HomeKarnatakaರೀಲ್ಸ್ ಮಾಡಲು ಹೋಗಿ ದುರಂತ: ಸಮುದ್ರದಲ್ಲಿ ಕೊಚ್ಚಿ ಹೋಗಿ ಯುವಕ ಸಾವು

ರೀಲ್ಸ್ ಮಾಡಲು ಹೋಗಿ ದುರಂತ: ಸಮುದ್ರದಲ್ಲಿ ಕೊಚ್ಚಿ ಹೋಗಿ ಯುವಕ ಸಾವು

ಕಾರವಾರ: ಐವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದ ವೇಳೆ ರೀಲ್ಸ್ ಮಾಡಲು ಸಮುದ್ರಕ್ಕೆ ಇಳಿದಾಗ ದುರಂತ ಸಂಭವಿಸಿದ್ದು, ಯುವಕನೋರ್ವ ಸಮುದ್ರಪಾಲಾಗಿ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಕುಮಟಾ ತಾಲೂಕಿನ ಕಡ್ಲೆ ಕಡಲ ತೀರದಲ್ಲಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಪುಣೆ ಮೂಲದ ಜೀವನ್ ಭಟ್ಟರಾಯಿ(26) ನೀರುಪಾಲಾದ ಯುವಕ. ಕರಾವಳಿ ಕಾವಲುಪಡೆ ಮತ್ತು ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೀವನ್​ ಭಟ್ಟರಾಯಿ ತನ್ನ ಐವರು ಸ್ನೇಹಿತರೊಂದಿಗೆ ಕುಮಟಾ ಭಾಗಕ್ಕೆ ಪ್ರವಾಸ ಬಂದಿದ್ದ. ಖಾಸಗಿ ರೆಸಾರ್ಟ್​ನಲ್ಲಿ ಮೂರು ದಿನದಿಂದ ತಂಗಿದ್ದರು. ರೀಲ್ಸ್ ಮಾಡಲು ಸ್ನೇಹಿತರು ಸಮುದ್ರಕ್ಕಿಳಿದಿದ್ದಾರೆ. ರೀಲ್ಸ್ ಮಾಡಿ ಸ್ನೇಹಿತರು ಹಿಂತಿರುಗಿದ್ದಾರೆ. ಆದರೆ ಜೀವನ್ ಸಮುದ್ರದಲ್ಲಿ​​ ಆಟವಾಡುತ್ತಿದ್ದ. ಆತ ಬರುತ್ತಾನೆ ಎಂದು ಸ್ನೇಹಿತರು ಮುಂದೆ ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಜೀವನ್​​ ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದಾನೆ. ಘಟನಾ ಸ್ಥಳಕ್ಕೆ ಪಿಎಸ್​ಐ ಖಾದರ್ ಬಾಷಾ ಭೇಟಿ ನೀಡಿ ಪರಿಶೀಲನೆ‌ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular