ಬೆಂಗಳೂರು: ನನ್ನನ್ನು ರಾಜಕೀಯವಾಗಿ ಮುಗಿಸಲು ಕೆಲವರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಸಚಿವ ಸಂಪುಟ ವಿಸ್ತರಣೆ ವಿಚಾರವನ್ನು ಸಿಎಂ ಅವರೇ ಹೇಳಬೇಕು. 140 ಶಾಸಕರಿದ್ದಾರೆ. ಅವರಲ್ಲಿ ಯಾರಿಗೆ ಅಂತ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದರು.
ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಬೇಕು. ರಾಜ್ಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ರಾಜ್ಯಕ್ಕೆ ಬಂದು ಅಭಿಯಾನದಲ್ಲಿ ಭಾಗವಹಿಸುವಂತೆ ರಾಹುಲ್ ಗಾಂಧಿಗೆ ಮನವಿ ಮಾಡಿದ್ದೇವೆ. ಅವರು ಸದ್ಯದಲ್ಲೇ ತಿಳಿಸುತ್ತಾರೆ ಎಂದು ತಿಳಿಸಿದರು.
ಕೋಟಾ ಎಜುಕೇಶನ್ ಹಬ್ ಅಂತೇವೆ. ಸರಣಿ ಆತ್ಮಹತ್ಯೆಗಳ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಛಾತ್ರೋಂಕಿ ಗೂಂಜ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ದೇಶದಲ್ಲಿ 152 ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳು ನಡೆದಿವೆ. ಸಾಮಾನ್ಯ ವಿದ್ಯಾರ್ಥಿಗಳ ಭವಿಷ್ಯ ಆಂತಕದಲ್ಲಿದೆ. ಬಿಜೆಪಿ ಸರ್ಕಾರ ಇರುವ ಕಡೆಯೇ ಇದೆಲ್ಲ ಆಗುತ್ತಿವೆ. ಇದರ ಫಲಾನುಭವಿಗಳು ಬಿಜೆಪಿ ನಾಯಕರ ಮಕ್ಕಳೇ. ರಾಜಸ್ತಾನ, ಗುಜರಾತ್ ಎಲ್ಲೆಡೆ ಆಗಿದೆ. ಪೊಲೀಸರು ವಶಕ್ಕೆ ಪಡೆದಿರುವುದು ಬಿಜೆಪಿಯವರ ಮಕ್ಕಳನ್ನೇ ಎಂದು ಟೀಕಿಸಿದರು.
ಭಾರತದ ಶಿಕ್ಷಣ ವ್ಯವಸ್ಥೆ ಉತ್ತಮವಿತ್ತು. 550 ಯುನಿವರ್ಸಿಟಿಗಳನ್ನು ನೆಹರು ತಂದರು. ಅವೆಲ್ಲ ನೆಹರು ದೂರದೃಷ್ಟಿಯಿಂದ ಬಂದಿದ್ದು. ವಿದ್ಯಾರ್ಥಿಗಳ ಭವಿಷ್ಯ ಕಟ್ಟುವ ಕೆಲಸ ಮಾಡಿದ್ದರು. ಇವತ್ತು ಶಿಕ್ಷಣ ವ್ಯವಸ್ಥೆ ಮೇಲೆ ದಾಳಿಯಾಗಿದೆ ಎಂದರು.
ಚಾಯ್ ಪೇ ಚರ್ಚಾ ಅಂತ ಪ್ರಧಾನಿ ಹೇಳುತ್ತಾರೆ. ಅವರು ಒಂದು ಡಿಗ್ರಿ ಮಾಡಿಲ್ಲ. ಪ್ರಧಾನಿ ಫೇಕ್ ಸರ್ಟಿಫಿಕೇಟ್ ಇಟ್ಟುಕೊಂಡವರು. ಇಂಥವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?. 10 ವರ್ಷದಿಂದ ಎಷ್ಟು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ?. ಇದರ ಮೇಲೆ ಎಷ್ಟು ತನಿಖೆಗಳಾಗಿವೆ?. ಪ್ರಶ್ನೆ ಸೋರಿಕೆ ಮಾಡಿದವರಿಗೆ ರಕ್ಷಣೆ ಯಾರು ಕೊಡುತ್ತಿರುವುದು ಎಂದು ಪ್ರಶ್ನಿಸಿದರು.

