HomeBusinessಚಿನ್ನಕೊಳ್ಳಲು ಹೋಗುತ್ತಿದ್ದೀರಾ? ಬರೀ ಹಾಲ್‌ಮಾರ್ಕ್ ನೋಡಿ ಖುಷಿಪಡಬೇಡಿ: ಮೊದಲು ಈ 6 ಅಂಕಿಯ ಕೋಡ್ ಚೆಕ್...

ಚಿನ್ನಕೊಳ್ಳಲು ಹೋಗುತ್ತಿದ್ದೀರಾ? ಬರೀ ಹಾಲ್‌ಮಾರ್ಕ್ ನೋಡಿ ಖುಷಿಪಡಬೇಡಿ: ಮೊದಲು ಈ 6 ಅಂಕಿಯ ಕೋಡ್ ಚೆಕ್ ಮಾಡಿ

ಬೆಂಗಳೂರು: ಚಿನ್ನದ ಆಭರಣಗಳನ್ನು ಖರೀದಿಸುವಾಗ ನಾವು ಸಾಮಾನ್ಯವಾಗಿ ಅದರ ದರ, ಲೇಟೆಸ್ಟ್ ವಿನ್ಯಾಸ ಮತ್ತು ತೂಕಕ್ಕೆ ಮಾತ್ರ ಹೆಚ್ಚು ಗಮನ ಕೊಡುತ್ತೇವೆ. ಆದರೆ ಇನ್ಮುಂದೆ ಚಿನ್ನ ಖರೀದಿಸುವಾಗ ಕೇವಲ ಇವಿಷ್ಟನ್ನೇ ನೋಡಿದರೆ ಸಾಲದು ಆಭರಣ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಪತ್ತೆಹಚ್ಚಲು ಈಗ 6 ಅಂಕಿಯ ‘HUID ಕೋಡ್’ ಪರಿಶೀಲನೆ ಅತ್ಯಂತ ಮುಖ್ಯ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.ಗ್ರಾಹಕರನ್ನು ನಕಲಿ ಹಾಗೂ ಕಡಿಮೆ ಶುದ್ಧತೆಯ ಚಿನ್ನದಿಂದ ರಕ್ಷಿಸಲು ಭಾರತೀಯ ಮಾನದಂಡಗಳ ಬ್ಯೂರೋ (BIS) ಈ ವಿಶೇಷ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಏನಿದು 6 ಅಂಕಿಯ HUID ಕೋಡ್?


HUID ಎಂದರೆ “Hallmark Unique Identification” (ಹಾಲ್‌ಮಾರ್ಕ್ ವಿಶಿಷ್ಟ ಗುರುತಿನ ಸಂಖ್ಯೆ). ಇದು ಪ್ರತಿಯೊಂದು ಹಾಲ್‌ಮಾರ್ಕ್ ಚಿನ್ನದ ಆಭರಣಕ್ಕೂ ನೀಡಲಾಗುವ ಒಂದು ವಿಶಿಷ್ಟ ಅಲ್ಫಾನ್ಯೂಮೆರಿಕ್ ಕೋಡ್ ಆಗಿದೆ. ಆಧಾರ್ ಕಾರ್ಡ್‌ನಂತೆ ಈ ಕೋಡ್ ಮೂಲಕ ಆಭರಣದ ಶುದ್ಧತೆ, ಅದನ್ನು ಹಾಲ್‌ಮಾರ್ಕಿಂಗ್ ಮಾಡಿದ ಕೇಂದ್ರ ಮತ್ತು ಜ್ಯುವೆಲ್ಲರ್ಸ್‌ನ ಸಂಪೂರ್ಣ ಮಾಹಿತಿಯನ್ನು ಪತ್ತೆಹಚ್ಚಬಹುದು. ಸರ್ಕಾರ ಈಗ ಹೊಸದಾಗಿ ಮಾರಾಟವಾಗುವ ಎಲ್ಲಾ ಚಿನ್ನದ ಆಭರಣಗಳಿಗೆ HUID ಕೋಡ್ ಅನ್ನು ಕಡ್ಡಾಯಗೊಳಿಸಿದೆ.

ಮೊಬೈಲ್‌ನಲ್ಲೇ ಚೆಕ್ ಮಾಡಬಹುದು ಚಿನ್ನದ ಅಸಲಿಯತ್ತು
ಚಿನ್ನ ಖರೀದಿಸುವ ಮುನ್ನ ಪ್ರತಿಯೊಬ್ಬ ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ ‘BIS CARE’ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಪ್ ಓಪನ್ ಮಾಡಿ ಅಲ್ಲಿರುವ ‘Verify HUID’ ಆಯ್ಕೆಗೆ ಹೋಗಿ, ನೀವು ಖರೀದಿಸುವ ಆಭರಣದ ಮೇಲಿರುವ 6 ಅಂಕಿಯ ಕೋಡ್ ಅನ್ನು ನಮೂದಿಸಬೇಕು.

ತಕ್ಷಣವೇ ಆ ಆಭರಣದ ಕಂಪ್ಲೀಟ್ ಡಿಟೇಲ್ಸ್ ಮೊಬೈಲ್ ಸ್ಕ್ರೀನ್ ಮೇಲೆ ಕಾಣಿಸುತ್ತದೆ.

ಒಂದು ವೇಳೆ ಆಪ್‌ನಲ್ಲಿ ತೋರಿಸುವ ವಿವರಗಳು ಮತ್ತು ನೀವು ಖರೀದಿಸುತ್ತಿರುವ ಆಭರಣದ ವಿವರಗಳು ಮ್ಯಾಚ್ ಆಗದಿದ್ದರೆ, ತಕ್ಷಣವೇ ಜ್ಯುವೆಲ್ಲರ್ಸ್ ಮಾಲೀಕರನ್ನು ಪ್ರಶ್ನಿಸಬೇಕು.

ಚಿನ್ನದ ಮೇಲಿರಬೇಕು ಈ 4 ಪ್ರಮುಖ ಗುರುತುಗಳು
ಅಸಲಿ ಚಿನ್ನದ ಹಾಲ್‌ಮಾರ್ಕ್‌ನಲ್ಲಿ ಸಾಮಾನ್ಯವಾಗಿ ನಾಲ್ಕು ಪ್ರಮುಖ ಗುರುತುಗಳಿರುತ್ತವೆ. ಅವುಗಳೆಂದರೆ:

BIS ಲೋಗೋ

ಶುದ್ಧತೆಯ ಗುರುತು: (ಉದಾಹರಣೆಗೆ: 22 ಕ್ಯಾರೆಟ್ ಚಿನ್ನದಲ್ಲಿ 91.6% ಶುದ್ಧ ಚಿನ್ನವಿದ್ದರೆ 22K916 ಅಂತ ಇರುತ್ತೆ. ಅದೇ 18 ಕ್ಯಾರೆಟ್ ಚಿನ್ನದಲ್ಲಿ 75% ಶುದ್ಧ ಚಿನ್ನವಿದ್ದರೆ 18K750 ಎಂದು ಇರಲಿದೆ).

ಹಾಲ್‌ಮಾರ್ಕಿಂಗ್ ಕೇಂದ್ರದ ಗುರುತು

6 ಅಂಕಿಯ HUID ಸಂಖ್ಯೆ

ಹೊಸ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ
ಹಳೆಯ ಹಾಲ್‌ಮಾರ್ಕ್ ಚಿನ್ನದ ಆಭರಣಗಳು ಇನ್ನೂ ಮಾನ್ಯವಾಗಿದ್ದರೂ, ಈಗಿನ ಹೊಸ ನಿಯಮಗಳ ಪ್ರಕಾರ HUID ಕೋಡ್ ಇಲ್ಲದ ಹೊಸ ಆಭರಣಗಳನ್ನು ಮಾರಾಟ ಮಾಡುವುದು ಸಂಪೂರ್ಣ ಕಾನೂನುಬಾಹಿರವಾಗಿದೆ. ಈಗಾಗಲೇ ದೇಶದ ಹಲವಾರು ಜಿಲ್ಲೆಗಳಲ್ಲಿ BIS ಹಾಲ್‌ಮಾರ್ಕ್ ಕಡ್ಡಾಯವಾಗಿದ್ದು, ನಿಯಮ ಉಲ್ಲಂಘಿಸುವ ಜ್ಯುವೆಲ್ಲರ್‌ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬಹುದು ಎಂದು ವರದಿಗಳು ತಿಳಿಸಿವೆ.

ತಜ್ಞರ ಸಲಹೆ: ಬಿಲ್ ಇಲ್ಲದೆ ಚಿನ್ನ ಕೊಳ್ಳಬೇಡಿ
ಚಿನ್ನ ಖರೀದಿಸುವಾಗ ಯಾವಾಗಲೂ ಜ್ಯುವೆಲ್ಲರಿ ಅಂಗಡಿಯವರಿಂದ ಸರಿಯಾದ ಬಿಲ್ ಪಡೆಯುವುದನ್ನು ಮರೆಯಬೇಡಿ. ನೀವು ಪಡೆಯುವ ಬಿಲ್ಲಿನಲ್ಲಿ ಚಿನ್ನದ ನಿಖರ ತೂಕ, ಕ್ಯಾರೆಟ್, ಹಾಲ್‌ಮಾರ್ಕ್ ಮಾಹಿತಿ ಹಾಗೂ HUID ವಿವರಗಳು ಸ್ಪಷ್ಟವಾಗಿ ನಮೂದಾಗಿರಬೇಕು. ಬಿಲ್ ಇಲ್ಲದ ಖರೀದಿ ಮುಂದಿನ ದಿನಗಳಲ್ಲಿ ಅದೇ ಚಿನ್ನವನ್ನು ಮರುಮಾರಾಟ ಮಾಡಲು ಅಥವಾ ವಿನಿಮಯ (Exchange) ಮಾಡಿಕೊಳ್ಳುವ ಸಂದರ್ಭದಲ್ಲಿ ದೊಡ್ಡ ಸಮಸ್ಯೆ ತಂದಿಡಬಹುದು.

ಇತ್ತೀಚಿನ ದಿನಗಳಲ್ಲಿ ನಕಲಿ ಹಾಲ್‌ಮಾರ್ಕ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಕೇವಲ ಅಂಗಡಿಯವರ ನಂಬಿಕೆಯ ಮೇಲೆ ಕೂರದೆ, ಸ್ವತಃ BIS CARE ಆಪ್ ಬಳಸಿ HUID ಪರಿಶೀಲನೆ ಮಾಡಿಕೊಳ್ಳುವುದೇ ಜಾಣತನ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular