HomeKarnatakaಪವಿತ್ರ ಕಾವೇರಿ ತೀರ್ಥೋತ್ಸವಕ್ಕೆ ಮುಹೂರ್ತ ಫಿಕ್ಸ್: ಅ. 17ರಂದು ತೀರ್ಥ ಸ್ವರೂಪಿಣಿಯಾಗಿ ಕಾವೇರಿ ಮಾತೆ ದರ್ಶನ

ಪವಿತ್ರ ಕಾವೇರಿ ತೀರ್ಥೋತ್ಸವಕ್ಕೆ ಮುಹೂರ್ತ ಫಿಕ್ಸ್: ಅ. 17ರಂದು ತೀರ್ಥ ಸ್ವರೂಪಿಣಿಯಾಗಿ ಕಾವೇರಿ ಮಾತೆ ದರ್ಶನ

ಮಡಿಕೇರಿ: ಕೊಡಗು ಜಿಲ್ಲೆ ತಲಕಾವೇರಿಯಲ್ಲಿ ಈ ಬಾರಿಯ ಪವಿತ್ರ ಕಾವೇರಿ ತೀರ್ಥೋತ್ಸವ ಅಕ್ಟೋಬರ್ 17ರಂದು ರಾತ್ರಿ 7.50ಕ್ಕೆ ನಡೆಯಲಿದೆ.

ಶಾಸಕ ಎ.ಎಸ್. ಪೊನ್ನಣ್ಣ ಅಧ್ಯಕ್ಷತೆಯಲ್ಲಿ ಭಾಗಮಂಡಲದಲ್ಲಿ ನಡೆದ ಸಭೆಯಲ್ಲಿ ಕಾವೇರಿ ತುಲಾ ಸಂಕ್ರಮಣ 2026ರ ಜಾತ್ರೆಯ ಪ್ರಯುಕ್ತ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಗಳಲ್ಲಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಪಟ್ಟಿ ಪ್ರಕಟಿಸಲಾಗಿದೆ.

ಸೆಪ್ಟೆಂಬರ್ 27ರಂದು ಬೆಳಗ್ಗೆ 8:45 ಕ್ಕೆ ಭಗಂಡೇಶ್ವರ ದೇವಾಲಯದಲ್ಲಿ ತುಲಾ ಲಗ್ನದಲ್ಲಿ ಪ್ರತ್ಯೇಕ ಅಕ್ಷಿ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 5ರಂದು ಬೆಳಗ್ಗೆ 10:35 ಕ್ಕೆ ವೃಷಭ ಲಗ್ನದಲ್ಲಿ ಆಜ್ಞಾ ಮುಹೂರ್ತ ನೆರವೇರಲಿದೆ. ಅಕ್ಟೋಬರ್ 15ರಂದು ಮಧ್ಯಾಹ್ನ 12:35ಕ್ಕೆ ಧನು ಲಗ್ನದಲ್ಲಿ ಅಕ್ಷಯ ಪಾತ್ರೆ ಕಾರ್ಯಕ್ರಮ, ಅಂದು ಸಂಜೆ 6.03 ನಿಮಿಷಕ್ಕೆ ಮೀನ ಲಗ್ನದಲ್ಲಿ ಕಾಣಿಕೆ ಡಬ್ಬಿಗಳಿಗೆ ಪೂಜೆ, ಅಕ್ಟೋಬರ್ 17ರಂದು ರಾತ್ರಿ 7:50ಕ್ಕೆ ತಲಕಾವೇರಿಯಲ್ಲಿ ಮೇಷ ಲಗ್ನದಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ ನಡೆಯಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರೋಟೀನ್ ಸಮೃದ್ಧ ಆಹಾರ ಅಭಿಯಾನ: ಉತ್ತಮ ಪೋಷಣೆಯೇ ಆರೋಗ್ಯಕರ ಬಾಲ್ಯದ ಅಡಿಪಾಯ

ಮಡಿಕೇರಿ: ಪ್ರೋಟೀನ್ ಸಮೃದ್ಧ ಆಹಾರದ ಮಹತ್ವದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಚೇರಂಬಾಣೆ ವೃತ್ತದಲ್ಲಿ ಪ್ರೋಟೀನ್ ಸಮೃದ್ಧ ಆಹಾರ ಅಭಿಯಾನ ನಡೆಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಸುಮಂಗಲ ಜಿ. ಹಿರೇಮನಿ ಅವರು ಉದ್ಘಾಟಿಸಿ ಮಾತನಾಡಿ, ಸಮರ್ಪಕ ಪೋಷಣೆಯು ಪ್ರಾರಂಭಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣದ ಮೂಲಭೂತ ಅಂಶಗಳಾಗಿವೆ ಎಂದು ತಿಳಿಸಿದರು. ಮಗು ಏನು ತಿನ್ನುತ್ತದೆ ಮತ್ತು ಮಗು ಹೇಗೆ ಕಲಿಯುತ್ತದೆ ಎಂಬುದರ ನಡುವೆ ಅವಿಭಾಜ್ಯ ಸಂಬಂಧವಿದೆ ಎಂದು ಅವರು ಒತ್ತಿ ಹೇಳಿದರು.

