HomeLatest Newsಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡುವ ಮುನ್ನವೇ ಪಾಕಿಸ್ತಾನ ಪರ ಫೀಲ್ಡಿಂಗ್ ಮಾಡಿದ್ದ ಸಚಿನ್ ತೆಂಡೂಲ್ಕರ್:ಆಸಕ್ತಿಕರ ಘಟನೆ...

ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡುವ ಮುನ್ನವೇ ಪಾಕಿಸ್ತಾನ ಪರ ಫೀಲ್ಡಿಂಗ್ ಮಾಡಿದ್ದ ಸಚಿನ್ ತೆಂಡೂಲ್ಕರ್:ಆಸಕ್ತಿಕರ ಘಟನೆ ಇಲ್ಲಿದೆ!

ವಿಶ್ವ ಕ್ರಿಕೆಟ್‌ನ ‘ಮಾಸ್ಟರ್ ಬ್ಲಾಸ್ಟರ್’ ಸಚಿನ್ ತೆಂಡೂಲ್ಕರ್ ಭಾರತ ತಂಡದ ಪರವಾಗಿ ಹಲವು ಐತಿಹಾಸಿಕ ದಾಖಲೆಗಳನ್ನು ಬರೆದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ಅವರು ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡುವ ಎರಡು ವರ್ಷಗಳ ಮುನ್ನವೇ ವೈರಿ ರಾಷ್ಟ್ರ ಪಾಕಿಸ್ತಾನ ತಂಡದ ಪರವಾಗಿ ಫೀಲ್ಡಿಂಗ್ ಮಾಡಿದ್ದರು ಎಂಬ ಅಪರೂಪದ ಹಾಗೂ ಆಸಕ್ತಿಕರ ಸತ್ಯ ಸಂಗತಿ ಬಹುತೇಕರಿಗೆ ತಿಳಿದಿಲ್ಲ.

ಈ ರೋಚಕ ಘಟನೆ ನಡೆದಿದ್ದು 1987ರಲ್ಲಿ. ಆಗ ಸಚಿನ್ ತೆಂಡೂಲ್ಕರ್‌ಗೆ ಕೇವಲ 13 ವರ್ಷ ವಯಸ್ಸು. ಪಾಕಿಸ್ತಾನ ತಂಡ ಭಾರತ ಪ್ರವಾಸದಲ್ಲಿದ್ದಾಗ ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ 40 ಓವರ್‌ಗಳ ಪ್ರದರ್ಶನ ಪಂದ್ಯವೊಂದನ್ನು ಆಯೋಜಿಸಲಾಗಿತ್ತು. ಪಂದ್ಯದ ಲಂಚ್ ವಿರಾಮದ ವೇಳೆಯಲ್ಲಿ ಪಾಕಿಸ್ತಾನ ತಂಡದ ಪ್ರಮುಖ ಆಟಗಾರರಾದ ಜಾವೇದ್ ಮಿಯಾಂದಾದ್ ಮತ್ತು ಅಬ್ದುಲ್ ಖಾದಿರ್ ವಿಶ್ರಾಂತಿಗಾಗಿ ಮೈದಾನದಿಂದ ಹೊರನಡೆದರು.

ಈ ಸಂದರ್ಭದಲ್ಲಿ ಆಟಗಾರರ ಕೊರತೆ ಎದುರಾದಾಗ ಪಾಕಿಸ್ತಾನದ ನಾಯಕ ಇಮ್ರಾನ್ ಖಾನ್, ಸ್ಥಳೀಯ ಆಟಗಾರರನ್ನು ಸಬ್‌ಸ್ಟಿಟ್ಯೂಟ್ ಫೀಲ್ಡರ್‌ಗಳಾಗಿ ನೀಡುವಂತೆ ಆಯೋಜಕರ ಬಳಿ ಮನವಿ ಮಾಡಿದರು. ತಕ್ಷಣವೇ ಉತ್ಸಾಹದಿಂದ ಮೈದಾನಕ್ಕಿಳಿದ ಸಚಿನ್ ತೆಂಡೂಲ್ಕರ್, ಪಾಕಿಸ್ತಾನದ ಹಸಿರು ಜೆರ್ಸಿ ಧರಿಸಿ ಮೈದಾನದಲ್ಲಿ ಫೀಲ್ಡಿಂಗ್ ನಡೆಸಿದರು. ವಿಶೇಷವೆಂದರೆ, ಭಾರತದ ಅಂದಿನ ನಾಯಕ ಕಪಿಲ್ ದೇವ್ ಬಾರಿಸಿದ ಬಾರಿಸಿದ ಹೊಡೆತವೊಂದಕ್ಕೆ ಸಚಿನ್ ತೆಂಡೂಲ್ಕರ್ ಅವರೇ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಕುರಿತು ತಮ್ಮ ಆತ್ಮಕಥೆ ‘ಪ್ಲೇಯಿಂಗ್ ಇಟ್ ಮೈ ವೇ’ ಪುಸ್ತಕದಲ್ಲೂ ಬರೆದುಕೊಂಡಿರುವ ಸಚಿನ್, “ನಾನು ಪಾಕಿಸ್ತಾನ ತಂಡಕ್ಕೆ ಫೀಲ್ಡಿಂಗ್ ಮಾಡಿದ್ದೆ ಎಂಬ ವಿಷಯ ಇಮ್ರಾನ್ ಖಾನ್ ಅವರಿಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ” ಎಂದು ಉಲ್ಲೇಖಿಸಿದ್ದಾರೆ. ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್‌ಗೆ ನಿಲ್ಲಿಸಿದ್ದಕ್ಕಾಗಿ ಅಂದು ಸಚಿನ್ ಕೊಂಚ ಬೇಸರ ಮಾಡಿಕೊಂಡಿದ್ದರು ಎಂದು ಅವರ ಬಾಲ್ಯದ ಗೆಳೆಯ ಮಾರ್ಕಸ್ ಕೌಟೋ ನೆನಪಿಸಿಕೊಂಡಿದ್ದಾರೆ.

ಈ ಪ್ರದರ್ಶನ ಪಂದ್ಯ ನಡೆದ ಸರಿಯಾಗಿ ಎರಡು ವರ್ಷಗಳ ನಂತರ, ಅಂದರೆ 1989ರಲ್ಲಿ ಸಚಿನ್ ತೆಂಡೂಲ್ಕರ್ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಅದೇ ಇಮ್ರಾನ್ ಖಾನ್ ಪಡೆಗೆ ಎದುರಾಳಿಯಾಗಿ ಅಂಗಳಕ್ಕಿಳಿದಿದ್ದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular