HomeLatest Newsಹಣ ನೀಡದೆ ಎಸ್ಕೇಪ್ ಆಗಲು ಯತ್ನಿಸಿದ ಕಾರು ಚಾಲಕ: ಚಲಿಸುವ ಕಾರಿಗೆ ಜೋತುಬಿದ್ದ ಪೆಟ್ರೋಲ್ ಬಂಕ್...

ಹಣ ನೀಡದೆ ಎಸ್ಕೇಪ್ ಆಗಲು ಯತ್ನಿಸಿದ ಕಾರು ಚಾಲಕ: ಚಲಿಸುವ ಕಾರಿಗೆ ಜೋತುಬಿದ್ದ ಪೆಟ್ರೋಲ್ ಬಂಕ್ ಸಿಬ್ಬಂದಿ

ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ತುಂಬಿಸಿಕೊಂಡು ಹಣ ನೀಡದೆ ವಾಹನ ಸವಾರರು ಪರಾರಿಯಾಗುವ ಘಟನೆಗಳು ಆಗಾಗ ವರದಿಯಾಗುತ್ತಿರುತ್ತವೆ. ಆದರೆ ಇಲ್ಲೊಂದು ಕಡೆ ಹಣ ಕೊಡದೆ ತಪ್ಪಿಸಿಕೊಳ್ಳಲು ಯತ್ನಿಸಿದ ಕಾರು ಚಾಲಕನನ್ನು ತಡೆಯಲು ಹೋಗಿ, ಪೆಟ್ರೋಲ್ ಬಂಕ್ ಸಿಬ್ಬಂದಿಯೊಬ್ಬರು ವೇಗವಾಗಿ ಚಲಿಸುತ್ತಿದ್ದ ಕಾರಿನ ಬಾಗಿಲಿಗೇ ಜೋತುಬಿದ್ದ ಭೀಕರ ಘಟನೆ ನಡೆದಿದೆ. ಪ್ರಾಣವನ್ನೇ ಪಣಕ್ಕಿಟ್ಟು ಸಿಬ್ಬಂದಿ ಕಾರಿಗೆ ನೇತಾಡುತ್ತಿರುವ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಕುರುಕ್ಷೇತ್ರ ಜಿಲ್ಲೆಯ ಶಹಾಬಾದ್ ತಾಲೂಕಿನ ಸಕ್ಕರೆ ಕಾರ್ಖಾನೆ ಬಳಿ ಇರುವ ಪೆಟ್ರೋಲ್ ಬಂಕ್ ಒಂದರಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ. ಮಧ್ಯಾಹ್ನ ಸುಮಾರು 3:00 ಗಂಟೆಯ ವೇಳೆಗೆ ಬಿಳಿ ಬಣ್ಣದ ವರ್ನಾ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ತನಗಾಗಿ 3,500 ರೂಪಾಯಿ ಮೌಲ್ಯದ ಡೀಸೆಲ್ ಹಾಕಿಸಿಕೊಂಡಿದ್ದಾನೆ. ಇಂಧನ ತುಂಬಿದ ಬಳಿಕ ಬಂಕ್ ಸಿಬ್ಬಂದಿ ಲಬ್ಬು ಸಿಂಗ್ ಅವರು ಹಣ ಕೇಳಲು ಕಾರಿನ ಕಿಟಕಿಯ ಬಳಿ ಹೋಗಿದ್ದಾರೆ. ಈ ವೇಳೆ ಚಾಲಕನ ಕೈಯಲ್ಲಿ 500 ರೂಪಾಯಿ ಮುಖಬೆಲೆಯ ನೋಟುಗಳಿದ್ದ ಕಾರಣ ಸಿಬ್ಬಂದಿಗೆ ಯಾವುದೇ ಅನುಮಾನ ಬಂದಿಲ್ಲ.

ಆದರೆ ಹಣ ನೀಡುವಂತೆ ಕೈ ಚಾಚುತ್ತಿದ್ದಂತೆಯೇ ಚಾಲಕ ದಿಢೀರನೆ ಕಾರನ್ನು ಸ್ಟಾರ್ಟ್ ಮಾಡಿ ಮುಂದೆ ಚಲಾಯಿಸಿದ್ದಾನೆ. ಇದರಿಂದ ಗಾಬರಿಗೊಂಡ ಲಬ್ಬು ಸಿಂಗ್, ಚಾಲಕ ಹಣ ನೀಡದೆ ಪರಾರಿಯಾಗುತ್ತಿದ್ದಾನೆ ಎಂಬುದನ್ನು ಅರಿತು ತಕ್ಷಣ ಕಾರಿನ ಮುಂಭಾಗದ ಬಾಗಿಲನ್ನು ತೆರೆದು ಒಳಗೆ ಕೂರಲು ಯತ್ನಿಸಿದ್ದಾರೆ. ಆದರೂ ಕಾರನ್ನು ನಿಲ್ಲಿಸದ ಚಾಲಕ ಇವರನ್ನು ಹಾಗೆಯೇ ಎಳೆದುಕೊಂಡು ಲಾಡ್ವಾ ರಸ್ತೆಯ ಕಡೆಗೆ ಅತಿ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರು ವೇಗವಾಗಿ ಚಲಿಸುತ್ತಿದ್ದರೂ ಸಿಬ್ಬಂದಿ ಕಾರಿನ ಬಾಗಿಲನ್ನು ಗಟ್ಟಿಯಾಗಿ ಹಿಡಿದುಕೊಂಡು ನೇತಾಡಿದ್ದಾರೆ. ಈ ವೇಳೆ ಕಾರು ನಿಲ್ಲಿಸುವಂತೆ ಲಬ್ಬು ಸಿಂಗ್ ಪದೇ ಪದೇ ವಿನಂತಿಸಿದರೂ ಚಾಲಕ ಮಾತ್ರ ವೇಗವನ್ನು ಮತ್ತಷ್ಟು ಹೆಚ್ಚಿಸಿದ್ದಾನೆ. ಅಷ್ಟೇ ಅಲ್ಲದೆ, ಗಲಾಟೆ ಮಾಡಿದರೆ ಕಾರು ಪಲ್ಟಿಯಾಗುತ್ತದೆ ಎಂದು ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾನೆ. ಕೊನೆಗೆ ಹಣ ಬೇಡ, ತನ್ನ ಪ್ರಾಣ ಉಳಿಸಿದರೆ ಸಾಕು ಎಂದು ಸಿಬ್ಬಂದಿ ಬೇಡಿಕೊಂಡ ನಂತರ, ಪೆಟ್ರೋಲ್ ಬಂಕ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರ ಸಾಗಿದ ಬಳಿಕ ಚಾಲಕ ಕಾರಿನ ವೇಗವನ್ನು ಕೊಂಚ ಕಡಿಮೆ ಮಾಡಿದ್ದಾನೆ. ಇದೇ ಸಂದರ್ಭವನ್ನು ಬಳಸಿಕೊಂಡು ಸಿಬ್ಬಂದಿ ಚಲಿಸುವ ಕಾರಿನಿಂದಲೇ ಕೆಳಗೆ ಜಿಗಿದಿದ್ದಾರೆ.

ಈ ಭೀಕರ ಘಟನೆಯಲ್ಲಿ ಸಿಬ್ಬಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ವಂಚನೆ ಮಾಡಿದ ಕಾರಿನ ಮುಂಭಾಗದಲ್ಲಾಗಲಿ ಅಥವಾ ಹಿಂಭಾಗದಲ್ಲಾಗಲಿ ಯಾವುದೇ ನಂಬರ್ ಪ್ಲೇಟ್ ಇರಲಿಲ್ಲ ಎಂದು ಸಂತ್ರಸ್ತ ಸಿಬ್ಬಂದಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಬ್ಬು ಸಿಂಗ್ ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ ಆರೋಪಿ ಚಾಲಕನ ಪತ್ತೆ ಇನ್ನು ಆಗಿಲ್ಲ.

Kurukshetra, Haryana🚨⚠️

Fill n Chill at @IndianOilcl

Hyundai Verna filled diesel for Rs. 3500/- & escaped. Verna not serviced, complete black smoke…

4th similar Incident within 1 month!@DriveSmart_IN @dabir @InfraEye @sss3amitg pic.twitter.com/LUUo3zlXJt

— Dave (Road Safety: City & Highways) (@motordave2) July 13, 2026

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular