HomeLatest News‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಭಾರೀ ಅಕ್ರಮ : ಖಾತೆ ಇಲ್ಲದವರಿಗೆ ₹60 ಕೋಟಿ ಜಮೆ , CAG...

‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಭಾರೀ ಅಕ್ರಮ : ಖಾತೆ ಇಲ್ಲದವರಿಗೆ ₹60 ಕೋಟಿ ಜಮೆ , CAG ವರದಿಯಲ್ಲಿ ಸ್ಪೋಟಕ ಮಾಹಿತಿ.!

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಹಣಕಾಸು ಅಕ್ರಮಗಳು ಬಯಲಾಗಿವೆ. CAG ವರದಿಯ ಪ್ರಕಾರ ಫಲಾನುಭವಿಗಳ ಹೆಸರಿನಲ್ಲಿ ಸರಿಯಾದ ಪರಿಶೀಲನೆ ಇಲ್ಲದೆ ಹಾಗೂ ಬ್ಯಾಂಕ್ ಖಾತೆಗಳ ಲಿಂಕಿಂಗ್ ದೋಷಗಳಿಂದ ಸುಮಾರು ₹60 ಕೋಟಿ ಹಣ ಅನಿಯಮಿತವಾಗಿ ಠೇವಣಿಯಾಗಿರುವುದು ಪತ್ತೆಯಾಗಿದೆ. ಈ ಅಕ್ರಮದಿಂದ DBT ವ್ಯವಸ್ಥೆಯ ನಿಗಾವಳಿ ಮತ್ತು ಜಾರಿಗೆ ಸಂಬಂಧಿಸಿದ ಗಂಭೀರ ಲೋಪಗಳು ಹೊರಬಿದ್ದಿವೆ.

ಕರ್ನಾಟಕ ಸರ್ಕಾರದ ಪ್ರಮುಖ ಕಲ್ಯಾಣ ಯೋಜನೆ ಗೃಹಲಕ್ಷ್ಮಿ (Gruha Lakshmi) ಯೋಜನೆಗೆ ಸಂಬಂಧಿಸಿದಂತೆ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ (CAG) ವರದಿಯಲ್ಲಿ ದೊಡ್ಡ ಮಟ್ಟದ ಅಕ್ರಮಗಳು ಬೆಳಕಿಗೆ ಬಂದಿವೆ.

ಹೌದು.ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ CAG ವರದಿಯಲ್ಲಿ ಗಂಭೀರ ಅಕ್ರಮಗಳು ಬೆಳಕಿಗೆ ಬಂದಿವೆ. ವರದಿ ಪ್ರಕಾರ, 23,262 ಫಲಾನುಭವಿಗಳಿಗೆ ಬ್ಯಾಂಕ್ ಖಾತೆ ವಿವರಗಳೇ ಇಲ್ಲದೆ ಸುಮಾರು ₹46.52 ಕೋಟಿ ಹಣ ಪಾವತಿಸಲಾಗಿದೆ ಎಂಬ ಅಚ್ಚರಿ ಸಂಗತಿ ಬಹಿರಂಗವಾಗಿದೆ.ಅದೇ ವೇಳೆ, ಕೆಲ ಪ್ರಕರಣಗಳಲ್ಲಿ ಒಂದೇ ಬ್ಯಾಂಕ್ ಖಾತೆಗೆ ಹಲವು ಫಲಾನುಭವಿಗಳ ಹಣ ಜಮೆಯಾಗಿರುವುದು, ಹಾಗೂ ವ್ಯವಸ್ಥೆಯಲ್ಲಿ ಸರಿಯಾದ ಪರಿಶೀಲನೆ ಇಲ್ಲದೇ DBT (Direct Benefit Transfer) ಮೂಲಕ ಹಣ ಬಿಡುಗಡೆ ಮಾಡಿರುವುದು ಕೂಡ ವರದಿಯಲ್ಲಿ ಉಲ್ಲೇಖವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

CAG ವರದಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಈ ರೀತಿಯ ಪಾವತಿಗಳು ಹೇಗೆ ಸಾಧ್ಯವಾಯಿತು ಎಂಬುದಕ್ಕೆ ಸ್ಪಷ್ಟನೆ ನೀಡುವಂತೆ ಪ್ರಶ್ನಿಸಿದೆ. ಈ ಅಕ್ರಮಗಳಿಂದ ಯೋಜನೆಯ ಪಾರದರ್ಶಕತೆ ಮತ್ತು ನಿಗಾವಳಿ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳು ಎದ್ದಿವೆ.ಇದರಿಂದಾಗಿ ರಾಜ್ಯದ ಮಹತ್ವಾಕಾಂಕ್ಷಿ ಕಲ್ಯಾಣ ಯೋಜನೆಯ ಅನುಷ್ಠಾನದಲ್ಲಿ ದೊಡ್ಡ ಮಟ್ಟದ ಆಡಳಿತ ಲೋಪಗಳು ಇರುವುದನ್ನು ವರದಿ ಬಹಿರಂಗಪಡಿಸಿದೆ.

₹60 ಕೋಟಿ ಹಣ ಅಕ್ರಮ ಹಣ ಠೇವಣಿ

ವರದಿ ಪ್ರಕಾರ, ಕೆಲವು ಫಲಾನುಭವಿಗಳ ಬ್ಯಾಂಕ್ ಖಾತೆಗಳಲ್ಲಿ ಒಂದೇ ಖಾತೆಗೆ ಹಲವಾರು ಫಲಾನುಭವಿಗಳ ಹಣ ಜಮೆಯಾಗಿದ್ದು, ಒಟ್ಟಾರೆ ಸುಮಾರು ₹60 ಕೋಟಿ ಹಣ ಅಕ್ರಮವಾಗಿ ಠೇವಣಿಯಾಗಿರುವುದು ಪತ್ತೆಯಾಗಿದೆ. ಈ ಹಣವನ್ನು ಸುಮಾರು 3 ಲಕ್ಷ ಕಂತುಗಳ ರೂಪದಲ್ಲಿ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಕೆಲವರು ಒಂದೇ ವ್ಯಕ್ತಿಯ ಹೆಸರಿನಲ್ಲಿ ಹಲವು ಖಾತೆಗಳನ್ನು ತೆರೆಯುವ ಮೂಲಕ ಯೋಜನೆಯ ಹಣವನ್ನು ಅನ್ಯಾಯವಾಗಿ ಪಡೆಯುತ್ತಿರುವುದು ಕೂಡ ವರದಿಯಲ್ಲಿ ಬಹಿರಂಗವಾಗಿದೆ. ಇದರಿಂದ ಸರ್ಕಾರದ DBT (Direct Benefit Transfer) ವ್ಯವಸ್ಥೆಯಲ್ಲಿ ಗಂಭೀರ ನಿಗಾವಳಿ ಕೊರತೆ ಇರುವುದನ್ನು CAG ಉಲ್ಲೇಖಿಸಿದೆ.
ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ಪರಿಶೀಲನೆ, ಇ-ಕೆವೈಸಿ ಮತ್ತು ಬ್ಯಾಂಕ್ ಖಾತೆಗಳ ಸರಿಯಾದ ಲಿಂಕಿಂಗ್ ಮಾಡದಿರುವುದು ಪ್ರಮುಖ ಲೋಪಗಳಾಗಿ ಗುರುತಿಸಲಾಗಿದೆ. ಸರ್ಕಾರ ಈಗ ಈ ಅಕ್ರಮಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular