HomeLatest Newsಕಿಯಾರಾ ಅಡ್ವಾಣಿ ಎಂದು ಭಾವಿಸಿ ನೆಟ್ಟಿಗರು ಕನ್ಫ್ಯೂಸ್: ಕನಿಷ್ಕಾ ಕಪೂರ್ ಕೊಟ್ರು ಭರ್ಜರಿ ರಿಯಾಕ್ಷನ್!

ಕಿಯಾರಾ ಅಡ್ವಾಣಿ ಎಂದು ಭಾವಿಸಿ ನೆಟ್ಟಿಗರು ಕನ್ಫ್ಯೂಸ್: ಕನಿಷ್ಕಾ ಕಪೂರ್ ಕೊಟ್ರು ಭರ್ಜರಿ ರಿಯಾಕ್ಷನ್!

ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಹೊಸ ನಟಿಯರಿಗೆ ಹಿರಿಯ ನಟ-ನಟಿಯರ ಹೋಲಿಕೆ ಬರುವುದು ಹೊಸದೇನೂ ಅಲ್ಲ. ಆದರೆ ಬಾಲಿವುಡ್‌ನ ಮುಂಬರುವ ‘ಬಟ್ವಾರಾ 1947’ ಸಿನಿಮಾದ ಪೋಸ್ಟರ್ ಬಿಡುಗಡೆಯಾದಾಗ, ಅದರಲ್ಲಿರುವ ನಟಿ ಕನಿಷ್ಕಾ ಕಪೂರ್ ಅವರನ್ನು ಕಂಡು ಪ್ರೇಕ್ಷಕರು ಅಚ್ಚರಿಗೊಂಡಿದ್ದಾರೆ. ಪ್ರಸಿದ್ಧ ನಟಿ ಕಿಯಾರಾ ಅಡ್ವಾಣಿ ಎಂದೇ ಭಾವಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಸಿದ್ದರು. ಇದೀಗ ಈ ವಿಚಾರದ ಬಗ್ಗೆ ನಟಿ ಕನಿಷ್ಕಾ ಕಪೂರ್ ಸ್ವತಃ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ‘ಬಟ್ವಾರಾ 1947’ ಸಿನಿಮಾದ ಪೋಸ್ಟರ್‌ಗಳು ಬಿಡುಗಡೆಯಾಗಿದ್ದು, ಕರಣ್ ದೇವ್ಲ್ ಜೊತೆಗಿರುವ ಕನಿಷ್ಕಾ ಕಪೂರ್ ಅವರ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೂವಿನ ವಿನ್ಯಾಸದ ಸುಂದರ ಡ್ರೆಸ್, ಸಾದಾ ಮೇಕಪ್ ಮತ್ತು ‘ಶೇರ್ಷಾ’ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದ ಶೈಲಿಯಲ್ಲೇ ಕನಿಷ್ಕಾ ಇರುವುದನ್ನು ನೋಡಿ ನೆಟ್ಟಿಗರು ಕನ್ಫ್ಯೂಸ್ ಆಗಿದ್ದರು. ಕಿಯಾರಾ ಅವರ ಮೇಕಪ್ ಮ್ಯಾನ್ ಕೂಡ ಒಮ್ಮೆ ಇಬ್ಬರ ಹೋಲಿಕೆ ಕಂಡು ಬೆರಗಾಗಿದ್ದನ್ನು ಕನಿಷ್ಕಾ ಸ್ಮರಿಸಿಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕನಿಷ್ಕಾ ಕಪೂರ್, ಜನರು ಪೋಸ್ಟರ್ ನೋಡಿ ಕಿಯಾರಾ ಎಂದು ತಿಳಿದುಕೊಂಡಿದ್ದನ್ನು ನೋಡಿ ನನಗೆ ತುಂಬಾ ನಗು ಬಂತು. ಈ ರೀತಿಯ ಹೋಲಿಕೆಗಳು ನನಗೆ ಹೊಸದೇನೂ ಅಲ್ಲ, ಹಿಂದೆ ‘ಇಮ್ಮಚೂರ್ 2’ ವೆಬ್ ಸರಣಿಯ ಸಮಯದಲ್ಲೂ ‘ಕಬೀರ್ ಸಿಂಗ್’ ಸಿನಿಮಾದ ಕಿಯಾರಾ ಲುಕ್‌ಗೆ ಹೋಲಿಸಿ ಮಾತನಾಡಿದ್ದರು. ಕಿಯಾರಾ ಅತ್ಯಂತ ಸುಂದರ ನಟಿಯಾಗಿದ್ದು, ಅವರೊಂದಿಗೆ ಹೋಲಿಸುವುದರಿಂದ ನನಗೆ ಯಾವುದೇ ಬೇಸರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ‘ಬಟ್ವಾರಾ 1947’ ಸಿನಿಮಾ ಆಗಸ್ಟ್ 14 ರಂದು ಪ್ರದರ್ಶನಕ್ಕೆ ಸಜ್ಜಾಗಿದೆ. ಈ ಚಿತ್ರದಲ್ಲಿ ಸನ್ನಿ ದೇವ್ಲ್, ಪ್ರೀತಿ ಝಿಂಟಾ, ಶಬಾನಾ ಅಜ್ಮಿ, ಅಲಿ ಫಜಲ್ ಸೇರಿದಂತೆ ಪ್ರಮುಖ ತಾರಾಗಣವಿದೆ. ಕಿರುತೆರೆ ಮತ್ತು ಒಟಿಟಿ ಮೂಲಕ ಗುರುತಿಸಿಕೊಂಡಿದ್ದ ಕನಿಷ್ಕಾ ಕಪೂರ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸುತ್ತಿದ್ದು, ಪೋಸ್ಟರ್ ಮೂಲಕವೇ ಭಾರಿ ಸದ್ದು ಮಾಡುತ್ತಿದ್ದಾರೆ.

https://www.instagram.com/p/DbaK9qFgpH_

https://www.instagram.com/p/Dafo8WilBAd

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular