ಬೆಂಗಳೂರು: ಮದುವೆ ಸೀಸನ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಸಲು ಪ್ಲಾನ್ ಮಾಡುತ್ತಿರುವ ಗ್ರಾಹಕರಿಗೆ ಮಾರುಕಟ್ಟೆಯಿಂದ ಬಿಗ್ ಅಪ್ಡೇಟ್ ಸಿಕ್ಕಿದೆ ಕಳೆದ ಕೆಲವು ವಾರಗಳಿಂದ ಸಕತ್ ಏರಿಳಿತ ಕಾಣುತ್ತಿದ್ದ ಹಳದಿ ಲೋಹದ ಬೆಲೆ ಜೂನ್ 18ರ ಗುರುವಾರ ದೇಶೀಯ ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆ ಕಾಣದೆ ಸ್ಥಿರವಾಗಿ ವಹಿವಾಟು ಮುಗಿಸಿದೆ.ಆದರೆ ಬೆಳ್ಳಿ ಪ್ರಿಯರಿಗೆ ಮಾತ್ರ ಗುರುವಾರ ಕೆಜಿಗೆ ಬರೋಬ್ಬರಿ ₹5,000 ರಷ್ಟು ಭಾರಿ ಅಗ್ಗವಾಗಿದೆ
ಚಿನ್ನದ ಬೆಲೆಯಲ್ಲಿ ಸದ್ಯಕ್ಕೆ ಶಾಕ್ ಇಲ್ಲ: ನಿನ್ನೆಯಷ್ಟೇ ಇತ್ತು ರೇಟ್
ಬುಧವಾರವಷ್ಟೇ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹270 ರಷ್ಟು ಕುಸಿತ ಕಂಡುಬಂದಿತ್ತು. ಇಂದೂ ಕೂಡ ಅದೇ ಟ್ರೆಂಡ್ ಮುಂದುವರಿದಿದ್ದು, ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಸದ್ಯ ದೇಶಾದ್ಯಂತ ಹಾಗೂ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಭರಣ ಚಿನ್ನ (22 ಕ್ಯಾರಟ್) 10 ಗ್ರಾಂಗೆ ₹1,38,500 ರೇಂಜ್‌ನಲ್ಲಿದ್ದರೆ, ಅಪರಂಜಿ ಚಿನ್ನ (24 ಕ್ಯಾರಟ್) 10 ಗ್ರಾಂಗೆ ₹1,51,100 ಕ್ಕೆ ವಹಿವಾಟು ನಡೆಸುತ್ತಿದೆ
ಬೆಳ್ಳಿ ಬೆಲೆಯಲ್ಲಿ ಗ್ರಾಮ್‌ಗೆ ₹5 ಇಳಿಕೆ
ನಿನ್ನೆ ಮಾರುಕಟ್ಟೆಯಲ್ಲಿ ಸ್ಥಿರವಾಗಿದ್ದ ಬೆಳ್ಳಿ ಬೆಲೆ ಇಂದು ಗುರುವಾರ ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ. ಒಂದು ಗ್ರಾಂ ಬೆಳ್ಳಿಗೆ ₹5 ರಷ್ಟು ಕಡಿತವಾಗಿದ್ದು, ಇದರೊಂದಿಗೆ ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ ₹5,000 ಗಳಷ್ಟು ಭಾರಿ ಕುಸಿತ ದಾಖಲಾಗಿದೆ. ಬೆಂಗಳೂರಿನಲ್ಲಿ ಸದ್ಯ 100 ಗ್ರಾಂ ಬೆಳ್ಳಿ ಬೆಲೆ ₹26,000 ದಲ್ಲಿದೆ. ಇನ್ನು ತಮಿಳುನಾಡು ಹಾಗೂ ಕೇರಳದ ಕೆಲವೆಡೆ 100 ಗ್ರಾಂ ಬೆಳ್ಳಿ ಬೆಲೆ ₹27,000 ಆಸುಪಾಸಿನಲ್ಲಿದೆ
ಚಿನ್ನದ ದರ (Gold Rate per Gram):
24 ಕ್ಯಾರಟ್ (ಅಪರಂಜಿ ಚಿನ್ನ) – 1 ಗ್ರಾಂ: ₹15,110
22 ಕ್ಯಾರಟ್ (ಆಭರಣ ಚಿನ್ನ) – 1 ಗ್ರಾಂ: ₹13,850
18 ಕ್ಯารಟ್ ಚಿನ್ನ – 1 ಗ್ರಾಂ: ₹11,332
ಬೆಳ್ಳಿ ದರ (Silver Rate):
ಬೆಳ್ಳಿ – 1 ಗ್ರಾಂಗೆ: ₹260
ಬೆಳ್ಳಿ – 100 ಗ್ರಾಂಗೆ: ₹26,000
ಬೆಳ್ಳಿ – 1 ಕೆಜಿಗೆ: ₹2,60,000 (ನಿನ್ನೆಗಿಂತ ₹5,000 ಕಮ್ಮಿ!
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ
ಬೆಂಗಳೂರು ₹1,51,100
ನಾಗ್ಪುರ ₹1,51,100
ಮುಂಬೈ ₹1,51,100
ಚೆನ್ನೈ ₹1,53,380
ಕೋಲ್ಕತ್ತಾ ₹1,51,100
ಪಾಟ್ನಾ ₹1,51,150
ಸೂರತ್ ₹1,51,150
ಚಂಡೀಗಢ ₹1,51,250
ಲಕ್ನೋ ₹1,51,250

