HomeKarnatakaBIG NEWS : ಬೆಂಗಳೂರಿನ ವಾಹನ ಸವಾರರೇ ಗಮನಿಸಿ ; ಮುಂದಿನ 1 ತಿಂಗಳು ಈ...

BIG NEWS : ಬೆಂಗಳೂರಿನ ವಾಹನ ಸವಾರರೇ ಗಮನಿಸಿ ; ಮುಂದಿನ 1 ತಿಂಗಳು ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ಬೆಂಗಳೂರು: ನಗರದಲ್ಲಿ ಸಂಚರಿಸುವ ವಾಹನ ಸವಾರರಿಗೆ ಮಹತ್ವದ ಮಾಹಿತಿ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕೈಗೊಂಡಿರುವ ಕಾಮಗಾರಿಯ ಹಿನ್ನೆಲೆಯಲ್ಲಿ ಜೂನ್ 15ರಿಂದ ಜುಲೈ 15ರವರೆಗೆ ನಂದಿದುರ್ಗಾ ಮುಖ್ಯರಸ್ತೆಯ ಕೆಲ ಭಾಗಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಸಂಚಾರಿ ಪೊಲೀಸರು ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದ್ದಾರೆ.

ಯಾವ ರಸ್ತೆಯಲ್ಲಿ ಸಂಚಾರ ನಿರ್ಬಂಧ ?

ಜೂನ್ 15ರಿಂದ ಒಂದು ತಿಂಗಳ ಕಾಲ ಜೆ.ಸಿ. ನಗರ ಪೊಲೀಸ್ ಠಾಣೆ ಜಂಕ್ಷನ್‌ನಿಂದ ಹಜ್ ಭವನ ಜಂಕ್ಷನ್‌ವರೆಗೆ ಇರುವ ನಂದಿದುರ್ಗಾ ಮುಖ್ಯರಸ್ತೆಯಲ್ಲಿ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಹಜ್ ಭವನದಿಂದ ಜೆ.ಸಿ. ನಗರ ಕಡೆಗೆ ತೆರಳುವವರಿಗೆ

ವಾಹನ ಸವಾರರು ಹಜ್ ಭವನ ಜಂಕ್ಷನ್ – ಕಂಟೋನ್‌ಮೆಂಟ್ ರೈಲ್ವೆ ನಿಲ್ದಾಣ – ಜಯಮಹಲ್ ಮುಖ್ಯರಸ್ತೆ – ಪ್ರಿಯದರ್ಶಿನಿ ಕಂಟೋನ್‌ಮೆಂಟ್ ಬ್ರಿಡ್ಜ್ – ದರ್ಗಾ – ಜೆ.ಸಿ. ನಗರ ಪೊಲೀಸ್ ಠಾಣೆ ಜಂಕ್ಷನ್ ಮಾರ್ಗವನ್ನು ಬಳಸಬಹುದು. ಅಗತ್ಯವಿದ್ದಲ್ಲಿ ಕ್ಯೂ.ಎ.ಎಲ್ ಕ್ರಾಸ್ ಹಾಗೂ ಮೇಕ್ರಿ ಸರ್ಕಲ್ ಮೂಲಕವೂ ಸಂಚರಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆನ್ಸನ್ ಟೌನ್ ಕಡೆಗೆ ಹೋಗುವವರಿಗೆ

ಮಿಲ್ಲರ್ ರಸ್ತೆಯ ಹಜ್ ಭವನದಿಂದ ಬೆನ್ಸನ್ ಟೌನ್ ಕಡೆಗೆ ತೆರಳುವವರು ಮಿಲ್ಲರ್ ರಸ್ತೆ ಮೂಲಕ ನೇರವಾಗಿ ಬೆನ್ಸನ್ ಟೌನ್ ರಸ್ತೆಯನ್ನು ಬಳಸಬಹುದು.

ಇನ್ನೊಂದು ಪರ್ಯಾಯವಾಗಿ ಕಂಟೋನ್‌ಮೆಂಟ್ ರೈಲ್ವೆ ಸ್ಟೇಷನ್ – ಕಂಟೋನ್‌ಮೆಂಟ್ ಬ್ರಿಡ್ಜ್ – ಜಯಮಹಲ್ ಮುಖ್ಯರಸ್ತೆ – ಜಯಮಹಲ್ 1ನೇ ಮೆೈನ್ – ವಿಷ್ಣುವಿಹಾರ್ ಹೋಟೆಲ್ – ನಂದಿದುರ್ಗಾ ರಸ್ತೆ ಮಾರ್ಗದ ಮೂಲಕ ಬೆನ್ಸನ್ ಟೌನ್ ತಲುಪಬಹುದು.

ಚಿನ್ನಪ್ಪ ಗಾರ್ಡನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ

ನಂದಿದುರ್ಗಾ ರಸ್ತೆ, ಪೆಮ್ಮೇಗೌಡ ರಸ್ತೆ, ಮುನಿಮಾರಪ್ಪ ರಸ್ತೆ ಹಾಗೂ ಚಿನ್ನಪ್ಪ ಗಾರ್ಡನ್ ಕಡೆಗೆ ತೆರಳುವ ವಾಹನಗಳು ಮಿಲ್ಲರ್ ರಸ್ತೆ – ಬೆನ್ಸನ್ ಟೌನ್ ರಸ್ತೆ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ.

ಇನ್ನೊಂದು ಪರ್ಯಾಯ ಮಾರ್ಗವಾಗಿ ಹಜ್ ಭವನ – ಕಂಟೋನ್‌ಮೆಂಟ್ ರೈಲ್ವೆ ಸ್ಟೇಷನ್ – ಜಯಮಹಲ್ ಮುಖ್ಯರಸ್ತೆ – ಪ್ರಿಯದರ್ಶಿನಿ ಜಂಕ್ಷನ್ – ಆನೇ ಪಾರ್ಕ್ – ಗುಲಾಬಿ ಜಂಕ್ಷನ್ – ನಂದಿದುರ್ಗಾ ರಸ್ತೆ – ಮುನಿಮಾರಪ್ಪ ರಸ್ತೆ – ಪೆಮ್ಮೇಗೌಡ ರಸ್ತೆ – ಚಿನ್ನಪ್ಪ ಗಾರ್ಡನ್ ಮಾರ್ಗದಲ್ಲಿ ಸಂಚರಿಸಬಹುದಾಗಿದೆ.

ವಾಹನ ಸವಾರರಿಗೆ ಸೂಚನೆ

ಕಾಮಗಾರಿ ಅವಧಿಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಮುಂಚಿತವಾಗಿ ಪ್ರಯಾಣ ಯೋಜನೆ ರೂಪಿಸಿಕೊಳ್ಳಬೇಕು. ಸಂಚಾರಿ ಪೊಲೀಸರು ಸೂಚಿಸಿರುವ ಪರ್ಯಾಯ ಮಾರ್ಗಗಳನ್ನು ಬಳಸುವ ಮೂಲಕ ಸುಗಮ ಸಂಚಾರಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular