HomeLatest Newsಶಿವನ ಮುಖ ತೆಗೆದು ಡಿಕೆ ಮುಖ ಹಾಕಿದ ಕನ್ನಡ ನ್ಯೂಸ್‌ಪೇಪರ್: ಪ್ರಶ್ನಿಸಿದ್ದಕ್ಕೆ ಮೋದಿಗೆ ಇದೇ ರೀತಿ...

ಶಿವನ ಮುಖ ತೆಗೆದು ಡಿಕೆ ಮುಖ ಹಾಕಿದ ಕನ್ನಡ ನ್ಯೂಸ್‌ಪೇಪರ್: ಪ್ರಶ್ನಿಸಿದ್ದಕ್ಕೆ ಮೋದಿಗೆ ಇದೇ ರೀತಿ ಮಾಡಿದಾಗ ಎಲ್ರೂ ಸುಮ್ಮನಿದ್ರಲ್ಲ ಎಂದು ಕೌಂಟರ್ ಕೊಟ್ಟ ಪತ್ರಿಕೆ!

ನಿನ್ನೆ ( ಜೂನ್ 3 ) ಡಿಕೆ ಶಿವಕುಮಾರ್ ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮುಖ ಸುದ್ದಿಯಾದ ಕಾರಣ ಕನ್ನಡದ ವಿವಿಧ ದಿನಪತ್ರಿಕೆಗಳು ವಿಭಿನ್ನವಾಗಿ ಸುದ್ದಿಯನ್ನು ಪ್ರಕಟಿಸಿದವು.

ವಿಶೇಷ ಹಾಗೂ ದೊಡ್ಡ ಸುದ್ದಿಗಳನ್ನು ಕಣ್ಸೆಳೆಯುವ ರೀತಿ ವಿನ್ಯಾಸಿಸಿ ಮುಖಪುಟ ರಚಿಸಿ ಸುದ್ದಿ ಮಾಡುವುದು ಸಾಮಾನ್ಯ. ಅದೇ ರೀತಿ ಡಿಕೆ ಶಿವಕುಮಾರ್ ಪ್ರಮಾಣವಚನ ಸುದ್ದಿಗೂ ಸಹ ಆದ್ಯತೆ ನೀಡಿಲಾಗಿತ್ತು.

ಕನ್ನಡದ ಜನಪ್ರಿಯ ದಿನಪತ್ರಿಕೆಗಳಲ್ಲಿ ಒಂದಾದ ವಿಶ್ವವಾಣಿ ಸಹ ಈ ಸುದ್ದಿಯನ್ನು ವಿಭಿನ್ನವಾಗಿ ಪ್ರಕಟಿಸಿತ್ತು. ಮುಖಪುಟದಲ್ಲಿ ‘ರಾಜ್ಯದಲ್ಲಿನ್ನು ಶಿವಡಂಗುರ’ ಎಂದು ಹೆಡ್‌ಲೈನ್ ನೀಡುವ ಮೂಲಕ ಶಿವನ ಭಾವಚಿತ್ರಕ್ಕೆ ಡಿಕೆ ಶಿವಕುಮಾರ್ ಮುಖವನ್ನು ಎಡಿಟ್ ಮಾಡಿ ಪ್ರಕಟಿಸಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದನ್ನು ಕಂಡ ಭಕ್ತರು ಪತ್ರಿಕೆ ಹಾಗೂ ಇದರ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ವಿರುದ್ಧ ಕಿಡಿಕಾರಿದ್ದರು. ಇದು ಹಿಂದೂ ದೇವರಿಗೆ ಮಾಡಿದ ಅವಮಾನ ಹಾಗೂ ಡಿಕೆ ಶಿವಕುಮಾರ್‌ಗೆ ಹಿಡಿದ ಬಕೆಟ್ ಎಂದು ಬರೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ಬಿಜೆಪಿ ನಾಯಕ, ಮಾಜಿ ಸಚಿವ ಸುರೇಶ್ ಕುಮಾರ್ ಸಹ ಈ ಫೋಟೊವನ್ನು ಹಂಚಿಕೊಂಡು ‘ಪತ್ರಿಕಾ ಸ್ವಾತಂತ್ರ್ಯ’ ಎಂದು ಬರೆದುಕೊಂಡು ವ್ಯಂಗ್ಯವಾಡಿ ವಿರೋಧಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಮೋದಿಗೂ ಸಹ ಇದೇ ರೀತಿ ಮಾಡಿದಾಗ ನೀವು ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ ಎಂದು ಕೌಂಟರ್ ಕೊಟ್ಟಿದ್ದಾರೆ.

ಸದ್ಯ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದು, ಪರ ಹಾಗೂ ವಿರೋಧಗಳು ವ್ಯಕ್ತವಾಗುತ್ತಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular