HomeEntertainment"ಶಾರೀರಿಕವಾಗಿ ಅತ್ಯಂತ ಕಠಿಣ ಹಂತ": ಶಸ್ತ್ರಚಿಕಿತ್ಸೆಯ ಬಗ್ಗೆ ಅಮಿತಾಭ್ ಬಚ್ಚನ್ ಭಾವುಕ ಪೋಸ್ಟ್

“ಶಾರೀರಿಕವಾಗಿ ಅತ್ಯಂತ ಕಠಿಣ ಹಂತ”: ಶಸ್ತ್ರಚಿಕಿತ್ಸೆಯ ಬಗ್ಗೆ ಅಮಿತಾಭ್ ಬಚ್ಚನ್ ಭಾವುಕ ಪೋಸ್ಟ್

ಮುಂಬೈ: ಬಾಲಿವುಡ್‌ನ ಮಹಾ ನಾಯಕ ಅಮಿತಾಭ್ ಬಚ್ಚನ್ (83) ವಯಸ್ಸಾಗುತ್ತಿದ್ದರೂ ವಿಶ್ರಾಂತಿ ಪಡೆಯದೇ ನಿರಂತರವಾಗಿ ಸಿನಿಮಾ ಕೃಷಿಯಲ್ಲಿ ತೊಡಗಿಸಿಕೊಂಡಿರುವವರು. ಆದರೆ, ಇತ್ತೀಚೆಗೆ ಅವರು ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಹಂಚಿಕೊಂಡಿರುವ ಭಾವುಕ ಪೋಸ್ಟ್‌ವೊಂದು ದೇಶಾದ್ಯಂತ ಇರುವ ಅವರ ಕೋಟ್ಯಂತರ ಅಭಿಮಾನಿಗಳಲ್ಲಿ ತೀವ್ರ ಆತಂಕ ಮತ್ತು ಕುತೂಹಲವನ್ನು ಹುಟ್ಟುಹಾಕಿದೆ.

ಬ್ಲಾಗ್‌ನಲ್ಲಿ ಅವರು ಆಸ್ಪತ್ರೆ ವಾಸ, ಶಸ್ತ್ರಚಿಕಿತ್ಸೆ ಐಸಿಯು (ICU) ಹಾಗೂ ಮನೆಗೆ ಮರಳಿದ ನಂತರದ ಚೇತರಿಕೆಯ ಹಂತದ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಆದರೆ, ಈ ಸಾಲುಗಳು ತಮ್ಮ ಪ್ರಸ್ತುತ ವೈಯಕ್ತಿಕ ಆರೋಗ್ಯ ಸ್ಥಿತಿಯ ಬಗ್ಗೆಯೋ ಅಥವಾ ಜೀವನದ ಅನುಭವಗಳ ಆಧಾರದ ಸಾಮಾನ್ಯ ವಿಚಾರವೋ ಎಂಬುದನ್ನು ಬಿಗ್ ಬಿ ಎಲ್ಲೂ ಸ್ಪಷ್ಟಪಡಿಸಿಲ್ಲ.

ಬ್ಲಾಗ್‌ನಲ್ಲಿ ಅಮಿತಾಭ್ ಬರೆದ ಭಾವುಕ ಸಾಲುಗಳು:

ಚಿಕಿತ್ಸೆ ಪಡೆಯುವುದಕ್ಕಿಂತಲೂ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ ನಂತರ ಚೇತರಿಸಿಕೊಳ್ಳುವುದು ಅತ್ಯಂತ ಕಠಿಣವಾದ ಹಂತ ಎಂಬುದನ್ನು ಅಮಿತಾಭ್ ಮಾರ್ಮಿಕವಾಗಿ ವಿವರಿಸಿದ್ದಾರೆ:

ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮುಗಿಸಿ, ಐಸಿಯುನಲ್ಲಿ ಪರಿಣಿತ ವೈದ್ಯರು ಹಾಗೂ ಸಿಬ್ಬಂದಿಯ ಆರೈಕೆಯಲ್ಲಿದ್ದು, ನಂತರ ಡಿಸ್ಚಾರ್ಜ್ ಆಗಿ ಮನೆಗೆ ಮರಳುವುದು ಇದೆಯಲ್ಲ ಈ ಮನೆಗೆ ಮರಳುವ ಅವಧಿಯೇ ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಪ್ರಾಯೋಗಿಕವಾಗಿ ಅತ್ಯಂತ ಕಷ್ಟದ ಹಂತ.