ಜೀವನದ ಮೊದಲ ಸಾವಿರ ದಿನಗಳಲ್ಲಿ ಉತ್ತಮ ಪೋಷಣೆ ಹಾಗೂ ಸ್ಪಂದನಾಶೀಲ ಆರೈಕೆ ಮಗುವಿನ ಮೆದುಳಿನ ಸಮರ್ಪಕ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದೆ. ಈ ನಿರ್ಣಾಯಕ ಅವಧಿಯಲ್ಲಿ ಉಂಟಾಗುವ ಅಪೌಷ್ಟಿಕತೆಯು ಮಕ್ಕಳ ಜ್ಞಾನಾತ್ಮಕ, ಚಲನಾತ್ಮಕ, ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು. ಆದ್ದರಿಂದ ಗರ್ಭಾವಸ್ಥೆಯಿಂದಲೇ ತಾಯಿ ಮತ್ತು ಮಗುವಿನ ಪೌಷ್ಟಿಕ ಆಹಾರ ಹಾಗೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ ಎಂದು ಅವರು ತಿಳಿಸಿದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಮಾತನಾಡಿ, ಜೀವನದ ಮೊದಲ ಸಾವಿರ ದಿನಗಳು ಹಾಗೂ ಪ್ರಾರಂಭಿಕ ಬಾಲ್ಯದಲ್ಲಿ ಮಕ್ಕಳ ಬೆಳವಣಿಗೆ ಮತ್ತು ಪೋಷಣೆಯ ಕುರಿತು ಸಮನ್ವಯ, ಸಮಾಲೋಚನೆ ಹಾಗೂ ಅನುಸರಣೆಗಾಗಿ ಗೃಹ ಭೇಟಿಗಳನ್ನು ನಡೆಸಲಾಗುತ್ತಿರುವ ಕುರಿತು ಮಾಹಿತಿ ನೀಡಿದರು. ಮಕ್ಕಳ ಪ್ರಾರಂಭಿಕ ಉತ್ತೇಜನದ ಜೊತೆಗೆ ಸಮರ್ಪಕ ಪೋಷಣೆಯ ಮಹತ್ವದ ಕುರಿತು ಪೋಷಕರಲ್ಲಿ ಅರಿವು ಮೂಡಿಸುವ ಅಗತ್ಯವನ್ನು ವಿವರಿಸಿದರು.

ಕಾರ್ಯಕ್ರಮದ ಅಂಗವಾಗಿ ಸ್ಥಳೀಯವಾಗಿ ಲಭ್ಯವಿರುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಬಳಸಿ ವಿವಿಧ ಆಹಾರಗಳ ತಯಾರಿಕೆಯ ಪ್ರತ್ಯಕ್ಷತೆ ನಡೆಸಿ, ಕಡಿಮೆ ವೆಚ್ಚದಲ್ಲಿ ಪೌಷ್ಟಿಕ ಹಾಗೂ ಪ್ರೋಟೀನ್‍ಯುಕ್ತ ಆಹಾರವನ್ನು ತಯಾರಿಸುವ ಕುರಿತು ಅರಿವು ಮೂಡಿಸಲಾಯಿತು. ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ಪ್ರೋಟೀನ್ ಹಾಗೂ ಪೌಷ್ಟಿಕಾಂಶಗಳ ಮಹತ್ವವನ್ನು ಮನೆಮನೆಗೂ ತಲುಪಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಈ ಅಭಿಯಾನದ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ಪ್ರೋಟೀನ್ ಸಮೃದ್ಧ ಆಹಾರಗಳ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ವಿವಿಧ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಅಲ್ಲದೆ, ಅಭಿಯಾನದ ಅಂಗವಾಗಿ ಪ್ರೋಟೀನ್ ಸಮೃದ್ಧ ಆಹಾರ ತಯಾರಿಕಾ ಸ್ಪರ್ಧೆಯನ್ನೂ ಆಯೋಜಿಸಲಾಯಿತು.

ಜಿಲ್ಲಾ ಸಂಯೋಜಕರಾದ ನವ್ಯ ಹಾಗೂ ಕಾವ್ಯ ಅವರು ‘ಬೇಟಿ ಬಚಾವೋ, ಬೇಟಿ ಪಢಾವೋ’ ಹಾಗೂ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗರ್ಭಿಣಿಯರು, ಬಾಣಂತಿಯರು, ಫಲಾನುಭವಿಗಳು ಹಾಗೂ ಚೇರಂಬಾಣೆ ವೃತ್ತದ 31 ಗ್ರಾಮಗಳ ಅಂಗನವಾಡಿ ಸಹಾಯಕಿಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular