HomeCrimeಮದುವೆಯ ವೇಳೆ ಚಿನ್ನ ಕೊಟ್ಟಿಲ್ಲವೆಂದು ಅತ್ತೆಯನ್ನೇ ಕೊಂದ ಅಳಿಯ

ಮದುವೆಯ ವೇಳೆ ಚಿನ್ನ ಕೊಟ್ಟಿಲ್ಲವೆಂದು ಅತ್ತೆಯನ್ನೇ ಕೊಂದ ಅಳಿಯ

ಬೆಂಗಳೂರು: ಮದುವೆ ಸಮಯದಲ್ಲಿ ಚಿನ್ನ ಕೊಟ್ಟಿರಲಿಲ್ಲವೆಂದು ಜಗಳವಾಡಿದ ಅಳಿಯ ಅತ್ತೆಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ.

ವಿದ್ಯಾರಣ್ಯಪುರದ ಜೆಕೆ ಬಸವಣ್ಣ ನಗರದ ನಿವಾಸಿ ಯಾದಗಿರಿ ಮೂಲದ ರೋಷನಬಿ(45) ಮೃತಪಟ್ಟ ಮಹಿಳೆ. ಆರೋಪಿ ಅಕ್ಬರ್ ಅಲಿಯನ್ನು ಬಂಧಿಸಲಾಗಿದೆ. ಜುಲೈ 10ರಂದು ಮಧ್ಯಾಹ್ನ ವಿದ್ಯಾರಣ್ಯಪುರದ ಅತ್ತೆ ಮನೆಗೆ ಬಂದ ಅಕ್ಬರ್ ಮದುವೆಗೂ ಬಂಗಾರ ಕೊಟ್ಟಿಲ್ಲ, ಈಗ ಪುತ್ರ ಜನಿಸಿದ್ದಾನೆ ಈಗಲಾದರೂ ಬಂಗಾರ ಕೊಡಿ ಎಂದು ಕೇಳಿದ್ದಾನೆ.

ಆಗ ರೋಷನಬಿ ಈಗ ಆಗುವುದಿಲ್ಲ, ಮಗನ ಮದುವೆ ಇದ್ದಾಗ ಕೊಡುತ್ತೇನೆ ಎಂದು ಹೇಳಿದ್ದಾರೆ. ಆಗ ವಾಗ್ವಾದ ನಡೆದಿದ್ದು, ಅಕ್ಬರ್ ಅತ್ತೆಯ ತಲೆಗೆ ಕೊಡಲಿಯಿಂದ ಹೊಡೆದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ರೋಷನಬಿಯನ್ನು ಪುತ್ರಿ ರಂಜಾನ್ ಬೀ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವೇಳೆಗಾಗಲೇ ಕೋಮಾಕ್ಕೆ ಹೋಗಿದ್ದ ರೋಷನಬಿ ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಯಲಹಂಕ ಉಪನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular