HomeIndiaಕಾನೂನು ಪದವೀಧರರಿಗೆ ಸುಪ್ರೀಂಕೋರ್ಟ್ ಗುಡ್ ನ್ಯೂಸ್: ಜಡ್ಜ್ ಪರೀಕ್ಷೆಗೆ 3 ವರ್ಷ ಬದಲು 1 ವರ್ಷ...

ಕಾನೂನು ಪದವೀಧರರಿಗೆ ಸುಪ್ರೀಂಕೋರ್ಟ್ ಗುಡ್ ನ್ಯೂಸ್: ಜಡ್ಜ್ ಪರೀಕ್ಷೆಗೆ 3 ವರ್ಷ ಬದಲು 1 ವರ್ಷ ಪ್ರಾಕ್ಟೀಸ್ ಸಾಕು!

ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಿಂದ ಜ್ಯುಡಿಷಿಯಲ್ ಸರ್ವೀಸಸ್ ಪರೀಕ್ಷೆಗೆ ಸಿದ್ಧರಾಗುತ್ತಿರುವ ಕಾನೂನು ಪದವೀಧರರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಇನ್ನು ಮುಂದೆ ಜಡ್ಜ್ ಪರೀಕ್ಷೆ ಬರೆಯಲು ಮೂರು ವರ್ಷಗಳ ವಕೀಲ ವೃತ್ತಿ ಅನುಭವ ಕಡ್ಡಾಯವಲ್ಲ; ಕನಿಷ್ಠ ಒಂದು ವರ್ಷ ಪ್ರಾಕ್ಟೀಸ್ ಅನುಭವ ಇದ್ದರೆ ಸಾಕು ಎಂದು ಸುಪ್ರೀಂ ಕೋರ್ಟ್ ಬಹುಮತದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಹೌದು. ಜ್ಯುಡಿಷಿಯಲ್ ಸರ್ವೀಸಸ್ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳ ಅರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯವಾದಿಯಾಗಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು ಎಂಬ ನಿಯಮವನ್ನು ಸಡಿಲಿಸಿರುವ ನ್ಯಾಯಪೀಠ, ಇನ್ನು ಮುಂದೆ ಒಂದು ವರ್ಷ ಪ್ರಾಕ್ಟೀಸ್ ಅನುಭವ ಇದ್ದರೆ ಸಾಕು ಎಂದು ಸ್ಪಷ್ಟಪಡಿಸಿದೆ.

ಈ ಕುರಿತು ಶುಕ್ರವಾರ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಎ.ಜಿ. ಮಸೀಹ್ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವು 2:1 ಬಹುಮತದ ತೀರ್ಪು ನೀಡಿದೆ. ಆದರೆ ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರು ಈ ತೀರ್ಪಿಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2025ರ ಮೇ ತಿಂಗಳಲ್ಲಿ ನೀಡಿದ್ದ ತೀರ್ಪಿನ ಪ್ರಕಾರ, ಜಡ್ಜ್ ಪರೀಕ್ಷೆ ಬರೆಯಲು ಲಾ ಪದವೀಧರರು ಕನಿಷ್ಠ ಮೂರು ವರ್ಷಗಳ ಕಾಲ ವಕೀಲರಾಗಿ ಪ್ರಾಕ್ಟೀಸ್ ಮಾಡಿರುವುದು ಕಡ್ಡಾಯವಾಗಿತ್ತು. ಇದೀಗ ಈ ನಿಯಮ ಬದಲಾಗಿದ್ದು, ಒಂದು ವರ್ಷ ಪ್ರಾಕ್ಟೀಸ್ ಅನುಭವ ಹೊಂದಿರುವ ಅಭ್ಯರ್ಥಿಗಳು ಪ್ರಿಲಿಮಿನರಿ ಹಂತದ ಜ್ಯುಡಿಷಿಯಲ್ ಸರ್ವೀಸಸ್ ಪರೀಕ್ಷೆಗೆ ಹಾಜರಾಗಬಹುದು.

ಆದರೆ ಪ್ರವೇಶ ಅರ್ಹತೆಯನ್ನು ಸಡಿಲಿಸಿದರೂ, ಆಯ್ಕೆಯಾದ ಅಭ್ಯರ್ಥಿಗಳಿಗೆ ಕಠಿಣ ತರಬೇತಿ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಪರೀಕ್ಷೆಯಲ್ಲಿ ಆಯ್ಕೆಯಾದವರು ಎರಡು ವರ್ಷಗಳ ಕಾಲ ವಿಶೇಷ ತರಬೇತಿ ಮತ್ತು ಮೇಲ್ವಿಚಾರಣೆಗೆ ಒಳಗಾಗಬೇಕಾಗುತ್ತದೆ.

ಇದರ ಭಾಗವಾಗಿ ಮೊದಲ ಒಂದು ವರ್ಷ ಜ್ಯುಡಿಷಿಯಲ್ ಅಕಾಡೆಮಿಯಲ್ಲಿ ಸಮಗ್ರ ತರಬೇತಿ ನೀಡಲಾಗುತ್ತದೆ. ನಂತರದ ಒಂದು ವರ್ಷ ಕ್ಲರ್ಕ್ಶಿಪ್ ಮಾಡಬೇಕು. ಮೊದಲ ಆರು ತಿಂಗಳು ಪ್ರಿನ್ಸಿಪಲ್ ಡಿಸ್ಟ್ರಿಕ್ಟ್/ಜಿಲ್ಲಾ ಸೆಷನ್ಸ್ ಜಡ್ಜ್ ಅವರ ಬಳಿ ಹಾಗೂ ಮುಂದಿನ ಆರು ತಿಂಗಳು ಹೈಕೋರ್ಟ್ ನ್ಯಾಯಮೂರ್ತಿಯವರ ಬಳಿ ಕೆಲಸ ಮಾಡಬೇಕು.

ಈ ಎರಡು ವರ್ಷಗಳ ಅವಧಿಯಲ್ಲಿ ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿದ ಬಳಿಕವೇ ಅಂತಿಮ ನೇಮಕಾತಿಯನ್ನು ಖಚಿತಪಡಿಸಲಾಗುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular