HomeLatest Newsನಿಮ್ಮನ್ನು ಬೈದಿದ್ದಕ್ಕೆ ತಪ್ಪಾಯ್ತು ಮೋದಿ ಜೀ ಎಂದು ವಿಡಿಯೊ ಮಾಡಿ ದೇಶವನ್ನೇ ಯಾಮಾರಿಸಿಬಿಟ್ಳು; 15 ವರ್ಷದ...

ನಿಮ್ಮನ್ನು ಬೈದಿದ್ದಕ್ಕೆ ತಪ್ಪಾಯ್ತು ಮೋದಿ ಜೀ ಎಂದು ವಿಡಿಯೊ ಮಾಡಿ ದೇಶವನ್ನೇ ಯಾಮಾರಿಸಿಬಿಟ್ಳು; 15 ವರ್ಷದ ಬಾಲಕಿ ವಿಡಿಯೊ ಕಂಡು ‘ಇದು ಅವಳಲ್ಲ’ ಎಂದು ಮೋದಿ ಅಭಿಮಾನಿಗಳ ಅಳಲು

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್ ಅಕ್ರಮದ ವಿರುದ್ಧದ ಪ್ರತಿಭಟನೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಾಗೂ ವಿವಾದಾತ್ಮಕ ಘೋಷಣೆಗಳನ್ನು ಕೂಗಿದ ಆರೋಪ ಎದುರಿಸುತ್ತಿರುವ 15 ವರ್ಷದ ಬಾಲಕಿ ರುಚಿಕಾ ಸಿಂಗ್ ವಿಡಿಯೋ ಮೂಲಕ ಇಡೀ ದೇಶದ ಬಳಿ ಕ್ಷಮೆಯಾಚಿಸಿದ್ದಳು.

ವೈರಲ್ ಆಗಿರುವ ವಿಡಿಯೋದಲ್ಲಿ ಕೈ ಮುಗಿದು ಮಾತನಾಡಿರುವ ಬಾಲಕಿ, ತಾನು ಕನ್ನಾಟ್ ಪ್ಲೇಸ್‌ಗೆ ಹೋದಾಗ ಸ್ನೇಹಿತರೊಂದಿಗೆ ಪ್ರತಿಭಟನೆಗೆ ತೆರಳಿದ್ದೆಂದೂ, ಸುತ್ತಮುತ್ತಲಿನ ಜನರ ಪ್ರಭಾವಕ್ಕೆ ಒಳಗಾಗಿ ಹಾಗೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಳು. ಇದು ತನ್ನ ಜೀವನದ “ಮೊದಲ ಮತ್ತು ಕೊನೆಯ ತಪ್ಪು” ಎಂದು ಹೇಳಿಕೊಂಡ ಆಕೆ, ತನಗೆ ತಾನೇ ನಾಚಿಕೆಯಾಗುತ್ತಿದೆ ಎಂದು ಹೇಳುತ್ತಾ ಇಡೀ ದೇಶದ ಕ್ಷಮೆ ಕೋರಿದ್ದಳು.

ಈ ವಿಡಿಯೊ ಬಳಿಕ ಮೋದಿ ಸಹ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡು ದಾರಿತಪ್ಪಿದ ಮಕ್ಕಳಿಗೆ ಶಿಕ್ಷೆಯಲ್ಲ, ಮಾರ್ಗದರ್ಶನ ಬೇಕು ಎಂದು ಮಕ್ಕಳನ್ನು ಕ್ಷಮಿಸಿಬಿಡೋಣ ಎಂದಿದ್ದರು. ಅಲ್ಲದೇ ದೆಹಲಿ ಪೊಲೀಸರು ಆ ಬಾಲಕಿ ಮೇಲಿನ ಎಫ್‌ಐಆರ್ ರದ್ದುಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ ಬಾಲಕಿ ವಿಡಿಯೊ ವೈರಲ್ ಆದ ಬಳಿಕ ಮೋದಿ ಅಭಿಮಾನಿಗಳು ಬಾಲಕಿ ಇಡೀ ದೇಶವನ್ನೇ ಯಾಮಾರಿಸಿದ್ದಾಳೆ, ಆ ವಿಡಿಯೊದಲ್ಲಿ ಇರುವುದು ಆಕೆಯಲ್ಲ, ಆಕೆಯ ತಂಗಿ ಎಂದು ಆರೋಪಿಸಿದ್ದಾರೆ.

ಆ ಬಾಲಕಿಯ ಹಿಂದಿನ ವಿಡಿಯೊ ಹಾಗೂ ಕ್ಷಮಾಪಣಾ ವಿಡಿಯೊಗಳನ್ನು ಹೋಲಿಕೆ ಮಾಡಿ ಪೋಸ್ಟ್ ಹಂಚಿಕೊಂಡಿರುವ ಮೋದಿ ಅಭಿಮಾನಿಗಳು ತಲೆಕೂದಲಿನ ಶೈಲಿ, ಹಲ್ಲಿನ ಹೋಲಿಕೆಗಳನ್ನು ಮಾಡಿ ಇದು ರುಚಿಕಾ ಸಿಂಗ್ ಅಲ್ಲ, ಆಕೆಯ ತಂಗಿ ಎಂದು ಬರೆದುಕೊಂಡಿದ್ದಾರೆ.

https://x.com/chixxsays/status/2083789099694281139?s=20

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular