ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎ1 ಆರೋಪಿ ಪವಿತ್ರಾ ಗೌಡಾಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಸಂಧ್ಯಾ ನಾಗರಾಜ್ ಎಂಬುವವರು ಪವಿತ್ರಾ ಗೌಡ ಹಾಗೂ ಆಕೆಯ ಜೊತೆಗಿರುವ ಸಹಕೈದಿ ರಶ್ಮಿ ಎಂಬುವವರ ವಿರುದ್ಧ ರಾಜಾತಿಥ್ಯ ಆರೋಪ ಮಾಡಿದ್ದರು.
ಸಂಧ್ಯಾ ನಾಗರಾಜ್ ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಮಾತನಾಡಿ, ಪವಿತ್ರಾ ಗೌಡಗೆ ಜೈಲಿನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತಿವೆ ಎಂದಿದ್ದರು. ತನ್ನ ವಿರುದ್ಧ ಆರೋಪ ಮಾಡಿರುವ ವಿಚಾರ ತಿಳಿದ ಪವಿತ್ರಾ ಗೌಡ, ಜೈಲಿನಕ್ಲಿದ್ದುಕೊಂಡೇ ಪೊಲೀಸರುಗೆ ದೂರು ನೀಡಿದ್ದಾಳೆ.
ಸಂಧ್ಯಾ ನಾಗರಾಜ್ ವಿರುದ್ಧ ಪವಿತ್ರಾ ಗೌಡ ಹಾಗೂ ರಶ್ಮಿ ಇಬ್ಬರೂ ಸೇರಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಧ್ಯಾ ನಾಗರಾಜ್ ಗೆ ಸಂಕಷ್ಟ ಎದುರಾಗಲಿದೆ.

