HomeLatest Newsಕೆಲಸ ಬಿಟ್ಟ ತಕ್ಷಣ PF ಹಣ ತೆಗೆಯಬೇಡಿ ! ನಿಮಗೇ ನಷ್ಟ.. ಈ ಪ್ರಮುಖ ಪ್ರಯೋಜನಗಳು...

ಕೆಲಸ ಬಿಟ್ಟ ತಕ್ಷಣ PF ಹಣ ತೆಗೆಯಬೇಡಿ ! ನಿಮಗೇ ನಷ್ಟ.. ಈ ಪ್ರಮುಖ ಪ್ರಯೋಜನಗಳು ಕೈ ತಪ್ಪಬಹುದು

ಉದ್ಯೋಗ ತೊರೆದ ತಕ್ಷಣವೇ ಹಲವರು ತಮ್ಮ PF ಖಾತೆಯಲ್ಲಿರುವ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳುತ್ತಾರೆ. ಆರ್ಥಿಕ ಅಗತ್ಯಗಳ ಕಾರಣದಿಂದಾಗಿ ಕೂಡಲೇ ಹಣವನ್ನು ಹಿಂಪಡೆಯುತ್ತಾರೆ. ಮೂರು ವರ್ಷಗಳ ಕಾಲ PF ಖಾತೆಗೆ ಯಾವುದೇ ಕೊಡುಗೆ (ಕಾಂಟ್ರಿಬ್ಯೂಷನ್) ಜಮೆಯಾಗದಿದ್ದರೆ ಖಾತೆ ಸ್ವಯಂಚಾಲಿತವಾಗಿ ನಿಷ್ಕ್ರಿಯವಾಗುತ್ತದೆ ಎಂಬ ಕಾರಣಕ್ಕೆ ಹಲವರು ಹಣವನ್ನು ತಕ್ಷಣವೇ ವಿತ್‌ಡ್ರಾ ಮಾಡಿಕೊಳ್ಳುತ್ತಾರೆ.

ಆದರೆ, ಹೀಗೆ ಮಾಡುವುದರಿಂದ ಹಲವು ಪ್ರಯೋಜನಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಹೇಳುತ್ತಾರೆ. ಹಣವನ್ನು PF ಖಾತೆಯಲ್ಲೇ ಉಳಿಸಿಕೊಳ್ಳುವುದರಿಂದ ಹಲವು ಲಾಭಗಳು ದೊರೆಯುತ್ತವೆ.

ಮೂರು ವರ್ಷಗಳವರೆಗೆ ಬಡ್ಡಿ ಲಾಭ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

PF ಖಾತೆ ನಿಷ್ಕ್ರಿಯವಾದ ನಂತರವೂ ನಿರ್ದಿಷ್ಟ ಅವಧಿವರೆಗೆ ಬಡ್ಡಿ ಜಮೆಯಾಗುವ ಅವಕಾಶವಿದೆ. ನಿವೃತ್ತಿಯಾದ ನಂತರ ಅಥವಾ ಉದ್ಯೋಗ ತೊರೆದ ಬಳಿಕ ಕೂಡಲೇ PF ಹಣವನ್ನು ವಿತ್‌ಡ್ರಾ ಮಾಡದೇ ಇದ್ದರೆ ಬಡ್ಡಿ ಲಾಭ ಪಡೆಯಬಹುದು.

ನೀವು ಉದ್ಯೋಗ ತೊರೆದ ತಕ್ಷಣವೇ ಹಣವನ್ನು ವಿತ್‌ಡ್ರಾ ಮಾಡಿಕೊಂಡರೆ, ಈ ಬಡ್ಡಿ ಲಾಭವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಪ್ರಸ್ತುತ PF ಮೇಲಿನ ಬಡ್ಡಿದರ ಶೇ.8.25ರಷ್ಟಿದೆ. ಇದು ಹಲವು ಬ್ಯಾಂಕ್‌ಗಳ ಉಳಿತಾಯ ಖಾತೆಗಳ ಬಡ್ಡಿದರಕ್ಕಿಂತ ಹೆಚ್ಚಿನದಾಗಿದೆ. ಹೀಗಾಗಿ ತಕ್ಷಣ ಹಣದ ಅಗತ್ಯವಿಲ್ಲದಿದ್ದರೆ PF ಖಾತೆಯಲ್ಲೇ ಹಣವನ್ನು ಉಳಿಸಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿಯಾಗಬಹುದು. ನಿಮ್ಮ ಹಣ ಸುರಕ್ಷಿತವಾಗಿರುವುದರ ಜೊತೆಗೆ ಬಡ್ಡಿಯನ್ನೂ ಗಳಿಸುತ್ತಿರುತ್ತದೆ. ಚಕ್ರಬಡ್ಡಿಯ ಪ್ರಯೋಜನವೂ ಸಿಗುತ್ತದೆ.