“ನೀವು ಒಬ್ಬ ಪೂಜನೀಯ ಚಾಂಪಿಯನ್ ಆಗಿದ್ದು, ಹಠಾತ್ತನೆ ಒಂದು ದಿನ ಸೋಲು ನಿಮ್ಮನ್ನು ದಿಟ್ಟಿಸಿ ನೋಡಿದಾಗ ಅದು ನಿಮ್ಮ ಜೀವನದ ಅತ್ಯಂತ ಸವಾಲಿನ ಘಟ್ಟವಾಗಿರುತ್ತದೆ. ಕೆಲವರು ಅದನ್ನು ಧೈರ್ಯವಾಗಿ ಎದುರಿಸುತ್ತಾರೆ, ಇನ್ನು ಕೆಲವರು ಶರಣಾಗುತ್ತಾರೆ. ಯಾರು ಹೋರಾಡಿ ಧೈರ್ಯ ತಳೆಯುತ್ತಾರೋ ಅವರು ಎಂದಿಗೂ ಚಾಂಪಿಯನ್ ಆಗಿಯೇ ಉಳಿಯುತ್ತಾರೆ. ಉಳಿದವರು ಹಳೆಯ ನೆನಪುಗಳಲ್ಲೇ ಬದುಕುತ್ತಾರೆ. ಇವೆರಡೂ ಅವರವರ ವೈಯಕ್ತಿಕ ಆಯ್ಕೆ ಅಷ್ಟೇ…”

ಎಕ್ಸ್ ಖಾತೆಯಲ್ಲಿ ನಿಗೂಢ ಪೋಸ್ಟ್: ಗೊಂದಲದಲ್ಲಿ ಅಭಿಮಾನಿಗಳು

ಬ್ಲಾಗ್ ಪೋಸ್ಟ್ ವೈರಲ್ ಆಗಿ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದ ಬೆನ್ನಲ್ಲೇ, ಅಮಿತಾಭ್ ಬಚ್ಚನ್ ತಮ್ಮ X (ಟ್ವಿಟರ್) ಖಾತೆಯಲ್ಲಿ ಮತ್ತೊಂದು ಸಾಲಿನ ನಿಗೂಢ ಪೋಸ್ಟ್ ಹಂಚಿಕೊಂಡಿದ್ದಾರೆ:

ಆಟ ಮುಗಿದಿದೆ ಆದರೆ ಕೆಲಸ ಇನ್ನೂ ಮುಂದುವರಿಯುತ್ತಿದೆ.

ಈ ಸಾಲುಗಳ ಅರ್ಥವೇನು ಎಂಬುದು ಸ್ಪಷ್ಟವಾಗದ ಕಾರಣ ಅಭಿಮಾನಿಗಳಲ್ಲಿ ಗೊಂದಲ ಮತ್ತು ಕಾಳಜಿ ಮತ್ತಷ್ಟು ಹೆಚ್ಚಾಗಿದೆ.

ಮೇ ತಿಂಗಳಿನಲ್ಲೂ ಹರಡಿತ್ತು ವದಂತಿ:

ಕಳೆದ ಮೇ ತಿಂಗಳಿನಲ್ಲೂ ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿದ್ದವು. ಆದರೆ ನಂತರ ಅವರು ನಾನಾವತಿ ಆಸ್ಪತ್ರೆಗೆ ತೆರಳಿದ್ದು ಕೇವಲ ತಮ್ಮ ಮಾಸಿಕ ರೆಗ್ಯುಲರ್ ಹೆಲ್ತ್ ಚೆಕಪ್ ಗಾಗಿ ಎಂಬುದು ತಿಳಿದುಬಂದಿತ್ತು.

ಪ್ರಸ್ತುತ, ಕಲ್ಕಿ 2898 AD ಚಿತ್ರದ ಭರ್ಜರಿ ಯಶಸ್ಸಿನ ನಂತರ ಬಿಗ್‌ ಬಿ, ಅದರ ಮುಂದಿನ ಭಾಗ (Sequel) ಹಾಗೂ ತಮ್ಮ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್‌ಪತಿ (KBC) ಹೊಸ ಸೀಸನ್‌ನ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ನಡುವೆ ಬಂದಿರುವ ಈ ಬ್ಲಾಗ್ ಪೋಸ್ಟ್ ಬಿಗ್ ಬಿ ಆರೋಗ್ಯದ ಸುತ್ತ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular