ಊಟಕ್ಕೆ ಹೊಸ ರುಚಿ ನೀಡುವ ತಯಾರಿ ಮಾಡಿದ್ರೆ ಕರ್ಜೂರದ ಚಟ್ನಿ ಮಾಡಿ ನೋಡಿ.
ಕರ್ಜೂರದ ಚಟ್ನಿಗೆ ಬೇಕಾಗುವ ಪದಾರ್ಥ:
ಕರ್ಜೂರ -10-12 (100-125 ಗ್ರಾಂ)
ಸಕ್ಕರೆ -100 ಗ್ರಾಂ
ಒಣ ದ್ರಾಕ್ಷಿ – 2 ದೊಡ್ಡ ಚಮಚ
ಶುಂಠಿ ಪುಡಿ – 2 ಚಮಚ
ಇಂಗು -1 ಚಿಟಕಿ
ಕೆಂಪು ಮೆಣಸಿನ ಪುಡಿ – 1/2 ಚಮಚ
ಗರಂ ಮಸಾಲೆ – 1/2 ಚಮಚ
ಜೀರಿಗೆ ಪುಡಿ – 1 ಚಮಚ
ಕಪ್ಪು ಉಪ್ಪು – 3/4 ಚಮಚ
ಉಪ್ಪು – 1/2 ಚಮಚ
ಮಾವಿನ ಪುಡಿ – 2 ಚಮಚ
ಕರ್ಜೂರದ ಚಟ್ನಿ ಮಾಡುವ ವಿಧಾನ :
ಕರ್ಜೂರದ ಬೀಜ ತೆಗೆದು ಕರ್ಜೂರವನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಇಲ್ಲವಾದ್ರೆ ನುಣ್ಣಗೆ ರುಬ್ಬಿಕೊಳ್ಳಿ. ಇನ್ನೊಂದು ಪಾತ್ರೆಗೆ ಸಕ್ಕರೆ ಹಾಕಿ. ಅದಕ್ಕೆ ಅರ್ಧ ಕಪ್ ನೀರನ್ನು ಹಾಕಿ ಬಿಸಿ ಮಾಡಿ.
ಸಕ್ಕರೆ ಕರಗುವವರೆಗೆ ಕೈ ಆಡಿಸಿ. ನಂತ್ರ ಕತ್ತರಿಸಿಕೊಂಡ ಕರ್ಜೂರ, ಒಣ ದ್ರಾಕ್ಷಿ, ಶುಂಠಿ ಪುಡಿ, ಇಂಗು, ಕೆಂಪು ಮೆಣಸಿನ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಕಪ್ಪು ಉಪ್ಪು, ಉಪ್ಪು, ಮಾವಿನ ಪುಡಿ ಹಾಕಿ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ಬೇಯಿಸಿ. ಮಿಶ್ರಣ ಸ್ವಲ್ಪ ದಪ್ಪಗಾದ ಮೇಲೆ ಗ್ಯಾಸ್ ಆರಿಸಿ.