ಮೂರು ವರ್ಷಗಳ ನಂತರ ಏನಾಗುತ್ತದೆ?

ನಿವೃತ್ತಿಯಾದ ನಂತರ ಅಥವಾ ಉದ್ಯೋಗ ತೊರೆದ ಬಳಿಕ ಮೂರು ವರ್ಷಗಳವರೆಗೆ ಖಾತೆಯಲ್ಲಿರುವ ಹಣವನ್ನು ವಿತ್‌ಡ್ರಾ ಮಾಡದೇ ಇದ್ದರೆ, ಖಾತೆ ನಿಷ್ಕ್ರಿಯವಾಗುತ್ತದೆ. ಖಾತೆ ನಿಷ್ಕ್ರಿಯವಾದ ಬಳಿಕ ಬಡ್ಡಿ ಜಮೆಯಾಗುವುದೂ ನಿಲ್ಲುತ್ತದೆ.ಆದ್ದರಿಂದ ತಕ್ಷಣವೇ ಹಣವನ್ನು ವಿತ್‌ಡ್ರಾ ಮಾಡುವ ಅಗತ್ಯವಿಲ್ಲ. ಲಭ್ಯವಿರುವ ಅವಧಿಯವರೆಗೆ PF ಬ್ಯಾಲೆನ್ಸ್ ಅನ್ನು ಹಾಗೆಯೇ ಉಳಿಸಿಕೊಂಡು, ಭವಿಷ್ಯದ ಖರ್ಚುಗಳಿಗೆ ಯೋಜನೆ ರೂಪಿಸಬಹುದು.

ಹಲವರು PF ಹಣವನ್ನು ವಿತ್‌ಡ್ರಾ ಮಾಡಿಕೊಂಡು ಉಳಿತಾಯ ಖಾತೆಯಲ್ಲಿ ಇಡುತ್ತಾರೆ. ಸಾಮಾನ್ಯವಾಗಿ ಉಳಿತಾಯ ಖಾತೆಗಳಲ್ಲಿ ಶೇ.3ರಿಂದ 4ರಷ್ಟು ಮಾತ್ರ ಬಡ್ಡಿ ಸಿಗುತ್ತದೆ. ಅದೇ PF ಖಾತೆಯಲ್ಲಿ ಹಣವನ್ನು ಉಳಿಸಿಕೊಂಡರೆ ಶೇ.8ಕ್ಕೂ ಹೆಚ್ಚಿನ ಬಡ್ಡಿ ಲಾಭ ದೊರೆಯಬಹುದು.ಹೀಗಾಗಿ ಉದ್ಯೋಗ ತೊರೆದ ತಕ್ಷಣ PF ಹಣವನ್ನು ವಿತ್‌ಡ್ರಾ ಮಾಡಿಕೊಂಡು ಉಳಿತಾಯ ಖಾತೆಯಲ್ಲಿ ಇಡುವುದರಿಂದ ಹೆಚ್ಚಿನ ಬಡ್ಡಿ ಲಾಭವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ವಿಷಯ ತಿಳಿಯದೆ ಹಲವರು ತಕ್ಷಣವೇ PF ವಿತ್‌ಡ್ರಾ ಮಾಡಲು ಅರ್ಜಿ ಸಲ್ಲಿಸುತ್ತಾರೆ.

PF ಖಾತೆ ನಿಷ್ಕ್ರಿಯವಾದರೂ ಅದನ್ನು ಮತ್ತೆ ಸಕ್ರಿಯಗೊಳಿಸುವ ಅವಕಾಶವಿದೆ. ಆದ್ದರಿಂದ ತಕ್ಷಣವೇ PF ಹಣವನ್ನು ವಿತ್‌ಡ್ರಾ ಮಾಡಿಕೊಳ್ಳುವುದು ಯಾವಾಗಲೂ ಉತ್ತಮ ನಿರ್ಧಾರವಲ್ಲ ಎಂದು ತಜ್ಞರು ಸಲಹೆ ನೀಡುತ್ತಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular