HomeLatest News'ಕ್ರಿಮಿನಲ್ ಗಂಡ ದರ್ಶನ್ ಜೈಲಿನಲ್ಲಿದ್ದರೆ ಹೆಂಡತಿ ಬಾಯ್‌ಫ್ರೆಂಡ್ ಧನ್ವೀರ್ ಜತೆ ಸುತ್ತಾಟ' ಎಂದು ವಿಡಿಯೊ ಹಂಚಿಕೊಂಡ...

‘ಕ್ರಿಮಿನಲ್ ಗಂಡ ದರ್ಶನ್ ಜೈಲಿನಲ್ಲಿದ್ದರೆ ಹೆಂಡತಿ ಬಾಯ್‌ಫ್ರೆಂಡ್ ಧನ್ವೀರ್ ಜತೆ ಸುತ್ತಾಟ’ ಎಂದು ವಿಡಿಯೊ ಹಂಚಿಕೊಂಡ ‘ಜಲಗಾರ ಯೂನಿವರ್ಸಿಟಿ’; ವಿಜಯಲಕ್ಷ್ಮಿಯಿಂದ ದೂರು!

ಚಿತ್ರದುರ್ಗದ ರೇಣುಕಾಸ್ವಾಮಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಮಾಡಿದ ಕಾರಣ ಆತನನ್ನು ದರ್ಶನ್ ಅಂಡ್ ಗ್ಯಾಂಗ್ ಕೊಲೆ ಮಾಡಿದೆ ಎಂಬ ಆರೋಪದಡಿ ಬಂಧಿಸಲಾಗಿದ್ದು, ಸದ್ಯ ಅವರೆಲ್ಲ ಜೈಲಿನಲ್ಲಿದ್ದಾರೆ.

ಇನ್ನೂ ಸಹ ಪ್ರಕರಣದ ಟ್ರಯಲ್ ಹಂತದಲ್ಲಿದ್ದು, ದರ್ಶನ್‌ಗೆ ಮುಂದಿನ ವರ್ಷದಲ್ಲಿ ಶಿಕ್ಷೆನಾ ಅಥವಾ ಅವರದ್ದು ಯಾವುದೇ ತಪ್ಪಿಲ್ಲ ಎಂದು ಬಿಡುಗಡೆ ಏನಾದರೂ ಆಗ್ತಾರಾ ಎಂಬ ಪ್ರಶ್ನೆ ಮೂಡಿದೆ.

ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಬಿಡುಗಡೆಯಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದರೆ, ಪತ್ನಿ ವಿಜಯಲಕ್ಷ್ಮಿ ಇಂತಹ ಕೆಟ್ಟ ಸಂದರ್ಭದಲ್ಲೂ ಪತಿಯ ಪರ ಹೋರಾಟ ನಡೆಸುತ್ತಿದ್ದಾರೆ. ವಿಜಯಲಕ್ಷ್ಮಿ ಅವರ ಈ ಪ್ರಯತ್ನಕ್ಕೆ ದರ್ಶನ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಹಂಚಿಕೊಂಡು ತಮ್ಮ ಅಭಿಮಾನ ಹೊರಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಒಂದೆಡೆ ದರ್ಶನ್ ಪರ ನಿಂತಿದ್ದಕ್ಕೆ ಅಭಿಮಾನಿಗಳ ಕಡೆಯಿಂದ ಮೆಚ್ಚುಗೆ ದೊರೆತರೆ ಇನ್ನೊಂದು ಕಡೆ ವಿರೋಧಿಗಳಿಂದ ಟ್ರೋಲ್ ಸಹ ವ್ಯಕ್ತವಾಗುತ್ತಿದೆ. ಈ ಹಿಂದೆ ಹಲವಾರು ಬಾರಿ ವಿಜಯಲಕ್ಷ್ಮಿ ದರ್ಶನ್ ಅವರನ್ನು ಹೀನಾಯವಾಗಿ ಟ್ರೋಲ್ ಮಾಡಲಾಗಿದ್ದು, ಈಗಲೂ ಸಹ ಅದು ಮುಂದುವರಿದ ಕಾರಣ ವಿಜಯಲಕ್ಷ್ಮಿ ದರ್ಶನ್ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.

‘ಜಲಗಾರ ಯೂನಿವರ್ಸಿಟಿ’ ಎಂಬ ಹೆಸರಿನಲ್ಲಿ ಕಿಡಿಗೇಡಿಯೊಬ್ಬ ನಕಲಿ ಖಾತೆ ತೆರೆದಿದ್ದು, ಖಾತೆಯಲ್ಲಿ ಸತತವಾಗಿ ದರ್ಶನ್ ಹಾಗೂ ಕುಟುಂಬದ ವಿರುದ್ಧ ಕೆಟ್ಟ ಪೋಸ್ಟ್ ಹರಡುತ್ತಾ ಬಂದಿದ್ದಾನೆ. ಸದ್ಯ ಆತ ಹಂಚಿಕೊಂಡ ಪೋಸ್ಟ್‌ನಲ್ಲಿ ವಿಜಯಲಕ್ಷ್ಮಿ ಅವರ ಕುರಿತು ಅಶ್ಲೀಲವಾಗಿ ಬರೆದುಕೊಂಡಿದ್ದು, ನಟ ಧನ್ವೀರ್ ಜತೆ ಸಂಬಂಧ ಹೊಂದಿದ್ದಾರೆ ಎಂದು ಹೀನಾಯವಾಗಿ ಬರೆದುಕೊಂಡಿದ್ದಾನೆ.

ಇವರೇ ನೋಡಿ ಕ್ರಿಮಿನಲ್ ದರ್ಶನ್ ಹೆಂಡತಿ, ಗಂಡ ಜೈಲಿನಲ್ಲಿದ್ದರೆ ಈಕೆ ಬಾಯ್‌ಫ್ರೆಂಡ್ ಜತೆ ಸುತ್ತಾಟ ನಡೆಸುತ್ತಿದ್ದಾಳೆ ಎಂದು ಬರೆದುಕೊಂಡು ಅನೇಕ ಅಶ್ಲೀಲ ಪದಗಳನ್ನು ಬಳಸಿ ವಿಜಯಲಕ್ಷ್ಮಿ ಮಗನ ಕುರಿತೂ ಸಹ ವಿಕೃತಿ ಮೆರೆದಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ತನ್ನನ್ನು ಬಾಯಿ ತುಂಬಾ ಅತ್ತಿಗೆ ಎಂದೇ ಕರೆಯುವ ಧನ್ವೀರ್ ಜತೆ ಚಿತ್ರ ವೀಕ್ಷಣೆಯೊಂದಕ್ಕೆ ತೆರಳಿದ್ದ ವಿಡಿಯೊವನ್ನು ಇಲ್ಲಿ ಬಳಸಿಕೊಂಡು ಹೀನಾಯ ಮನಸ್ಥಿತಿ ಪ್ರದರ್ಶಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular