ಬೆಂಗಳೂರು: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೆಆರ್ ಪುರಂನ ಸೀಗೆಹಳ್ಳಿಯ ಮನೆಯಲ್ಲಿ ಮೂವರನ್ನು ಹತ್ಯೆ ಮಾಡಲಾಗಿದ್ದು, ಮಗಳಿಂದಲೇ ತಂದೆ, ತಾಯಿ ಮತ್ತು ಸಹೋದರಿಯ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ತಂದೆ ಸೋಮಸುಂದರ(55), ತಾಯಿ ಮುತ್ತುಲಕ್ಷ್ಮಿ(48) ಮತ್ತು ಸಹೋದರಿ ಸುಪ್ರಿಯಾ(20) ಕೊಲೆಯಾದ ದುರ್ದೈವಿಗಳು. ಪ್ರಿಯಕರ ಕೆನತ್ ಜೊತೆಗೆ ಸೇರಿ ಪುತ್ರಿ ಶ್ವೇತಾ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಕೆನೆತ್ ಜೊತೆಗೆ ಶ್ವೇತಾ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಳು. ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಪ್ರಿಯಕರೊಂದಿಗೆ ಸೇರಿ ಮಾರಕಾಸ್ತ್ರಗಳಿಂದ ಇರಿದು ತಂದೆ, ತಾಯಿ ಹಾಗೂ ಸಹೋದರಿಯನ್ನು ಶ್ವೇತಾ ಕೊಲೆ ಮಾಡಿದ್ದಾಳೆ ಎನ್ನಲಾಗಿದ್ದು, ಘಟನಾ ಸ್ಥಳಕ್ಕೆ ಕೆಆರ್ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

