HomeKarnatakaBREAKING : ಬೆಂಗಳೂರಲ್ಲಿ ಮಾಜಿ MLC ದಯಾನಂದ್ ರೆಡ್ಡಿ ಕಿಡ್ನ್ಯಾಪ್ , ದುಷ್ಕರ್ಮಿಗಳಿಂದ 3 ಕೋಟಿ...

BREAKING : ಬೆಂಗಳೂರಲ್ಲಿ ಮಾಜಿ MLC ದಯಾನಂದ್ ರೆಡ್ಡಿ ಕಿಡ್ನ್ಯಾಪ್ , ದುಷ್ಕರ್ಮಿಗಳಿಂದ 3 ಕೋಟಿ ರೂ. ಹಣಕ್ಕೆ ಡಿಮ್ಯಾಂಡ್.!

ಬೆಂಗಳೂರು: ಮಾಜಿ ಎಂಎಲ್‌ಸಿ ( ಮಾಜಿ ವಿಧಾನ ಪರಿಷತ್ ಸದಸ್ಯ) ದಯಾನಂದ್ ರೆಡ್ಡಿ ಅವರನ್ನು ಅಪಹರಿಸಿ  3 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿರುವ ಘಟನೆ ತಡರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನೇಕಲ್ ತಾಲೂಕಿನ ಹುಸ್ಕೂರು ಬಳಿ ನಡೆದಿದೆ.

ಹೌದು,  ದುಷ್ಕರ್ಮಿಗಳು  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹುಸ್ಕೂರಿನಲ್ಲಿ ಮಾಜಿ ಎಂಎಲ್‌ಸಿ ದಯಾನಂದ್ ರೆಡ್ಡಿ ಅವರನ್ನು ಗನ್ ತೋರಿಸಿ ಅಪಹರಿಸಿದ ಘಟನೆ ಬೆಳಕಿಗೆ ಬಂದಿದೆ. ಗೋಲ್ಡ್ ಕಾಯಿನ್ ಕ್ಲಬ್‌ನಿಂದ ಹೊರಬರುತ್ತಿದ್ದಾಗ ಉಡುಗೊರೆಯ ನೆಪದಲ್ಲಿ ಕಾರಿನೊಳಗೆ ನುಗ್ಗಿದ ದುಷ್ಕರ್ಮಿಗಳು, 3 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಿದ್ದಾರೆ.

ಅನೇಕಲ್ ಸಮೀಪ ನಿನ್ನೆ ಮಧ್ಯರಾತ್ರಿ 2 ಗಂಟೆಗೆ  ‘ಗೋಲ್ಡ್ ಕಾಯಿನ್ ಕ್ಲಬ್’ನಿಂದ ಹೊರಬಂದಿದ್ದ ಮಾಜಿ ಎಂಎಲ್‌ಸಿ ದಯಾನಂದ್ ಅವರು ತಮ್ಮ ಕಾರಿನಲ್ಲಿ ತೆರಳಲು ಸಿದ್ಧರಾಗಿದ್ದರು. ಈ ಸಂದರ್ಭದಲ್ಲಿ ದಾರಿ ತಡೆದ ದುಷ್ಕರ್ಮಿಗಳು, ದಯಾನಂದ್ ಅವರ ಗಮನ ಸೆಳೆಯಲು “ನಿಮಗೆ ಗಿಫ್ಟ್ (ಉಡುಗೊರೆ) ಬಂದಿದೆ” ಎಂದು ಸುಳ್ಳು ಹೇಳಿ, ಯಾವುದೋ ಬಾಕ್ಸ್ ತೋರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದನ್ನು ನಂಬಿ ಕಾರಿನ ಲಾಕ್ ತೆಗೆಯುತ್ತಿದ್ದಂತೆಯೇ, ಆರೋಪಿಗಳು ಬಲವಂತವಾಗಿ ಕಾರಿನೊಳಗೆ ನುಗ್ಗಿದ್ದಾರೆ. ನಂತರ ಗನ್ ತೋರಿಸಿ ಬೆದರಿಸಿದ ದುಷ್ಕರ್ಮಿಗಳು, ದಯಾನಂದ್ ಅವರನ್ನು ಕಾರಿನಲ್ಲೇ ಒತ್ತೆಯಾಳಾಗಿ ಇರಿಸಿಕೊಂಡು, ವಾಹನವನ್ನು ತಮಗೆ ಬೇಕಾದ ಕಡೆಗೆ ಚಲಾಯಿಸುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಅಲ್ಲಿಗೆ ಮತ್ತೊಂದು ಕೆಂಪು ಕಾರೊಂದು ಬಂದಿದ್ದು, ಅವರನ್ನು ಹಿಂಬಾಲಿಸಿದೆ. ನಂತರ  ಅತ್ತಿಬೆಲೆಯ KHB ಬಡಾವಣೆ ಬಳಿ ಕರೆದೊಯ್ದು ಪ್ರಾಣ ಬೆದರಿಕೆ ಹಾಕಿದ್ದಾರೆ. ನಿನ್ನ ಕೊಲ್ಲಲು 10 ಕೋಟಿ ಸುಫಾರಿ ಕೊಟ್ಟಿದ್ದಾರೆ” ಎಂದು ಕುತ್ತಿಗೆಗೆ ಗನ್ ಇಟ್ಟು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಆರೋಪಿಗಳು 3 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ.

ಕೂಡಲೇ  ದಯಾನಂದ ರೆಡ್ಡಿಯವರು ಆ ಹಣವನ್ನ ನಾನೇ ಕೊಡುತ್ತೇನೆ ನನಗೆ ಏನೂ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಅಂತೆಯೇ  ಮೊದಲು ಮೂರು ಕೋಟಿ ಡಿಮ್ಯಾಂಡ್ ಮಾಡಿದ ಕಿಡ್ನಾಪರ್ಸ್, ನಂತರ ಎರಡು ಕೋಟಿಗೆ ಒಪ್ಪಿಕೊಂಡಿದ್ದಾರೆ. ಆದರೆ, ಈಗ ಹಣ ಇಲ್ಲ ಬೆಳಗ್ಗೆ ಬ್ಯಾಂಕ್ ನಲ್ಲಿ ಡ್ರಾ ಮಾಡುವುದಾಗಿ ಮನವಿ ಮಾಡಿದ್ದಾರೆ.  ಹಣ ಡ್ರಾ ಮಾಡಿದ ಬಳಿಕ ಫೋನ್ ಮಾಡುವಂತೆ ತಿಳಿಸಿ, ಫೋನ್ ನಂಬರ್ ನೀಡಿ ಮುಂಜಾನೆ 4 ಗಂಟೆ ಸುಮಾರಿಗೆ ಬಿಟ್ಟು ಕಳುಹಿಸಿರುವುದಾಗಿ ದೂರು ನೀಡಿದ್ದಾರೆ. ಈ ಸಂಬಂಧ  ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular