HomeBusinessಇನ್ಮುಂದೆ ಉಚಿತವಾಗಿ ಸಿಗಲ್ಲ ವಾಟ್ಸಾಪ್, ಫೇಸ್‌ಬುಕ್ ಪ್ರೀಮಿಯಂ ಫೀಚರ್ಸ್ ಜಾಗತಿಕವಾಗಿ ಹೊಸ ಪ್ಲಾನ್ ಪ್ರಕಟಿಸಿದ ಮೆಟಾ...

ಇನ್ಮುಂದೆ ಉಚಿತವಾಗಿ ಸಿಗಲ್ಲ ವಾಟ್ಸಾಪ್, ಫೇಸ್‌ಬುಕ್ ಪ್ರೀಮಿಯಂ ಫೀಚರ್ಸ್ ಜಾಗತಿಕವಾಗಿ ಹೊಸ ಪ್ಲಾನ್ ಪ್ರಕಟಿಸಿದ ಮೆಟಾ :ತಿಂಗಳಿಗೆ ಎಷ್ಟಿರುತ್ತೆ ಚಂದಾದಾರಿಕೆ?

ವಾಷಿಂಗ್ಟನ್: ಇಡೀ ವಿಶ್ವದಾದ್ಯಂತ ಕೋಟ್ಯಂತರ ಜನ ದಿನಬೆಳಗಾದರೆ ಸಾಕು ಮುಳುಗಿರೋ ಸಾಮಾಜಿಕ ಜಾಲತಾಣಗಳ ಅಧಿಪತಿ ಮೆಟಾ (Meta) ಸಂಸ್ಥೆ ಅತ್ಯಂತ ದೂಳೆಬ್ಬಿಸುವ ದಿಢೀರ್ ನಿರ್ಧಾರವೊಂದನ್ನು ಪ್ರಕಟಿಸಿದೆ ಇನ್ಮುಂದೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನ ಕೆಲವು ವಿಶೇಷ ಮತ್ತು ಪ್ರೀಮಿಯಂ ಫೀಚರ್‌ಗಳನ್ನು ಬಳಸಬೇಕಾದರೆ ತಿಂಗಳಿಗೆ ಇಂತಿಷ್ಟು ಅಂತಾ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ.

ಮೆಟಾ ಕಂಪನಿಯ ಪ್ರಾಡಕ್ಟ್ ವಿಭಾಗದ ಮುಖ್ಯಸ್ಥರಾದ ನವೋಮಿ ಗ್ಲೈಟ್ (Naomi Gleit) ಅವರು ಜಾಗತಿಕವಾಗಿ ಹೊಸ “ಪ್ಲಸ್” (Plus) ಸಬ್‌ಸ್ಕ್ರಿಪ್ಷನ್ ಯೋಜನೆಗಳನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದಾರೆ.

ಆದರೆ ಸಾಮಾನ್ಯ ಬಳಕೆದಾರರು ತಲೆಕೆಡಿಸಿಕೊಳ್ಳಬೇಕಾಗಿಲ್ಲ ನಿಮ್ಮ ಸದ್ಯದ ನಾರ್ಮಲ್ ಫೇಸ್‌ಬುಕ್, ಇನ್‌ಸ್ಟಾ ಹಾಗೂ ವಾಟ್ಸಾಪ್ ಆ್ಯಪ್‌ಗಳು ಎಂದಿನಂತೆ ಉಚಿತವಾಗಿಯೇ ಇರಲಿವೆ. ಎಕ್ಸ್ (ಟ್ವಿಟರ್) ಮಾದರಿಯಲ್ಲೇ, ಕೇವಲ ಎಕ್ಸ್‌ಕ್ಲೂಸಿವ್ ಫೀಚರ್ಸ್ ಬೇಕಾದವರಿಗಾಗಿ ಮಾತ್ರ ಈ ಐಚ್ಛಿಕ (Optional) ಪ್ಲಾನ್‌ಗಳನ್ನು ತರಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಮ್ಮ ಜೇಬಿಗೆ ಎಷ್ಟು ಕತ್ತರಿ? ಇಲ್ಲಿದೆ ಪ್ರೀಮಿಯಂ ರೇಟ್ ಕಾರ್ಡ್

ಮೆಟಾ ಪ್ರಕಟಿಸಿರುವ ಹೊಸ ಪ್ಲಸ್‌ ಪ್ಲಾನ್‌ಗಳ ಭಾರತೀಯ ರೂಪಾಯಿ ಲೆಕ್ಕಾಚಾರದ ಕಂಪ್ಲೀಟ್ ಚಾರ್ಟ್ ಇಲ್ಲಿದೆ:

ಇನ್‌ಸ್ಟಾಗ್ರಾಮ್ ಪ್ಲಸ್ (Instagram Plus): ತಿಂಗಳಿಗೆ $3.99 (ಸುಮಾರು ₹377)

ಫೇಸ್‌ಬುಕ್ ಪ್ಲಸ್ (Facebook Plus): ತಿಂಗಳಿಗೆ $3.99 (ಸುಮಾರು ₹377)

ವಾಟ್ಸಾಪ್ ಪ್ಲಸ್ (WhatsApp Plus): ತಿಂಗಳಿಗೆ $2.99 (ಸುಮಾರು ₹282)

ಉಚಿತವಾಗಿ ಸಿಗ್ತಿದ್ದ ಆ್ಯಪ್‌ಗಳಿಗೆ ಸಡನ್ ಆಗಿ ದುಡ್ಡು ಕೇಳುತ್ತಿರೋದ್ಯಾಕೆ ಮಾರ್ಕ್ ಜುಕರ್‌ಬರ್ಗ್?

AI ರೇಸ್‌ನಲ್ಲಿ ನಂ.1 ಆಗೋ ಹುಚ್ಚು: ಕೃತಕ ಬುದ್ಧಿಮತ್ತೆ (Artificial Intelligence) ಸಾಮ್ರಾಜ್ಯದಲ್ಲಿ ಕಿಂಗ್ ಆಗಲು ಮೆಟಾ ತನ್ನ AI ಡೇಟಾ ಸೆಂಟರ್‌ಗಳು ಮತ್ತು ಇನ್‌ಫ್ರಾಸ್ಟ್ರಕ್ಚರ್‌ಗಾಗಿ ಈ ವರ್ಷವೊಂದರಲ್ಲೇ ಬರೋಬ್ಬರಿ $125 ಬಿಲಿಯನ್‌ನಿಂದ $145 ಬಿಲಿಯನ್ (ಅಂದರೆ ಸುಮಾರು ₹10 ಲಕ್ಷ ಕೋಟಿಗೂ ಅಧಿಕ!) ಬಂಡವಾಳ ಹೂಡಿಕೆ ಮಾಡುತ್ತಿದೆ. ಈ ಭಾರಿ ಖರ್ಚನ್ನು ಸರಿದೂಗಿಸಲು ಹಣದ ಅವಶ್ಯಕತೆ ಇದೆ.

ಜಾಹೀರಾತು ನಂಬಿದ್ರೆ ಇನ್ಮುಂದೆ ನಡೆಯಲ್ಲ: ಇಷ್ಟು ವರ್ಷ ಮೆಟಾ ಗಳಿಸುತ್ತಿದ್ದ ಒಟ್ಟು ಆದಾಯದಲ್ಲಿ ಶೇ. 90ಕ್ಕಿಂತ ಹೆಚ್ಚು ಪಾಲು ಜಾಹೀರಾತುಗಳದ್ದೇ (Ad Revenue) ಆಗಿತ್ತು. ಆದರೆ ಮಾರ್ಕೆಟ್ ಏರಿಳಿತಗಳಿಂದ ಸೇಫ್ ಆಗಿರಲು ಕಂಪನಿ ಈಗ ಡೈರೆಕ್ಟ್ ಸಬ್‌ಸ್ಕ್ರಿಪ್ಷನ್ ಮಾಡೆಲ್‌ಗೆ ಕೈಹಾಕಿದೆ.

ಹೂಡಿಕೆದಾರರ ಪ್ರೆಶರ್: AI ಮೇಲೆ ಇಷ್ಟೊಂದು ಲಕ್ಷ ಕೋಟಿ ಸುರಿಯುತ್ತಿದ್ದೀರಲ್ಲ, ಇದರಿಂದ ತಕ್ಷಣಕ್ಕೆ ಆದಾಯ ಹೇಗೆ ಬರುತ್ತೆ? ಎಂದು ಪ್ರಶ್ನಿಸುತ್ತಿದ್ದ ಹೂಡಿಕೆದಾರರ ಬಾಯಿ ಮುಚ್ಚಿಸಲು ಜುಕರ್‌ಬರ್ಗ್ ಈ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ದುಡ್ಡು ಕೊಟ್ಟರೆ ಸಿಗುವ ಆ ಜಬರ್ದಸ್ತ್ ಫೀಚರ್‌ಗಳು ಏನೇನು?

ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ “ಪ್ಲಸ್” ಫೀಚರ್ಸ್:

ಸ್ಟೋರಿ ರಿವಾಚ್ ಫೀಚರ್ (Story Rewatch): ನಿಮ್ಮ ಇನ್‌ಸ್ಟಾ ಸ್ಟೋರಿಯನ್ನು ಯಾರಾದರೂ ಮತ್ತೆ ಮತ್ತೆ ಓಪನ್ ಮಾಡಿ ಕದ್ದು ನೋಡಿದ್ದಾರಾ ಎಂಬ ಸೀಕ್ರೆಟ್ ಅಂಕಿ-ಅಂಶ ನಿಮಗೆ ಗೋಚರಿಸುತ್ತದೆ!

ಸ್ಟೆಲ್ತ್ ಮೋಡ್ (Stealth Mode Preview): ಬೇರೆಯವರ ಸ್ಟೋರಿಗಳನ್ನು ಅವರಿಗೆ ತಿಳಿಯದಂತೆ (ವೀಕ್ಷಕರ ಪಟ್ಟಿಯಲ್ಲಿ ನಿಮ್ಮ ಹೆಸರು ಬರದಂತೆ) ನೀವು ಮೊದಲೇ ರಹಸ್ಯವಾಗಿ ನೋಡಬಹುದು.

ಲಾಂಗ್ ಲೈಫ್ ಸ್ಟೋರಿ: 24 ಗಂಟೆಗಳಲ್ಲಿ ಮಾಯವಾಗುವ ಸ್ಟೋರಿಗಳನ್ನು ಇನ್ನು ಹೆಚ್ಚು ಸಮಯ ಪ್ರೊಫೈಲ್‌ನಲ್ಲಿ ಇಡಬಹುದು ಹಾಗೂ ವಾರಕ್ಕೊಮ್ಮೆ ಒಂದು ಸ್ಪೆಷಲ್ ಸ್ಟೋರಿಯನ್ನು ಬೂಸ್ಟ್ ಮಾಡುವ ಮೂಲಕ ನಿಮ್ಮ ರೀಚ್ ಹೆಚ್ಚಿಸಿಕೊಳ್ಳಬಹುದು.

ವಾಟ್ಸಾಪ್ ಪ್ಲಸ್ ಫೀಚರ್ಸ್:

ಕಸ್ಟಮೈಸೇಷನ್ ಕಿಂಗ್: ಆ್ಯಪ್‌ನ ಐಕಾನ್ ಕಲರ್ ಬದಲಾಯಿಸಬಹುದು, ಪ್ರೀಮಿಯಂ ಚಾಟ್ ಥೀಮ್‌ಗಳು, ಮತ್ತು ಕಸ್ಟಮ್ ರಿಂಗ್‌ಟೋನ್‌ಗಳನ್ನು ಸೆಟ್ ಮಾಡಿಕೊಳ್ಳಬಹುದು.

ಹೆಚ್ಚುವರಿ ಚಾಟ್ ಪಿನ್: ಮುಖ್ಯವಾದ ಪ್ರೀಮಿಯಂ ಸ್ಟಿಕ್ಕರ್‌ಗಳು ಮತ್ತು ಹೆಚ್ಚಿನ ಚಾಟ್‌ಗಳನ್ನು ಪ್ರಮುಖವಾಗಿ ಟಾಪ್‌ನಲ್ಲಿ ಪಿನ್ ಮಾಡಿ ಇಟ್ಟುಕೊಳ್ಳುವ ಸೌಲಭ್ಯ ಸಿಗಲಿದೆ.

ಬರ್ತಿದೆ ‘ಮೆಟಾ ಒನ್’ ಮತ್ತು ಸುಧಾರಿತ AI ಪ್ಲಾನ್‌ಗಳು
ಮೆಟಾ ಕಥೆ ಇಷ್ಟಕ್ಕೇ ಮುಗಿಯಲ್ಲ. ಭವಿಷ್ಯದಲ್ಲಿ ಈ ಮೂರೂ ಆ್ಯಪ್‌ಗಳ ಚಂದಾದಾರಿಕೆಯನ್ನು ಒಟ್ಟಿಗೆ ಸೇರಿಸಿ ಮೆಟಾ ಒನ್ (Meta One) ಎಂಬ ಒಂದೇ ಬ್ರಾಂಡ್ ಅಡಿಯಲ್ಲಿ ತರಲು ಕಂಪನಿ ಸ್ಕೆಚ್ ಹಾಕಿದೆ. ಅಷ್ಟೇ ಅಲ್ಲ, ಮೆಟಾ AI ಅನ್ನು ಹೆವಿಯಾಗಿ ಬಳಸುವ ಟೆಕ್ಕಿಗಳಿಗಾಗಿ ಸುಧಾರಿತ ಇಮೇಜ್/ವಿಡಿಯೋ ಜನರೇಶನ್ ಮಾಡುವ ಪ್ರತ್ಯೇಕ ಪ್ರೀಮಿಯಂ AI ಪ್ಲಾನ್‌ಗಳನ್ನು ತರುತ್ತಿದ್ದು, ಅವುಗಳ ಬೆಲೆ ತಿಂಗಳಿಗೆ $7.99 ರಿಂದ $19.99 (ಸುಮಾರು ₹750 ರಿಂದ ₹1,900) ವರೆಗೆ ಇರಲಿದೆ ಎಂದು ವರದಿಗಳು ತಿಳಿಸಿವೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular