾಯಾಮ ಮಾಡುವುದು ಮಾತ್ರವಲ್ಲದೆ ವಾಕಿಂಗ್, ಸೈಕ್ಲಿಂಗ್ ಹಾಗೂ ಈಜುವಿಕೆಯಂತಹ ಚಟುವಟಿಕೆಗಳ ಮೂಲಕವೂ ಹೃದಯದ ಆರೋಗ್ಯವನ್ನು ಅತ್ಯುತ್ತಮವಾಗಿ ಕಾಪಾಡಿಕೊಳ್ಳಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ರಕ್ತದೊತ್ತಡ, ಮಧುಮೇಹ ಅಥವಾ ಹೃದಯಸಂಬಂಧಿ ಕಾಯಿಲೆ ಇರುವವರು ಹಾಗೂ ಹೃದಯಘಾತ ಅಥವಾ ಆಂಜಿಯೋಪ್ಲಾಸ್ಟಿಯಂತಹ ಶಸ್ತ್ರಚಿಕಿತ್ಸೆಗೆ ಒಳಗಾದವರು ಕಠಿಣ ವ್ಯಾಯಾಮಕ್ಕೆ ಇಳಿಯುವ ಮುನ್ನ ವೈದ್ಯರ ಸಲಹೆ ಪಡೆಯುವುದು ಕಡ್ಡಾಯ. ಪ್ರತಿಯೊಬ್ಬರ ವಯಸ್ಸು, ದೇಹದ ಸಾಮರ್ಥ್ಯ ಮತ್ತು ಆರೋಗ್ಯದ ಪರಿಸ್ಥಿತಿಗೆ ಅನುಗುಣವಾಗಿ ವ್ಯಾಯಾಮದ ಪ್ರಮಾಣವನ್ನು ನಿರ್ಧರಿಸುವುದು ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular