ಶಿವಮೊಗ್ಗ: ಶಿವಮೊಗ್ಗದಲ್ಲಿ ಮೊಮ್ಮಗನಿಂದಲೇ ಅಜ್ಜಿಯ ಕೊಲೆಯಾಗಿದೆ. 65 ವರ್ಷದ ವೃದ್ಧೆ ಸುಶೀಲಮ್ಮ ಅವರ ಮೇಲೆ ಸೈಜುಗಲ್ಲು ಎತ್ತಿ ಹಾಕಿ ಮೊಮ್ಮಗ ಕಿಶೋರ್ ಕೊಲೆ ಮಾಡಿದ್ದಾನೆ.
ಶಿವಮೊಗ್ಗದ ಮಿಳಘಟ್ಟ ಬಡಾವಣೆಯಲ್ಲಿ ಘಟನೆ ನಡೆದಿದೆ. ಆರೋಪಿ ಕಿಶೋರ್ ಗಾಂಜಾ ಸೇವಿಸುತ್ತಿದ್ದ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಸುಶೀಲಮ್ಮ ಮುಂದಾಗಿದ್ದರು.
ಮೊಮ್ಮಗ ಕಿಶೋರ್ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾದ ಹಿನ್ನೆಲೆಯಲ್ಲಿ ಸೈಜುಗಲ್ಲು ಎತ್ತಿ ಹಾಕಿ ಸುಶೀಲಮ್ಮ ಅವರನ್ನು ಮೊಮ್ಮಗ ಕಿಶೋರ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

