HomeKarnatakaBIG NEWS: ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮಾಡಲ್ಲ; ಆಣೆ-ಪ್ರಮಾಣದ ಬಗ್ಗೆಯೂ ನಿರ್ಧಾರವಾಗಿಲ್ಲ ಎಂದ...

BIG NEWS: ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಮಾಡಲ್ಲ; ಆಣೆ-ಪ್ರಮಾಣದ ಬಗ್ಗೆಯೂ ನಿರ್ಧಾರವಾಗಿಲ್ಲ ಎಂದ ಆರ್.ಅಶೋಕ್

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಕೆಲ ಶಾಸಕರಿಂದ ಅಡ್ಡಮತದಾನ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ಅಡ್ಡಮತದಾನ ಮಾಡಿದವರನ್ನು ಪತ್ತೆ ಮಾಡಿ, ಬಳಿಕ ಮಂಜುನಾಥ ಸ್ವಾಮಿ ಎದುರು ಆಣೆ-ಪ್ರಮಾಣ ಮಾಡಿಸಲು ಬಿಜೆಪಿ ಮುಂದಾಗಿತ್ತು. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಧರ್ಮಸ್ಥಳದಲ್ಲಿ ಶಾಸಕರಿಂದ ಆಣೆ-ಪ್ರಮಾಣ ಮಾಡಿಸುವುದಾಗಿ ತಿಳಿಸಿದ್ದರು. ರಾಜ್ಯಾಧ್ಯಕ್ಷರ ಈ ನಿರ್ಧಾರಕ್ಕೆ ಬಿಜೆಪಿ ಹಿರಿಯ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರದಲ್ಲಿ ಆಣೆ-ಪ್ರಮಾಣ ಮಾಡಿ ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ಇದು ಭಕ್ತರ ಭಾವನೆಗೆ ಧಕ್ಕೆ ತರುವಂತಾಗುತ್ತದೆ ಎಂದು ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ನಾಯಕರು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ವಿಚಾರದಿಂದ ಬಿಜೆಪಿ ನಾಯಕರು ಹಿಂದೆ ಸರಿದಿದ್ದಾರೆ.

ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನನಗೆ ಮೂರ್ನಾಲ್ಕು ದಿನಗಳ ಹಿಂದೆ ಕರೆ ಮಾಡಿದ್ದರು. ಯಾರೆಲ್ಲ ಕ್ರಾಸ್ ವೋಟಿಂಗ್ ಮಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎಲ್ಲಾ ಬಿಜೆಪಿ ಶಾಸಕರನ್ನು ಧರ್ಮಸ್ಥಳಕ್ಕೆ ಕರೆದು ಶಾಸಕಾಂಗ ಪಕ್ಷದ ಸಭೆ ನಡೆಸಿ ಅಲ್ಲಿ ಮುಂದಿನ ನಿರ್ಧಾರ ಮಾಡುವ ಬಗ್ಗೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದಿದ್ದರು. ಹಾಗಾಗಿ ನಾನು ಹಿರಿಯ ನಾಯಕರ ಜೊತೆ ಚರ್ಚೆ ನಡೆಸಿದೆ. ಅವರೆಲ್ಲರೂ ಈ ಸಂದರ್ಭದಲ್ಲಿ ಧರ್ಮಸ್ಥಳವನ್ನು ರಾಜಕೀಯ ಕ್ಷೇಯ್ರ ಮಾಡುವುದು ಬೇಡ. ಪಕ್ಷದೊಳಗಡೆ ಏನಾಗಿದೆ? ಸಮಸ್ಯೆಯೇನು ಎಂಬುದನ್ನು ಇಲ್ಲಿಯೇ ಪರಿಹರಿಸೋಣ. ಅಡ್ಡಮತದಾನ ಎಂಬುದು ಹೊಸದೇನಲ್ಲ. ಈ ಹಿಂದೆಯೂ ಹಲವು ಬಾರಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಗಾಗಿ ನಾವು ಧರ್ಮಸ್ಥಳದಲ್ಲಿ ಯಾವುದೇ ಶಾಸಕಾಂಗ ಪಕ್ಷದ ಸಭೆ ನಡೆಸುವುದಿಲ್ಲ. ಧರ್ಮಸ್ಥಳ ಧರ್ಮಸ್ಥಳವಾಗಿಯೇ ಇರಲಿ. ಉಳಿದ ವಿಚಾರವಾನ್ನು ನಾವು ನಮ್ಮ ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತೇವೆ. ಮುಂದೆ ಹೀಗಾಗದಂತೆ ಮುಂಜಾಗೃತಾ ಕ್ರಮಗಳನ್ನು ಅನುಸರಿಸುತ್ತೇವೆ. ಕಾರಣ ಡಿ.ಕೆ.ಶಿವಕುಮಾರ್ ಎಂದರೆ ಅವರ ಜಾಯಮಾನವೇ ಹಾಗೆ ಬಂದಿದೆ. ಅವರು ಚಿಕ್ಕಂದಿನಿಂದಲೂ ಮಸಲ್ ಪವರ್, ಮನಿ ಪವರ್ ನಿಂದಲೇ ಬಂದವರು. ಹಾಗಾಗಿ ಅವರನ್ನು ಹೇಗೆ ಎದುರಿಸಬೇಕು ಎಂಬುದನ್ನು ನಾವು ಯೋಚಿಸುತ್ತೇವೆ ಎಂದರು.

ಅವರು ಅಧಿಕಾರವಿದೆ ಎಂದು ಕುದುರೆ ವ್ಯಾಪಾರ ಮಾಡಿ ಹಣ ಕೊಟ್ಟು ಭ್ರಷ್ಟಾಚಾರ ಇಲ್ಲದ ಸರ್ಕಾರ ಕೊಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ ಎಂದರೆ ಸಿದ್ದರಾಮಯ್ಯನವರು ಭ್ರಷ್ಟಾಚಾರ ಮಾಡಿ ಸರ್ಕಾರದಲ್ಲಿ ಇದ್ದರು. ಇವರು ಬಂದ ಮೇಲೆ ಭ್ರಷ್ಟಾಚಾರ ಇಲಲದ ಸರ್ಕಾರ ಕೊಡ್ತಾರಂತೆ. ಅಂದ್ರೆ ಸಿದ್ದರಾಮಯ್ಯನವರಿಗೆ ಇವರು ಟಾಂಗ್ ಕೊಟ್ಟಿದ್ದಾರೆ. ಇವರ ಭ್ರಷ್ಟಾಚಾರ ಮೊದಲ ದಿನವೇ ಎಲ್ಲರಿಗೂ ಗೊತ್ತಾಯಿತಲ್ಲ. ಎಲ್ಲರಿಗೂ 5 ಕೋಟಿ, 10 ಕೋಟಿ ಹಣ ಕೊಟ್ಟಿದ್ದಾರೆ. ಈ ಹಣ ಎಲ್ಲಿಂದ ಬಂತು? ಹೇಳಲಿ ಎಂದು ಕಿಡಿಕಾರಿದರು.

ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇಲ್ಲ. ಆದರೆ ಪಕ್ಷಕ್ಕೆ ದ್ರೋಹ ಮಾಡಿ ಅಡ್ಡಮತದಾನ ಮಾಡಿದವರು ಯಾರೇ ಇರಲಿ ಅವರನ್ನು ಪತ್ತೆ ಮಾಡಿ ಅವರಿಗೆ ಬುದ್ಧಿಕಲಿಸುತ್ತೇವೆ. ಅವರು ಇನ್ನೊಮ್ಮೆ ಇಂತಹ ಕೆಲಸ ಮಾಡಬಾರದು ಹಾಗೆ ಮಾಡುತ್ತೇವೆ ಎಂದು ಗುಡುಗಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular