HomeLatest Newsಭಾನುವಾರ ಸಿವಿಲ್ ಪೊಲೀಸ್ ಪರೀಕ್ಷೆ: ಡ್ರೆಸ್‌ಕೋಡ್, ನಿರ್ಬಂಧಗಳ ವಿವರ

ಭಾನುವಾರ ಸಿವಿಲ್ ಪೊಲೀಸ್ ಪರೀಕ್ಷೆ: ಡ್ರೆಸ್‌ಕೋಡ್, ನಿರ್ಬಂಧಗಳ ವಿವರ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಒಟ್ಟು 3,991 ಸಿವಿಲ್ ಪೊಲೀಸ್ ಕಾನ್ಸ್‌ಟೆಬಲ್ ಹುದ್ದೆಗಳ ಭರ್ತಿಗಾಗಿ ಆ. 2ರಂದು (ಭಾನುವಾರ) ರಾಜ್ಯಾದ್ಯಂತ ಲಿಖಿತ ಪರೀಕ್ಷೆ ನಡೆಸಲು ಸರ್ವ ಸನ್ನದ್ಧವಾಗಿದೆ. ಇತ್ತೀಚೆಗೆ ದೇಶಾದ್ಯಂತ ಸದ್ದು ಮಾಡಿದ್ದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ದೆಹಲಿಯಲ್ಲಿ ನಡೆದ ಯುವಜನರ ಹೋರಾಟದ ಬೆನ್ನಲ್ಲೇ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಘಟನೆಗಳಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಈ ಪರೀಕ್ಷೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅಕ್ರಮಗಳಿಗೆ ಅವಕಾಶವೇ ಇಲ್ಲದಂತೆ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದೆ.

ರಾಜ್ಯದ 884 ಕೇಂದ್ರಗಳಲ್ಲಿ ನಡೆಯಲಿರುವ ಈ ಪರೀಕ್ಷೆಯನ್ನು ಒಟ್ಟು 4,54,532 ಅಭ್ಯರ್ಥಿಗಳು ಬರೆಯಲಿದ್ದಾರೆ ಎಂದು KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.

ಹುದ್ದೆಗಳು ಮತ್ತು ಅಭ್ಯರ್ಥಿಗಳ ವಿವರ:

ಅಭ್ಯರ್ಥಿಗಳ ಸಂಖ್ಯೆ: 4,54,532

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪರೀಕ್ಷಾ ಕೇಂದ್ರಗಳು: 884

ಉಳಿಕೆ ಮೂಲ ವೃಂದ: 3,395 ಹುದ್ದೆಗಳು (ಅರ್ಜಿ ಸಲ್ಲಿಸಿದವರು: 3,77,861)

ಕಲ್ಯಾಣ ಕರ್ನಾಟಕ ವೃಂದ: 596 ಹುದ್ದೆಗಳು (ಅರ್ಜಿ ಸಲ್ಲಿಸಿದವರು: 76,684)

ಪರೀಕ್ಷಾ ಸಮಯ:

ರಾಜ್ಯದ ಎಲ್ಲಾ ಅಭ್ಯರ್ಥಿಗಳಿಗೆ (ಸಾಮಾನ್ಯ): ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00

ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ: ಸಂಜೆ 4:00 ರಿಂದ 5:30

ಹೈಟೆಕ್ ತಂತ್ರಜ್ಞಾನ ಮತ್ತು ಕಮಾಂಡ್ ಸೆಂಟರ್ ಕಣ್ಣಾವಲು:

ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹೈಟೆಕ್ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಲಾಗುತ್ತಿದೆ:

ಫೇಸ್ ರೆಕಗ್ನಿಷನ್ (ಮುಖ ಚಹರೆ ಪತ್ತೆ): ಅಭ್ಯರ್ಥಿಗಳನ್ನು ಮುಖ ಚಹರೆ ತಂತ್ರಜ್ಞಾನದ ಮೂಲಕ ತಪಾಸಣೆ ನಡೆಸಿ ಕೊಠಡಿಯೊಳಗೆ ಪ್ರವೇಶ ನೀಡಲಾಗುತ್ತದೆ.

ಸಿಸಿಟಿವಿ & ಜಾಮರ್: ಪರೀಕ್ಷಾ ಕೇಂದ್ರಗಳಲ್ಲಿ ಬ್ಲೂಟೂತ್, ಮೊಬೈಲ್ ಸೇರಿ ಎಲೆಕ್ಟ್ರಾನಿಕ್ ಸಾಧನಗಳನ್ನು ನಿರ್ಬಂಧಿಸಲು ಜಾಮರ್ ಅಳವಡಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಯಾ ಜಿಲ್ಲಾ ಪೊಲೀಸರು ನಿರ್ವಹಿಸಲಿದ್ದಾರೆ.

ವೆಬ್‌ಕಾಸ್ಟಿಂಗ್ & ಕಮಾಂಡ್ ಸೆಂಟರ್: KEA ಕಚೇರಿಯ ಕಮಾಂಡ್ ಸೆಂಟರ್‌ನಿಂದ ನೇರ ವೆಬ್‌ಕಾಸ್ಟಿಂಗ್ ಮೂಲಕ ನಿಗಾ ವಹಿಸಲಾಗುತ್ತದೆ. ಪರೀಕ್ಷೆಯ ಒಟ್ಟಾರೆ ಉಸ್ತುವಾರಿಯನ್ನು ಜಿಲ್ಲಾಧಿಕಾರಿಗಳೇ ವಹಿಸಿಕೊಂಡಿದ್ದಾರೆ.

ವಿಕೇಂದ್ರೀಕೃತ OMR ಸ್ಕ್ಯಾನಿಂಗ್: ಇದೇ ಮೊದಲ ಬಾರಿಗೆ ಪರೀಕ್ಷೆ ಮುಗಿದ ತಕ್ಷಣ ಬೆಂಗಳೂರು ಮಾತ್ರವಲ್ಲದೆ ಕಲಬುರಗಿ, ಹುಬ್ಬಳ್ಳಿ, ಮೈಸೂರು, ದಾವಣಗೆರೆ, ವಿಜಯಪುರ ಮತ್ತು ರಾಯಚೂರಿನಲ್ಲಿ OMR ಪ್ರತಿಯನ್ನು ಸ್ಕ್ಯಾನ್ ಮಾಡಿ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ.

ವಸ್ತ್ರಸಂಹಿತೆ ಮತ್ತು ನಿಷೇಧಿತ ವಸ್ತುಗಳು:

ಧರಿಸಲು ಅವಕಾಶವಿಲ್ಲದ್ದು: ಕಿವಿ, ತಲೆ ಮತ್ತು ಮುಖ ಮುಚ್ಚುವ ಉಡುಪು, ಉದ್ದ ತೋಳಿನ ಶರ್ಟ್, ಜೀನ್ಸ್, ಶೂ, ಬೂಟ್ಸ್, ಕ್ಯಾಪ್, ಎತ್ತರದ ಹಿಮ್ಮಡಿಯ ಸ್ಯಾಂಡಲ್ಸ್, ಮೂಗುತಿ ಮತ್ತು ಮಂಗಳಸೂತ್ರ ಹೊರತುಪಡಿಸಿ ಇತರ ಯಾವುದೇ ಲೋಹದ ಆಭರಣಗಳು.

ಧರಿಸಲು ಅವಕಾಶವಿರುವುದು (ತಪಾಸಣೆಗೆ ಒಳಪಟ್ಟು): ಜನಿವಾರ, ಶಿವದಾರ, ಉಡದಾರ, ತಾಯತ, ರುದ್ರಾಕ್ಷಿ, ಧಾರ್ಮಿಕ ದಾರಗಳು, ಮಾಂಗಲ್ಯ ಸರ, ಕೈಬಳೆ, ಮೂಗುತಿ, ಕಾಲುಂಗುರ, ಕುಂಕುಮ, ಹಣೆಬೊಟ್ಟು.

ಸಂಪೂರ್ಣ ನಿಷೇಧ: ಮೊಬೈಲ್, ಸ್ಮಾರ್ಟ್‌ವಾಚ್, ವಾಚ್, ಬ್ಲೂಟೂತ್, ಇಯರ್‌ಫೋನ್, ಮೈಕ್ರೋಚಿಪ್, ಎಲೆಕ್ಟ್ರಾನಿಕ್ ಪೆನ್, ಪರ್ಸ್, ಬ್ಯಾಗ್, ಪಠ್ಯ ಸಾಮಗ್ರಿ, ನೀರಿನ ಬಾಟಲ್.

ವಿಶೇಷ ಸೂಚನೆಗಳು:

ಧಾರ್ಮಿಕ ಉಡುಪು & ಶ್ರವಣ ಸಾಧನ ಬಳಕೆಗೆ ಷರತ್ತು: ಧಾರ್ಮಿಕ ಉಡುಪು ಧರಿಸುವವರು ಹಾಗೂ ವಿಶೇಷ ಶ್ರವಣ ಸಾಧನ ಬಳಸುವವರು (UDID ಕಾರ್ಡ್ ಮತ್ತು ವೈದ್ಯಕೀಯ ಪ್ರಮಾಣಪತ್ರದೊಂದಿಗೆ) ಪರೀಕ್ಷೆ ಆರಂಭಕ್ಕೂ 2 ರಿಂದ 2.5 ಗಂಟೆ ಮುಂಚಿತವಾಗಿ ಕೇಂದ್ರಕ್ಕೆ ಆಗಮಿಸಿ ತಪಾಸಣೆಗೆ ಒಳಪಡಬೇಕು.

ಪ್ರವೇಶಪತ್ರ ಮರು-ಡೌನ್‌ಲೋಡ್: ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳು ಕೇಂದ್ರಗಳ ಗೊಂದಲ ನಿವಾರಣೆಗೆ KEA ವೆಬ್‌ಸೈಟ್‌ನಿಂದ ಮತ್ತೊಮ್ಮೆ ಹಾಲಿಕೆಟ್ (Hall Ticket) ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ.

144 ತಡೆ ಮತ್ತು ಜೆರಾಕ್ಸ್ ಅಂಗಡಿ ಬಂದ್: ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಪರೀಕ್ಷೆ ಮುಗಿಯುವವರೆಗೆ ಝೆರಾಕ್ಸ್, ಸೈಬರ್ ಕೆಫೆ ಮತ್ತು ಕೋಚಿಂಗ್ ಸೆಂಟರ್‌ಗಳನ್ನು ಕಡ್ಡಾಯವಾಗಿ ಮುಚ್ಚಲು ಆದೇಶಿಸಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular