HomeLatest Newsಕಡಿಮೆ ಬೆಲೆಗೆ ಹಳೆಯ ಚಿನ್ನ ಮಾರುವುದಾಗಿ ನಂಬಿಸಿದ ಮಹಿಳೆಯರು, ನಕಲಿ ಬಂಗಾರ ನೀಡಿ ವಂಚನೆ

ಕಡಿಮೆ ಬೆಲೆಗೆ ಹಳೆಯ ಚಿನ್ನ ಮಾರುವುದಾಗಿ ನಂಬಿಸಿದ ಮಹಿಳೆಯರು, ನಕಲಿ ಬಂಗಾರ ನೀಡಿ ವಂಚನೆ

ಶಿವಮೊಗ್ಗ: ಕಡಿಮೆ ಬೆಲೆಗೆ ಹಳೆಯ ಬಂಗಾರ ಮಾರುವುದಾಗಿ ವಂಚಿಸಿದ ಮಹಿಳೆಯರು ನಕಲಿ ಚಿನ್ನ ನೀಡಿ ಅಸಲಿ ಚಿನ್ನವನ್ನು ತೆಗೆದುಕೊಂಡು ಹೋಗಿದ್ದಾರೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆನವೇರಿಯ ಚಿನ್ನದ ಅಂಗಡಿ ಮಾಲೀಕನ ಪತ್ನಿಗೆ ನಂಬಿಸಿದ ಅಪರಿಚಿತ ಮಹಿಳೆಯರು 35 ಗ್ರಾಂ ನಕಲಿ ಚಿನ್ನ ನೀಡಿ 1.60 ಲಕ್ಷ ರೂ. ಮೌಲ್ಯದ 11 ಗ್ರಾಂ ಚಿನ್ನ ಪಡೆದು ವಂಚಿಸಿದ್ದಾರೆ. ಆನವೇರಿಯ ಪ್ರಕಾಶ್ ಜುವೆಲರ್ಸ್ ಮಾಲೀಕ ರಾಘವೇಂದ್ರ ಎಂ. ಶೇಟ್ ಅವರ ಪತ್ನಿ ಶೋಭಾ ಅವರು ಅಂಗಡಿಯಲ್ಲಿದ್ದಾಗ ಅಲ್ಲಿಗೆ ಬಂದಿದ್ದ ಮಹಿಳೆ ತನ್ನ ಬಳಿ ಇದ್ದ ಚಿನ್ನದ ಹಳೆಯ ಬಳೆ ಎಂದು ನಂಬಿಸಿ ನಕಲಿ ಬಳೆ ನೀಡಿ ಓಲೆ, ಜುಮ್ಕಿ ಸೇರಿದಂತೆ ವಿವಿಧ ಆಭರಣ ಪಡೆದುಕೊಂಡಿದ್ದಾಳೆ. ನಂತರ ಇನ್ನಿಬ್ಬರು ಮಹಿಳೆಯರನ್ನು ಅಂಗಡಿಗೆ ಕರೆತಂದು ಹಳೆಯ ಚಿನ್ನದ ಗುಂಡು ಎಂದು ನಕಲಿ ಚಿನ್ನ ನೀಡಿ ಎರಡು ಉಂಗುರ ಪಡೆದುಕೊಂಡು ಪರಾರಿಯಾಗಿದ್ದಾರೆ.

ಸಂಜೆ ಅಂಗಡಿಗೆ ಬಂದ ಮಾಲೀಕ ರಾಘವೇಂದ್ರ ಅವರು ಬಂಗಾರದ ಗುಂಡುಗಳನ್ನು ಪುಡಿ ಮಾಡಿ ಪರಿಶೀಲಿಸಿದಾಗ ನಕಲಿ ಚಿನ್ನ ಎಂದು ಗೊತ್ತಾಗಿದೆ. ಬಳಿಕ ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular