ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ಜೋಗ ಜಲಪಾತಕ್ಕೆ ವಾರಾಂತ್ಯದ ಟೂರ್ ಪ್ಯಾಕೇಜ್ ಆಯೋಜಿಸಿದೆ.
ಬೆಂಗಳೂರು, ದಾವಣಗೆರೆ, ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಹಾಸನ, ಶಿವಮೊಗ್ಗ ಮತ್ತು ತುಮಕೂರಿನಿಂದ ಜೋಗ ಫಾಲ್ಸ್ ಗೆ ವಾರಾಂತ್ಯದ ಟೂರ್ ಪ್ಯಾಕೇಜ್ ಆಯೋಜಿಸಲಾಗಿದೆ. ಬೆಂಗಳೂರಿನಿಂದ ಎಸಿ ರಹಿತ ಸ್ಲೀಪರ್ ಬಸ್, ದಾವಣಗೆರೆ ಮತ್ತು ಹಾಸನದಿಂದ ಅಶ್ವಮೇಧ ಬಸ್ ಗಳು ಮತ್ತು ಉಳಿದೆಡೆಯಿಂದ ಸಾಮಾನ್ಯ ಸಾರಿಗೆ ಬಸ್ ಗಳು ಜೋಗ ಜಲಪಾತಕ್ಕೆ ಸಂಚರಿಸುತ್ತವೆ.
ಬೆಂಗಳೂರು ಮತ್ತು ತುಮಕೂರಿನಿಂದ ಶುಕ್ರವಾರ ಮತ್ತು ಶನಿವಾರ ಬಸ್ ಗಳು ಹೊರಡಲಿದ್ದು, ಉಳಿದೆಡೆಗಳಿಂದ ಶನಿವಾರ ಮತ್ತು ಭಾನುವಾರ ಸಂಚರಿಸಲಿವೆ. ಆಸಕ್ತರು ಟಿಕೆಟ್ ಕಾಯ್ದಿರಿಸಲು www.ksrtc.in ಮತ್ತು www.ksrrc.karnataka.gov.in ವೆಬ್ಸೈಟ್ ಸಂಪರ್ಕಿಸಬಹುದಾಗಿದೆ.

