HomeEntertainmentಮನೆಯಲ್ಲಿ ಹೆಂಡತಿ ಇದ್ದಾಳೆ ಇದೇನು ನಟಿಯರ ಜತೆ ನಿನ್ನ ಚಕ್ಕಂದ?; ಯಶ್ 'ಟಾಕ್ಸಿಕ್' ಅವತಾರ ಕಂಡು...

ಮನೆಯಲ್ಲಿ ಹೆಂಡತಿ ಇದ್ದಾಳೆ ಇದೇನು ನಟಿಯರ ಜತೆ ನಿನ್ನ ಚಕ್ಕಂದ?; ಯಶ್ ‘ಟಾಕ್ಸಿಕ್’ ಅವತಾರ ಕಂಡು ಕಿಡಿಕಾರಿದ ಕನ್ನಡದ ನಟಿ; ವಿಡಿಯೊ

ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹು ನಿರೀಕ್ಷಿತ ಚಿತ್ರ ಟಾಕ್ಸಿಕ್ ಇದೇ 26ರಂದು ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಹಲವು ಬಾರಿ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದ ಚಿತ್ರತಂಡ ಈ ಬಾರಿ ಖಡಾಖಂಡಿತವಾಗಿ ಬಿಡುಗಡೆ ಮಾಡಲಿದ್ದೇವೆ ಎಂದು ಇತ್ತೀಚೆಗಷ್ಟೆ ಬೆಂಗಳೂರಿನ ಎಎಂಬಿ ಸಿನಿಮಾಸ್‌ನಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಸಿ ಘೋಷಣೆ ಮಾಡಿತು.

ಟ್ರೈಲರ್ ಬಿಡುಗಡೆಯಾಗಿ ಸದ್ಯ ಕೋಟ್ಯಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಎಲ್ಲೆಡೆ ಇದರ ಕುರಿತ ಚರ್ಚೆಗಳೇ ನಡೆಯುತ್ತಿವೆ. ಟಾಕ್ಸಿಕ್ ಕಥೆ ಏನು, ರಾಯಾ ಹಾಗೂ ನಟಿಯರ ನಡುವಿನ ಸಂಬಂಧವೇನು ಎಂಬುದನ್ನು ಡಿಕೋಡ್ ಮಾಡುವಲ್ಲಿ ಸಿನಿ ಪ್ರಿಯರು ನಿರತರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಚಿತ್ರದಲ್ಲಿ ಮಹಿಳೆಯರನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎಂಬ ಆರೋಪ ಮೊದಲ ಟೀಸರ್‌ನಿಂದಲೂ ಕೇಳಿಬರುತ್ತಿದ್ದು, ಈ ಟ್ರೈಲರ್‌ ಬಿಡುಗಡೆಯ ಬಳಿಕವೂ ಅಂತಹದ್ದೇ ಕಾಮೆಂಟ್‌ಗಳು ಕೇಳಿಬಂದಿವೆ.

ಸದ್ಯ ಈ ಕುರಿತು ಕನ್ನಡದ ನಟಿ ರಿಷಿಕಾ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊವಂದನ್ನು ಹಂಚಿಕೊಂಡಿದ್ದು, ಟಾಕ್ಸಿಕ್ ಎಂದು ಉಲ್ಲೇಖಿಸಿ ಯಶ್‌ಗೆ ನೇರವಾಗಿ ಟಾಂಗ್ ಕೊಟ್ಟಿದ್ದಾರೆ. ಟ್ರೈಲರ್‌ನಲ್ಲಿ ಯಶ್ ‘ಹೆಣ್ಣುಮಕ್ಕಳಿಗೆ ಅಂದ ಇದ್ರೆ ಚಂದ. ಅದನ್ನೇ ಆಯುಧ ಮಾಡಿಕೊಂಡ್ರೆ ಹೆಂಗೆ ಕಂದ’ ಎಂಬ ಡೈಲಾಗ್ ಹೇಳಿದ್ದು, ಇದನ್ನೇ ಬಳಸಿರುವ ರಿಷಿಕಾ ಸಿಂಗ್ ಟಾಂಗ್ ಕೊಡುವ ಯತ್ನ ಮಾಡಿದ್ದಾರೆ.

‘ಹೆಣ್ಣು ಮಕ್ಕಳಿಗೆ ಅಂದ ಇದ್ರೆ ಚಂದ. ಗಂಡುಮಕ್ಕಳಿಗೆ ಮರ್ಯಾದೆ ಇದ್ರೆ ಚಂದ ಕಂದ. ಇದೇನ್ ಪ್ಯಾಂಟ್ ಬಿಚ್ಕೊಂಡ್ ಆಗ್ಬಿಟ್ಟಿದ್ದೀಯ ನೀನ್ ಮಂಗ. ಮನೆಯಲ್ಲಿ ಹೆಂಡತಿ ಇದ್ದಾಳೆ ಇದೇನ್ ಹಿರೋಯಿನ್‌ಗಳ ಜತೆ ನಿನ್ನ ಚಕ್ಕಂದ ಕಂದ? ನಮಗೆ ಇಷ್ಟ ಆಗಲಿಲ್ಲ ನಿನ್ನ ಹೊಸ ದಂಧಾ. ನಿನಗೂ ಹೆಣ್ಣುಮಗಳಿದ್ದಾಳೆ, ಡೈಲಾಗ್ ಹೊಡೆಯೋಕೆ ಬಂದಾ? ಹೆಣ್ಣುಮಕ್ಕಳಿಗೆ ಮರ್ಯಾದೆ ಇರಲಿ, ಇಲ್ಲ ಅಂದ್ರೆ ಜಾಗ ಖಾಲಿ ಮಾಡಿಸ್ಸಿಡ್ತೀವಿ ಕರ್ನಾಟಕದಿಂದ. ಐ ಯಾಮ್ ಟಾಕ್ಸಿಕ್’ ಎಂದು ರಿಷಿಕಾ ಸಿಂಗ್ ಈ ವಿಡಿಯೊದಲ್ಲಿ ಯಶ್‌ ಟಾಕ್ಸಿಕ್ ಅವತಾರದ ವಿರುದ್ಧ ಮಾತನಾಡಿದ್ದಾರೆ.

ಇನ್ನು ಈ ವಿಡಿಯೊ ಕುರಿತು ಮಿಶ್ರ ಪ್ರತಿಕ್ರಿಯೆ ಬರುತ್ತಿದ್ದು, ಬಹುತೇಕರು ನಿರ್ದೇಶನ ಮಾಡಿರುವುದೇ ಓರ್ವ ಮಹಿಳೆ, ಹೀಗಾಗಿ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರನ್ನು ಪ್ರಶ್ನಿಸದೇ ಯಶ್‌ರನ್ನು ಎಳೆದುತಂದಿರುವುದು ವೈರಲ್ ಆಗುವ ಸಲುವಾಗಿ ಎಂದು ಕಾಲೆಳೆದಿದ್ದಾರೆ.

https://x.com/SriKrishna1436/status/2086818077883199844?s=20

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular