HomeEntertainment'ಜಾಲಿ' ಚಿತ್ರದ ಬಮ್ ಚಿಕಿ ಬಮ್ ಸಾಂಗ್ ರಿಲೀಸ್: ಯೋಗರಾಜ್ ಭಟ್ ಸಾಹಿತ್ಯಕ್ಕೆ ಫಿದಾ ಆದ...

‘ಜಾಲಿ’ ಚಿತ್ರದ ಬಮ್ ಚಿಕಿ ಬಮ್ ಸಾಂಗ್ ರಿಲೀಸ್: ಯೋಗರಾಜ್ ಭಟ್ ಸಾಹಿತ್ಯಕ್ಕೆ ಫಿದಾ ಆದ ಫ್ಯಾನ್ಸ್

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳು ಸದಾ ಸದ್ದು ಮಾಡುತ್ತವೆ. ಇದೀಗ ಅದೇ ಸಾಲಿಗೆ ಸೇರಲು ಸಜ್ಜಾಗಿರುವ ಮತ್ತೊಂದು ಹೊಸ ಸಿನಿಮಾ ಜಾಲಿ. ಸದ್ಯ ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿರುವ ಬಂ ಚಿಕಿ ಬಂ ಎಂಬ ವಿಡಿಯೋ ಹಾಡು ಅಧಿಕೃತವಾಗಿ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಯೂಟ್ಯೂಬ್ ಹಾಗೂ ಇತರೆ ವೇದಿಕೆಗಳಲ್ಲಿ ಈ ಹಾಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಕನ್ನಡದ ಖ್ಯಾತ ಸಾಹಿತಿ ಮತ್ತು ನಿರ್ದೇಶಕ ಯೋಗರಾಜ್ ಭಟ್ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ತಮ್ಮ ವಿಶಿಷ್ಟ ಶೈಲಿಯ ಪದಬಳಕೆಯ ಮೂಲಕವೇ ಗಮನ ಸೆಳೆಯುವ ಯೋಗರಾಜ್ ಭಟ್, ಈ ಬಾರಿ ಕೂಡ ಕೇಳುಗರನ್ನು ಸೆರೆಯಿಡಿಯುವಂತಹ ಸಾಹಿತ್ಯ ನೀಡಿದ್ದಾರೆ. ಈ ಹಾಡಿಗೆ ನಿತಿನ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಗಾಯಕ ಕರಿ ಬಸವ ತಮ್ಮ ಗಾಯನದ ಮೂಲಕ ಹಾಡಿಗೆ ಮತ್ತಷ್ಟು ಮೆರುಗು ನೀಡಿದ್ದಾರೆ.

ತರೀಫ್ ಪಡೆದ ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಾಡಿನಲ್ಲಿ ನಾಯಕ ನಟ ತರುಷ್ ಮತ್ತು ನಾಯಕಿ ಪದ್ಮಶ್ರೀ ಅವರ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದೆ. ಹಾಡಿನ ನೃತ್ಯ ಸಂಯೋಜನೆಯನ್ನು ಭೂಷಣ್ ಮಾಸ್ಟರ್ ಮಾಡಿದ್ದಾರೆ. ಅವರಿಗೆ ವಿನೋದ್ ಜಾಯ್ ಮತ್ತು ದಕ್ಷಿತಾ ಸಹಾಯಕ ನೃತ್ಯ ನಿರ್ದೇಶಕರಾಗಿ ಸಾಥ್ ನೀಡಿದ್ದಾರೆ. ಹಾಡಿನ ಮೇಕಿಂಗ್ ಮತ್ತು ನೃತ್ಯದ ಶೈಲಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವಂತಿದೆ.

ಟಿಬಿವೈ ಕ್ರಿಯೇಷನ್ಸ್ ಮತ್ತು ಶ್ರೀ ಆದಿಶಿವ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಬ್ರಿಜ್ ಯಾದವ್ ಮತ್ತು ನಾಗವೇಣಿ ಎನ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಯೋಗೇಶ್ವರನ್ ಆರ್ ಅವರ ಛಾಯಾಗ್ರಹಣ ಚಿತ್ರದ ದೃಶ್ಯ ವೈಭವವನ್ನು ಹೆಚ್ಚಿಸಿದೆ. ಅವರಿಗೆ ಬಾಲಾಜಿ ಜಯರಾಮನ್, ನವೀನ್ ಕುಮಾರ್ ಧುಮಾಳೆ ಮತ್ತು ಜಯಕೃಷ್ಣನ್ ಕ್ಯಾಮೆರಾ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.

ವೀರೆಶ್ ಎಸ್ ಬಾಗೇವಾಡಿ ಅವರ ಮೇಕಪ್ ಹಾಗೂ ರಮ್ಯಾ ಭೂಷಣ್, ಜಯಲಕ್ಷ್ಮಿ ಮತ್ತು ಕಲ್ಪಿತಾ ವಿನ್ಯಾಸಗೊಳಿಸಿರುವ ಕಾಸ್ಟ್ಯೂಮ್ಸ್ ಹಾಡಿನಲ್ಲಿ ಹೈಲೈಟ್ ಆಗಿ ಕಾಣಿಸಿಕೊಂಡಿವೆ. ತರುಷ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಈ ವಿಡಿಯೋ ಹಾಡು ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular