HomeLatest Newsಶಿವನ ಮುಖ ತೆಗೆದು ಡಿಕೆ ಮುಖ ಹಾಕಿದ ಕನ್ನಡದ ಪ್ರಸಿದ್ಧ ನ್ಯೂಸ್‌ಪೇಪರ್: ಹಿಂದೂ ದೇವರಿಗೆ ಅಪಮಾನ,...

ಶಿವನ ಮುಖ ತೆಗೆದು ಡಿಕೆ ಮುಖ ಹಾಕಿದ ಕನ್ನಡದ ಪ್ರಸಿದ್ಧ ನ್ಯೂಸ್‌ಪೇಪರ್: ಹಿಂದೂ ದೇವರಿಗೆ ಅಪಮಾನ, ಡಿಕೆಗೆ ಬಕೆಟ್ ಎಂದು ಭಕ್ತರ ಆಕ್ರೋಶ!

ನಿನ್ನೆಯಷ್ಟೇ ( ಜೂನ್ 3 ) ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಹಲವು ದಿನಗಳಿಂದ ತಮ್ಮ ನೆಚ್ಚಿನ ನಾಯಕ ಮುಖ್ಯಮಂತ್ರಿಯಾಗಬೇಕು ಎಂದು ಕನಸು ಇಟ್ಟುಕೊಂಡಿದ್ದ ಡಿಕೆ ಅಭಿಮಾನಿಗಳು ಸಂಭ್ರಮಿಸಿದರು.

ಇನ್ನು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಆಯ್ಕೆಯಾದದ್ದರ ಕುರಿತು ಸ್ಥಳೀಯ ಮಾಧ್ಯಮಗಳಿಂದ ಹಿಡಿದು ರಾಷ್ಟ್ರೀಯ ಮಾಧ್ಯಮಗಳವರೆಗೆ ಸುದ್ದಿ ಮಾಡಲಾಯಿತು. ಅದರಂತೆ ಕನ್ನಡದ ಪ್ರಸಿದ್ಧ ದಿನಪತ್ರಿಕೆಯಾದ ವಿಶ್ವವಾಣಿ ಸಹ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕುರಿತು ವಿವರವಾಗಿ ಸುದ್ದಿ ಮಾಡಿತ್ತು.

ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ತಮ್ಮ ಹಲವು ಬಾರಿ ಹಂಚಿಕೊಂಡಂತೆ ಈ ಬಾರಿಯೂ ಸಹ ತಮ್ಮ ಪತ್ರಿಕೆಯ ಮುಖಪುಟದ ಬಗ್ಗೆ ಫೋಟೊ ಹಂಚಿಕೊಂಡರು. ಫ್ರಂಟ್ ಪೇಜ್‌ನಲ್ಲಿ ‘ರಾಜ್ಯದಲ್ಲಿನ್ನು ಶಿವ ಡಂಗುರ’ ಎಂಬ ಹೆಡ್‌ಲೈನ್‌ ಅಡಿಯಲ್ಲಿ ಈ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಇದನ್ನು ಕಂಡು ಹಲವಾರು ಶಿವಭಕ್ತರು ಹಿಂದೂ ದೇವರಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು, ಈ ಹೆಡ್‌ಲೈನ್ ಪಕ್ಕದಲ್ಲಿ ಶಿವ ದೇವರ ದೇಹಕ್ಕೆ ಡಿಕೆ ಶಿವಕುಮಾರ್ ಫೋಟೊ ಹಾಕಲಾಗಿದ್ದು, ಇದು ಭಕ್ತರನ್ನು ಕೆರಳಿಸಿದೆ. ಈ ಟ್ವೀಟ್ ಹಾಗೂ ಫೋಟೊವನ್ನು ಸಾಮಾಜಿಕ ಜಾಲತಾಣದ ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಂಡಿರುವ ಭಕ್ತರು ಇದೇನಾ ಪತ್ರಿಕೋದ್ಯಮ, ಇದೇನಾ ಪತ್ರಿಕಾ ಸ್ವಾತಂತ್ರ್ಯ ಎಂದು ಕಿಡಿಕಾರಿದ್ದಾರೆ. ಇನ್ನೂ ಕೆಲವರು ಇದನ್ನು ಡಿಕೆಗೆ ಹಿಡಿಯಲಾದ ಬಕೆಟ್ ಎಂದು ಕಾಲೆಳೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular