HomeLatest Newsಭಾರತೀಯ ನೌಕಾಪಡೆಗೆ ಭಾರೀ ಬಲ..! ಜರ್ಮನಿಯೊಂದಿಗೆ ₹90 ಸಾವಿರ ಕೋಟಿ ಜಲಾಂತರ್ಗಾಮಿ ಒಪ್ಪಂದ ಅಂತಿಮ ಹಂತಕ್ಕೆ

ಭಾರತೀಯ ನೌಕಾಪಡೆಗೆ ಭಾರೀ ಬಲ..! ಜರ್ಮನಿಯೊಂದಿಗೆ ₹90 ಸಾವಿರ ಕೋಟಿ ಜಲಾಂತರ್ಗಾಮಿ ಒಪ್ಪಂದ ಅಂತಿಮ ಹಂತಕ್ಕೆ

ನವದೆಹಲಿ: ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತ ಮತ್ತು ಜರ್ಮನಿ ನಡುವಿನ ಮಹತ್ವಾಕಾಂಕ್ಷೆಯ ‘ಪ್ರಾಜೆಕ್ಟ್-75ಐ (Project-75I)’ ಒಪ್ಪಂದ ಅಂತಿಮ ಹಂತ ತಲುಪಿದೆ.

ಹೌದು.ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತ ಮತ್ತು ಜರ್ಮನಿ ನಡುವಿನ ಮಹತ್ವಾಕಾಂಕ್ಷೆಯ ‘ಪ್ರಾಜೆಕ್ಟ್-75ಐ’ ಒಪ್ಪಂದ ಅಂತಿಮ ಹಂತ ತಲುಪಿದೆ. ಸುಮಾರು ₹90 ಸಾವಿರ ಕೋಟಿ (8 ಬಿಲಿಯನ್ ಯೂರೋ) ಮೌಲ್ಯದ ಈ ಒಪ್ಪಂದದಡಿ, ತಂತ್ರಜ್ಞಾನ ವರ್ಗಾವಣೆಯೊಂದಿಗೆ ಭಾರತದಲ್ಲೇ ಆರು ಅತ್ಯಾಧುನಿಕ ಟೈಪ್-214 ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗಲಿದ್ದು, ಇದು ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ.

ಸುಮಾರು ₹90,000 ಕೋಟಿ (8 ಬಿಲಿಯನ್ ಯೂರೋ) ಮೌಲ್ಯದ ಈ ಐತಿಹಾಸಿಕ ಒಪ್ಪಂದಕ್ಕೆ ಶೀಘ್ರದಲ್ಲೇ ಸಹಿ ಹಾಕಲಾಗುವುದು ಎಂದು ಭಾರತದಲ್ಲಿನ ಜರ್ಮನಿಯ ರಾಯಭಾರಿ ಫಿಲಿಪ್ ಆಕರ್‌ಮನ್ ತಿಳಿಸಿದ್ದಾರೆ. ಇಂಡೋ-ಜರ್ಮನ್ ಚೇಂಬರ್ ಆಫ್ ಕಾಮರ್ಸ್ (IGCC) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ಹಂಚಿಕೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಜಲಾಂತರ್ಗಾಮಿ ನಿರ್ಮಾಣ

ಜರ್ಮನಿಯ ಥೈಸೆನ್‌ಕ್ರುಪ್ ಮೆರೈನ್ ಸಿಸ್ಟಮ್ಸ್ (TKMS) ಮತ್ತು ಭಾರತದ ಸರ್ಕಾರಿ ರಕ್ಷಣಾ ಸಂಸ್ಥೆ ಮಜಗಾನ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ (MDL) ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಯಾಗಲಿದೆ.ತಂತ್ರಜ್ಞಾನ ವರ್ಗಾವಣೆ (Technology Transfer) ಮೂಲಕ ಭಾರತದಲ್ಲೇ ಅತ್ಯಾಧುನಿಕ ‘ಟೈಪ್-214’ ಮಾದರಿಯ ಆರು ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತದೆ.

‘ಟೈಪ್-214’ ಜಲಾಂತರ್ಗಾಮಿಯ ಪ್ರಮುಖ ವೈಶಿಷ್ಟ್ಯಗಳು

  • ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ (AIP) ತಂತ್ರಜ್ಞಾನ ಹೊಂದಿದ್ದು, ಮೇಲ್ಮೈಗೆ ಬರದೆ ಸತತ ಮೂರು ವಾರಗಳವರೆಗೆ ನೀರಿನಡಿಯಲ್ಲೇ ಕಾರ್ಯನಿರ್ವಹಿಸಬಹುದು.
  • ಒಟ್ಟು ಕಾರ್ಯಾಚರಣಾ ಅವಧಿ 84 ದಿನಗಳು.
  • ಸುಮಾರು 65 ಮೀಟರ್ ಉದ್ದ ಹೊಂದಿದೆ.
  • ಶತ್ರುಗಳ ಮ್ಯಾಗ್ನೆಟಿಕ್ ಪತ್ತೆ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು HY-100 ಫೆರೋ-ಮ್ಯಾಗ್ನೆಟಿಕ್ ಸ್ಟೀಲ್ ಬಳಸಿ ಪ್ರೆಶರ್ ಹಲ್ ನಿರ್ಮಿಸಲಾಗಿದೆ.
  • ನೀರಿನಡಿ 20 ನಾಟ್ಸ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.
  • ಸಾಮಾನ್ಯವಾಗಿ 250 ಮೀಟರ್‌ಗಿಂತ ಹೆಚ್ಚು ಹಾಗೂ ಗರಿಷ್ಠ 400 ಮೀಟರ್ ಆಳದವರೆಗೆ ಕಾರ್ಯಾಚರಣೆ ನಡೆಸಬಹುದು.

ಶಕ್ತಿಶಾಲಿ ಶಸ್ತ್ರಾಸ್ತ್ರ ವ್ಯವಸ್ಥೆ

  • 8 ಟಾರ್ಪಿಡೊ ಟ್ಯೂಬ್‌ಗಳ ಮೂಲಕ ಹೆವಿ ಟಾರ್ಪಿಡೊಗಳು ಹಾಗೂ ಸಬ್-ಹಾರ್ಪೂನ್ ಆಂಟಿ-ಶಿಪ್ ಕ್ಷಿಪಣಿಗಳನ್ನು ಉಡಾಯಿಸಬಹುದು.
  • ಅತ್ಯಾಧುನಿಕ ORCCA Combat Management System ಅಳವಡಿಸಲಾಗಿದೆ.
  • ಶಬ್ದ ಮತ್ತು ಮ್ಯಾಗ್ನೆಟಿಕ್ ಗುರುತುಗಳನ್ನು ಅತ್ಯಂತ ಕಡಿಮೆ ಮಾಡುವ ವಿಶೇಷ ವಿನ್ಯಾಸ ಹೊಂದಿದೆ.
  • ಈ ಜಲಾಂತರ್ಗಾಮಿಯಲ್ಲಿ 5 ಅಧಿಕಾರಿಗಳು ಹಾಗೂ 22 ನಾವಿಕರು ಸೇರಿ ಒಟ್ಟು 27 ಸಿಬ್ಬಂದಿ ಕಾರ್ಯನಿರ್ವಹಿಸಬಹುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular