HomeLatest Newsಲಿವ್‌-ಇನ್‌ನಲ್ಲಿರುವ ಜೋಡಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು; ಯುಸಿಸಿ ತಜ್ಞರ ಸಮಿತಿ ವರದಿಯ ಪ್ರಮುಖ ಅಂಶ ಇಲ್ಲಿವೆ

ಲಿವ್‌-ಇನ್‌ನಲ್ಲಿರುವ ಜೋಡಿಗಳು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು; ಯುಸಿಸಿ ತಜ್ಞರ ಸಮಿತಿ ವರದಿಯ ಪ್ರಮುಖ ಅಂಶ ಇಲ್ಲಿವೆ

ಭೂಪಾಲ್: ಮಧ್ಯಪ್ರದೇಶ ಸರ್ಕಾರವು ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ ) ಜಾರಿಗೆ ತರಲು ಸಜ್ಜಾಗುತ್ತಿದ್ದು, ಇದಕ್ಕಾಗಿ ರಚಿಸಲಾಗಿದ್ದ ತಜ್ಞರ ಸಮಿತಿಯು ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ಜುಲೈ 20 ರಿಂದ ಆರಂಭವಾಗಲಿರುವ ರಾಜ್ಯ ವಿಧಾನಸಭೆಯ ಮಳೆಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ. ಇದಕ್ಕೂ ಮುನ್ನ ಜುಲೈ 19 ರಂದು ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದ್ದು, ಕರಡಿಗೆ ಅನುಮೋದನೆ ಪಡೆಯುವ ಪ್ರಕ್ರಿಯೆ ನಡೆಯಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಸ್ತಾವಿತ ಮುಖ್ಯಾಂಶಗಳು

1. ಲಿವ್-ಇನ್ ಸಂಬಂಧಗಳ ಕಡ್ಡಾಯ ನೋಂದಣಿ

ಕಡ್ಡಾಯ ನೋಂದಣಿ: ಲಿವ್-ಇನ್ ಸಂಬಂಧದಲ್ಲಿರುವ (ಮದುವೆಯಾಗದೆ ಜೊತೆಯಾಗಿ ವಾಸಿಸುವ) ದಂಪತಿಗಳು ತಮ್ಮ ವ್ಯಾಪ್ತಿಯ ಜಿಲ್ಲಾ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಒಂದು ವೇಳೆ ಲಿವ್-ಇನ್ ಸಂಬಂಧವನ್ನು ಕೊನೆಗೊಳಿಸಬೇಕಾದರೆ, ಅದನ್ನು ಸಹ ಔಪಚಾರಿಕವಾಗಿ ರದ್ದುಗೊಳಿಸುವುದು ಕಡ್ಡಾಯವಾಗಿದೆ.

ಪೋಷಕರಿಗೆ ಮಾಹಿತಿ:

ಲಿವ್-ಇನ್ ಸಂಬಂಧದಲ್ಲಿರುವ ವ್ಯಕ್ತಿಗಳ ಪೋಷಕರಿಗೆ ಅವರ ಸಂಬಂಧದ ಸ್ಥಿತಿಯ ಬಗ್ಗೆ ಅಧಿಕೃತವಾಗಿ ತಿಳಿಸಲಾಗುವುದು. ನಿಯಮವನ್ನು ಉಲ್ಲಂಘಿಸಿ, ನೋಂದಣಿ ಮಾಡಿಕೊಳ್ಳದೆ ಲಿವ್-ಇನ್ ಸಂಬಂಧ ಮುಂದುವರಿಸಿದರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ.

ಪೊಲೀಸ್ ಮತ್ತು ಸಾರ್ವಜನಿಕರ ಪಾತ್ರ

ಸ್ಥಳೀಯ ಪೊಲೀಸ್ ಠಾಣೆಗಳು ತಮ್ಮ ವ್ಯಾಪ್ತಿಯ ಲಿವ್-ಇನ್ ಜೋಡಿಗಳ ದಾಖಲೆಯನ್ನು ನಿರ್ವಹಿಸುತ್ತವೆ. ಅಷ್ಟೇ ಅಲ್ಲದೆ, ನೆರೆಹೊರೆಯವರು ಅಥವಾ ಜಮೀನುದಾರರು (ಮನೆ ಮಾಲೀಕರು) ನೋಂದಾಯಿಸದ ಲಿವ್-ಇನ್ ಜೋಡಿಗಳ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ಲಿವ್-ಇನ್ ಸಂಬಂಧದಲ್ಲಿದ್ದ ಮಹಿಳೆಯನ್ನು ಸಂಗಾತಿಯು ಕೈಬಿಟ್ಟರೆ (ತ್ಯಜಿಸಿದರೆ),ಅವಳಿಗೆ ಕಾನೂನುಬದ್ಧವಾಗಿ ಜೀವನಾಂಶ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.

ತಂದೆಗೂ ಕಾನೂನುಬದ್ಧ ಹಕ್ಕು

ಪ್ರಸ್ತುತ ಕಾನೂನಿನ ಪ್ರಕಾರ ಮೃತ ಪುರುಷನ ಆಸ್ತಿಯು ಹೆಂಡತಿ, ಮಕ್ಕಳು ಮತ್ತು ತಾಯಿಗೆ ಮಾತ್ರ ಸೇರುತ್ತದೆ. ಆದರೆ ಪ್ರಸ್ತಾವಿತ ಯುಸಿಸಿ ಅಡಿಯಲ್ಲಿ ‘ತಂದೆ’ಯನ್ನು ಸಹ ಕಾನೂನುಬದ್ಧ ಉತ್ತರಾಧಿಕಾರಿಯಾಗಿ ಸೇರಿಸಲಾಗುವುದು.ಕಾನೂನಿನ ನಿಬಂಧನೆಗಳಲ್ಲಿ ‘ತಾಯಿ’ ಎಂಬ ಪದದ ಬದಲಿಗೆ ‘ಪೆÇೀಷಕರು’ ಎಂದು ಬದಲಾಯಿಸಲು ಪ್ರಸ್ತಾಪಿಸಲಾಗಿದೆ. ತಾಯಿ ಜೀವಂತವಾಗಿಲ್ಲದ ಸಂದರ್ಭದಲ್ಲೂ ತಂದೆಗೆ ಆಸ್ತಿಯ ಹಕ್ಕು ಸಿಗುವುದನ್ನು ಇದು ಖಚಿತಪಡಿಸುತ್ತದೆ.

3. ಬುಡಕಟ್ಟು ಸಮುದಾಯಗಳಿಗೆ ವಿನಾಯಿತಿ

ಮಧ್ಯಪ್ರದೇಶದ ಒಟ್ಟು ಜನಸಂಖ್ಯೆಯ ಸುಮಾರು ಶೇಕಡಾ 21 ರಷ್ಟಿರುವ ಬುಡಕಟ್ಟು ಜನಸಂಖ್ಯೆಗೆ ಆರಂಭಿಕ ಹಂತದಲ್ಲಿ ಈ ಯುಸಿಸಿ ಅನ್ವಯಿಸುವುದಿಲ್ಲ. ಅವರ ಸಾಂಪ್ರದಾಯಿಕ ಮತ್ತು ಸಾಂಸ್ಕøತಿಕ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಈ ವಿನಾಯಿತಿ ನೀಡಲಾಗಿದೆ.

ಪ್ರಸ್ತುತ ಮದುವೆ, ವಿಚ್ಛೇದನ, ಜೀವನಾಂಶ ಮತ್ತು ಉತ್ತರಾಧಿಕಾರದಂತಹ ವೈಯಕ್ತಿಕ ವಿಷಯಗಳು ಬೇರೆ ಬೇರೆ ಧರ್ಮಗಳ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ನಿಯಂತ್ರಿಸಲ್ಪಡುತ್ತಿವೆ. ಇದಕ್ಕೆ ಮುಕ್ತಿ ಹಾಡಿ, ಎಲ್ಲರಿಗೂ ಸಮಾನವಾದ ಮತ್ತು ಪ್ರಾಯೋಗಿಕವಾದ ಸಾಮಾನ್ಯ ಕಾನೂನು ಚೌಕಟ್ಟನ್ನು ತರುವುದು ಸರ್ಕಾರದ ಉದ್ದೇಶವಾಗಿದೆ.

ಒಂದು ವೇಳೆ ಈ ಮಸೂದೆ ಅಂಗೀಕಾರವಾದರೆ, ಉತ್ತರಾಖಂಡದ ಬೆನ್ನಲ್ಲೇ ರಾಜ್ಯ ಮಟ್ಟದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಿದ ಭಾರತದ ಆಯ್ದ ರಾಜ್ಯಗಳ ಸಾಲಿಗೆ ಮಧ್ಯಪ್ರದೇಶವೂ ಸೇರಲಿದೆ.

ಈ ಕರಡು ಪ್ರತಿಯು ಕೇವಲ ಕೌಟುಂಬಿಕ ಮತ್ತು ನಾಗರಿಕ ಹಕ್ಕುಗಳ ಸುಧಾರಣೆಗೆ ಸೀಮಿತವಾಗಿರದೆ, ಲಿವ್-ಇನ್ ಸಂಬಂಧಗಳ ಮೇಲಿನ ಕಠಿಣ ನಿಯಂತ್ರಣದಿಂದಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಕಾನೂನಾತ್ಮಕ ವಿಶ್ಲೇಷಣೆಗಳಿಗೆ ವೇದಿಕೆ ಕಲ್ಪಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular