HomeKarnatakaಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋ, ಕಿರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋ, ಕಿರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸುಸಜ್ಜಿತ ‘ಶ್ರೀ ಕಂಠೀರವ ಸ್ಟುಡಿಯೋ’ ಶಾಖೆ ಹಾಗೂ ಕಿರು ಫಿಲ್ಮ್ ಸಿಟಿ(ಸ್ಮಾಲ್ ಫಿಲ್ಮ್ ಸಿಟಿ) ನಿರ್ಮಿಸುವ ಬಹುನಿರೀಕ್ಷಿತ ಯೋಜನೆಯ ಉದ್ದೇಶದಿಂದಾಗಿ ಶುಕ್ರವಾರ ಸ್ಥಳ ಪರಿಶೀಲನೆ ಹಾಗೂ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಲಾಗಿದೆ ಎಂದು ಶ್ರೀ ಕಂಠೀರವ ಸ್ಟುಡಿಯೋ ಸಂಸ್ಥೆಯ ಅಧ್ಯಕ್ಷ ಮಹಬೂಬ್ ಪಾಷ ತಿಳಿಸಿದ್ದಾರೆ.

ಶಿವಮೊಗ್ಗ ತಾಲೂಕಿನ ತ್ಯಾಜುವಳ್ಳಿ ಗ್ರಾಮದ ಸರ್ವೆ ನಂಬರ್ 60 ಮತ್ತು 27 ರಲ್ಲಿರುವ ಜಮೀನಿನ ಜಂಟಿ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ ಜಿ.ಎಸ್., ತಹಶೀಲ್ದಾರ್ ರಾಜೀವ್ ಕುಮಾರ್, ಉಪ ತಹಶೀಲ್ದಾರ್ ಸಂಧ್ಯಾ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ನಿಯೋಗವನ್ನು ಬರಮಾಡಿಕೊಂಡು ಸೂಕ್ತ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.

ಸ್ಥಳ ಪರಿಶೀಲನೆಯ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಶೀಲಿಸಿದ ತ್ಯಾಜುವಳ್ಳಿಯ ಜಮೀನು ಸ್ಟುಡಿಯೋ ಹಾಗೂ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಂಪೂರ್ಣ ಸೂಕ್ತವಾಗಿದ್ದು ಯೋಜನೆಯ ಮುಂದಿನ ಪ್ರಕ್ರಿಯೆಗೆ ಚಾಲನೆ ನೀಡಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫಿಲ್ಮ್ ಸಿಟಿ ಯೋಜನೆ: ಸ್ಟುಡಿಯೋಗಾಗಿ ಕನಿಷ್ಠ 25 ಎಕರೆ ಜಮೀನಿನ ಬೇಡಿಕೆ ಇಡಲಾಗಿದೆ. ಗರಿಷ್ಠ ಜಮೀನು ಲಭ್ಯವಾದರೆ ಸ್ಟುಡಿಯೋ ಜೊತೆಗೆ ಒಂದು ಬೃಹತ್ ‘ಕಿರು ಫಿಲ್ಮ್ ಸಿಟಿ’ ನಿರ್ಮಿಸಲು ಉದ್ದೇಶಿಸಲಾಗಿದೆ.

ಸ್ಥಳೀಯರಿಗೆ ಉದ್ಯೋಗಾವಕಾಶ: ಇದರಿಂದ ಮಲೆನಾಡು ಭಾಗದ ಸ್ಥಳೀಯ ಕಲಾವಿದರು ಮತ್ತು ತಂತ್ರಜ್ಞರಿಗೆ ವ್ಯಾಪಕ ಉದ್ಯೋಗ ಲಭಿಸಲಿದೆ. ಚಿತ್ರೀಕರಣಕ್ಕಾಗಿ ಪ್ರತಿಯೊಬ್ಬರೂ ಬೆಂಗಳೂರಿಗೆ ಅಲೆಯುವುದು ತಪ್ಪಲಿದ್ದು, ಸಮಯ ಹಾಗೂ ವೆಚ್ಚ ಉಳಿತಾಯವಾಗುವುದರ ಜೊತೆಗೆ ಶಿವಮೊಗ್ಗದ ಆರ್ಥಿಕತೆಗೆ ದೊಡ್ಡ ಬಲ ಸಿಗಲಿದೆ.

ತ್ಯಾಜುವಳ್ಳಿಯ ಪ್ರದೇಶವು ಹೊರಾಂಗಣ ಚಿತ್ರೀಕರಣಕ್ಕೆ ನೈಸರ್ಗಿಕ ಸೌಂದರ್ಯ ಹೊಂದಿದ್ದು, ಆಂತರಿಕ (ಇನ್ ಡೋರ್) ಸೆಟ್‌ಗಳನ್ನು ನಿರ್ಮಿಸಿದರೆ ಚಿತ್ರರಂಗಕ್ಕೆ ಒಂದೇ ಸೂರಿನಡಿ ಸಕಲ ಸೌಲಭ್ಯ ದೊರೆಯಲಿದೆ.

ಕಂದಾಯ ಇಲಾಖೆಯು ಶೀಘ್ರದಲ್ಲೇ ಜಮೀನು ಮಂಜೂರಾತಿ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಿದೆ. ತದನಂತರ ಡಿಸಿ ಅವರು ಅಂತಿಮ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿಕೊಡಲಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular