HomeLatest NewsBREAKING: ತ್ರಿಶಾ ಬಗ್ಗೆ ಡಬಲ್ ಮೀನಿಂಗ್ ಹೇಳಿಕೆ; ಮನೆಗೆ ನುಗ್ಗಿ ಉದಯನಿಧಿ ಸ್ಟಾಲಿನ್ ಬಂಧಿಸಿದ ಪೊಲೀಸರು

BREAKING: ತ್ರಿಶಾ ಬಗ್ಗೆ ಡಬಲ್ ಮೀನಿಂಗ್ ಹೇಳಿಕೆ; ಮನೆಗೆ ನುಗ್ಗಿ ಉದಯನಿಧಿ ಸ್ಟಾಲಿನ್ ಬಂಧಿಸಿದ ಪೊಲೀಸರು

ನಟಿ ತ್ರಿಶಾ ಬಗ್ಗೆ ದ್ವಂದ್ವಾರ್ಥ ಬರುವ ಹೇಳಿಕೆ ನೀಡಿದ ಕಾರಣಕ್ಕೆ ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ಮನೆಗೆ ತೆರಳಿ ಬಂಧಿಸಿದ್ದಾರೆ.

ತಂಜಾವೂರಿನಲ್ಲಿ ನಡೆದ ಕಾವೇರಿ ಸಮಸ್ಯೆ ಪ್ರತಿಭಟನೆ ಕಾರ್ಯಕ್ರಮದಲ್ಲಿವಿಜಯ್ ಅವರನ್ನು ಟೀಕಿಸುತ್ತಾ “ನಮ್ಮ ಮುಖ್ಯಮಂತ್ರಿ ಕಾವೇರಿ ನೀರಿನ ಬಗ್ಗೆ ಬಾಯಿ ತೆರೆಯುತ್ತಿಲ್ಲ. ಡಿಎಂಕೆ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೂಡುವುದೇ ಅವರ ಚಿಂತೆ” ಎಂದು ಹೇಳಿದರು.ಈ ವೇಳೆ ಗುಂಪಿನಿಂದ “ತ್ರಿಶಾ… ತ್ರಿಶಾ…” ಎಂದು ಕೂಗಾಟ ಪ್ರಾರಂಭವಾಯಿತು. ಆಗ ಉದಯನಿಧಿ ನಗುತ್ತಾ “ನಮಗೆ ನೀರು ಬರುತ್ತೋ ಇಲ್ವೋ ಅಲ್ಲಿಗೆ ಹೋಗಬೇಕು” ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಯಲ್ಲಿ ದ್ವಂದ್ವಾರ್ಥವಿದೆ, ವಿಜಯ್ ಹಾಗೂ ತ್ರಿಶಾ ನಡುವೆ ಸಂಬಂಧ ಕಲ್ಪಿಸಿ ಕೀಳುಮಟ್ಟದ ಹೇಳಿಕೆ ನೀಡಿ ಓರ್ವ ಮಹಿಳೆ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ದೂರು ದಾಖಲಾದ ಹಿನ್ನೆಲೆಯಲ್ಲಿ ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular