HomeLatest Newsಚಿತ್ರಪ್ರೇಮಿಗಳಿಗೆ ಗುಡ್ ನ್ಯೂಸ್: ನಾಳೆ ಸಂಜೆ ಅನಾವರಣಗೊಳ್ಳಲಿದೆ 'ಲೈಫ್ ಟುಡೇ' ಸಿನಿಮಾದ ಭರ್ಜರಿ ಟ್ರೈಲರ್

ಚಿತ್ರಪ್ರೇಮಿಗಳಿಗೆ ಗುಡ್ ನ್ಯೂಸ್: ನಾಳೆ ಸಂಜೆ ಅನಾವರಣಗೊಳ್ಳಲಿದೆ ‘ಲೈಫ್ ಟುಡೇ’ ಸಿನಿಮಾದ ಭರ್ಜರಿ ಟ್ರೈಲರ್

ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳು ಸದಾ ಪ್ರೇಕ್ಷಕರ ಗಮನ ಸೆಳೆಯುತ್ತವೆ. ಆ ಸಾಲಿಗೆ ಸೇರಲು ಸಜ್ಜಾಗಿರುವ ಹೊಸ ಚಿತ್ರ ‘ಲೈಫ್ ಟುಡೇ’. ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಇದೀಗ ಸಿನಿಮಾದ ಪ್ರಚಾರ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಲು ಮುಂದಾಗಿದೆ. ಅದರ ಮೊದಲ ಭಾಗವಾಗಿ ನಾಳೆ ಅಂದರೆ ಜುಲೈ 15ರಂದು ಸಂಜೆ 5:00 ಗಂಟೆಗೆ ಚಿತ್ರದ ಅಧಿಕೃತ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ.

ಈ ಚಿತ್ರದಲ್ಲಿ ಕಿರಣ್ ಆದಿತ್ಯ ಮತ್ತು ಲೇಖಾ ಚಂದ್ರ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಇವರಿಗೆ ಸಾಥ್ ನೀಡಲು ಕನ್ನಡ ಚಿತ್ರರಂಗದ ದೊಡ್ಡ ತಾರಾಬಳಗವೇ ಜೊತೆಯಾಗಿದೆ. ಹಾಸ್ಯ ನಟ ತಬಲಾ ನಾಣಿ, ಅಪೂರ್ವಶ್ರೀ, ಸಂಗೀತ, ಕಾಕ್ರೋಚ್ ಸುಧಿ, ಜಗಪ್ಪ, ಕ್ರಿಶ್ವಿ, ಯುಕ್ತಾ, ರಥರ್ವ ಹಾಗೂ ಸಂದೀಪ್ ಮಲಾನಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಬಿಗ್ ಬಜೆಟ್ ಚಿತ್ರವನ್ನು ಕಾಂತ ಕಣ್ಣಲ್ಲಿ ಅವರು ನಿರ್ದೇಶನ ಮಾಡಿದ್ದು, ಇವರ ವಿಭಿನ್ನ ಮೇಕಿಂಗ್ ಶೈಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಮೇಘನಾ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಮೇಘನಾ ಪ್ರದೀಪ್ ಅವರು ಅತ್ಯಂತ ಅದ್ಧೂರಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದ ತಾಂತ್ರಿಕ ವರ್ಗವೂ ಕೂಡ ಅಷ್ಟೇ ಬಲಿಷ್ಠವಾಗಿದೆ. ಸ್ಯಾಂಡಲ್‌ವುಡ್‌ನ ಪ್ರಖ್ಯಾತ ಸಂಗೀತ ನಿರ್ದೇಶಕ ವಿ ಶ್ರೀಧರ್ ಸಂಭ್ರಮ್ ಅವರು ಚಿತ್ರದ ಹಾಡುಗಳಿಗೆ ಹಾಗೂ ಹಿನ್ನೆಲೆ ಸಂಗೀತಕ್ಕೆ ಧ್ವನಿಯಾಗಿದ್ದಾರೆ. ಗುರುಪ್ರಸಾದ್ ಎಂ ಜಿ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ಪ್ರಖ್ಯಾತ ಸಂಕಲನಕಾರ ಕೆ ಎಂ ಪ್ರಕಾಶ್ ಅವರು ಚಿತ್ರದ ಎಡಿಟಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಶಶಾಂಕ್ ಅವರ ಸಂಭಾಷಣೆ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದ್ದು, ವಿನೋದ್ ಮತ್ತು ಅರ್ಜುನ್ ರಾಜ್ ಅವರು ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.

ಭಜರಂಗಿ ಮೋಹನ್ ಅವರ ನೃತ್ಯ ನಿರ್ದೇಶನ, ಕಾಳೇಗೌಡ ಅವರ ವಸ್ತ್ರಾಲಂಕಾರ ಹಾಗೂ ಸೀನು ಅವರ ಕಲಾ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ಸಹ ನಿರ್ದೇಶಕರಾಗಿ ಶಶಿಕಾಂತ್ ಬಿ ಆರ್ ಮತ್ತು ಅಸೋಸಿಯೇಟ್ ನಿರ್ದೇಶಕರಾಗಿ ಸಂತೋಷ್ ಕೆಲಸ ಮಾಡಿದ್ದಾರೆ. ನಾಳೆ ಬಿಡುಗಡೆಯಾಗಲಿರುವ ಟ್ರೈಲರ್ ಮೂಲಕ ಚಿತ್ರದ ಕಥಾಹಂದರ ಏನಿರಬಹುದು ಎಂಬ ಝಲಕ್ ಸಿಗಲಿದ್ದು, ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular