HomeLatest Newsಸಿಎಂ ಗದ್ದುಗೆ ಏರಲಿರುವ ಡಿ.ಕೆ. ಶಿವಕುಮಾರ್ :ಕುತ್ತಿಗೆಯ ಸ್ಕಾರ್ಫ್‌ನಿಂದ ಕೋಟಿ ಮೌಲ್ಯದ ರೋಲೆಕ್ಸ್ ವಾಚ್‌ವರೆಗೆ ಡಿಕೆಶಿ ಬ್ರ್ಯಾಂಡ್...

ಸಿಎಂ ಗದ್ದುಗೆ ಏರಲಿರುವ ಡಿ.ಕೆ. ಶಿವಕುಮಾರ್ :ಕುತ್ತಿಗೆಯ ಸ್ಕಾರ್ಫ್‌ನಿಂದ ಕೋಟಿ ಮೌಲ್ಯದ ರೋಲೆಕ್ಸ್ ವಾಚ್‌ವರೆಗೆ ಡಿಕೆಶಿ ಬ್ರ್ಯಾಂಡ್ ವ್ಯಾಲ್ಯೂ ಎಷ್ಟು ಗೊತ್ತಾ?

ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಈಗ ಬಹುದೊಡ್ಡ ಆಡಳಿತಾತ್ಮಕ ಬದಲಾವಣೆಯ ಪರ್ವ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಗಮನದ ನಂತರ, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಪೂರ್ವಾಧಿಕಾರಿಗಿಂತ ಸಂಪೂರ್ಣ ತದ್ವಿರುದ್ಧ ಶೈಲಿಯನ್ನು ಹೊಂದಿದ್ದಾರೆ. ಸಿದ್ದರಾಮಯ್ಯ ಅವರು ಬಿಳಿ ಖಾದಿ ಪಂಚೆ, ಶರಟು, ಹೆಗಲ ಮೇಲೊಂದು ಟವೆಲ್ ಧರಿಸುವ ಸಾಂಪ್ರದಾಯಿಕ ಶೈಲಿಯವರಾಗಿದ್ದರೆ (ಅವರು ಬಳಸುವ ವಾಚ್, ಕಾರು, ಕನ್ನಡಕ ದುಬಾರಿಯಾಗಿದ್ದರೂ), ಡಿ.ಕೆ. ಶಿವಕುಮಾರ್ ತಾವು ಲಕ್ಸುರಿ ಬ್ರಾಂಡ್‌ಗಳ ಅಂಬಾಸಿಡರ್ ಎಂಬುದನ್ನು ಬಹಿರಂಗವಾಗಿಯೇ ತೋರ್ಪಡಿಸಿಕೊಂಡವರು. ದೇಶದ ಅತ್ಯಂತ ಶ್ರೀಮಂತ ಶಾಸಕರಲ್ಲಿ ಒಬ್ಬರಾಗಿರುವ ‘ಕನಕಪುರ ಬಂಡೆ’, ಬುಧವಾರದ ಪ್ರಮಾಣವಚನದ ನಂತರ ದೇಶದ ಅತಿ ಶ್ರೀಮಂತ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಟಾಪ್ ಟು ಬಾಟಮ್ ಎಲ್ಲವೂ ಇಂಟರ್ನ್ಯಾಷನಲ್ ಬ್ರಾಂಡ್ ಬಳಸುವ ಡಿ.ಕೆ. ಶಿವಕುಮಾರ್ ಅವರ ಐಷಾರಾಮಿ ಲೈಫ್‌ಸ್ಟೈಲ್ ಮತ್ತು ಅವರು ಬಳಸುವ ದುಬಾರಿ ವಸ್ತುಗಳ ಒಂದು ರೋಚಕ ಲೆಕ್ಕಾಚಾರ ಇಲ್ಲಿದೆ:

ಡಿಕೆಶಿ ಸಿಗ್ನೇಚರ್ ಸ್ಟೈಲ್: ಕುತ್ತಿಗೆಯ ಸ್ಕಾರ್ಫ್ ಮತ್ತು ಬ್ರಾಂಡೆಡ್ ವಸ್ತುಗಳ ರೇಟ್ ಕಾರ್ಡ್

ಜನಸಾಮಾನ್ಯರಿಗೆ ಕೇವಲ ಹೆಸರಷ್ಟೇ ಗೊತ್ತಿರುವ ವಿಶ್ವದ ಅತ್ಯಂತ ದುಬಾರಿ ಬ್ರಾಂಡ್‌ಗಳಾದ Gucci (ಗುಚ್ಚಿ)‌, Louis Vuitton (ಲೂಯಿ ವುಯಿಟ್ಟನ್), Ferragamo (ಫೆರಾಗಮೋ), Burberry (ಬರ್ಬೆರಿ), ಹಾಗೂ Fendi (ಫೆಂಡಿ) ಉತ್ಪನ್ನಗಳೇ ಡಿಕೆಶಿಯವರ ಮೊದಲ ಆಯ್ಕೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

Gucci (ಗುಚ್ಚಿ) ಬ್ರಾಂಡ್ ಅಟೈರ್:

ಸಿಗ್ನೇಚರ್ ಸ್ಕಾರ್ಫ್ / ಶಾಲು: ಕಳೆದ ಕೆಲವು ವರ್ಷಗಳಿಂದ ಡಿಕೆಶಿ ಕುತ್ತಿಗೆಗೆ ಸುತ್ತಿಕೊಳ್ಳುವ ಸ್ಕಾರ್ಫ್ ಅವರ ಸ್ಟೈಲ್ ಐಕಾನ್ ಆಗಿದೆ. ಇದರ ಬೆಲೆ ₹25,000 ದಿಂದ ₹80,000 ವರೆಗ ಇರುತ್ತದೆ.

ಕೂಲಿಂಗ್ ಗ್ಲಾಸ್ (Sunglasses): ಕನಿಷ್ಠ ₹35,000 ದಿಂದ ಆರಂಭವಾಗಿ ಗರಿಷ್ಠ ₹70,000 ಕ್ಕೂ ಹೆಚ್ಚು.

ಶೂಸ್: ಕನಿಷ್ಠ ₹60,000 ದಿಂದ ಗರಿಷ್ಠ ₹1.50,000 (ಒಂದೂವರೆ ಲಕ್ಷ) ಕ್ಕೂ ಹೆಚ್ಚು.

ವಾಚ್: ಆರಂಭಿಕ ಬೆಲೆಯೇ ₹1,009,000+ ದಾಟುತ್ತದೆ.

Louis Vuitton (ಲೂಯಿ ವುಯಿಟ್ಟನ್):
ಬಟ್ಟೆಗಳು: ಕನಿಷ್ಠ ₹1.5 ಲಕ್ಷದಿಂದ ಗರಿಷ್ಠ ₹4 ಲಕ್ಷಕ್ಕೂ ಹೆಚ್ಚು.

ಸ್ಕಾರ್ಫ್: ಕನಿಷ್ಠ ₹50,000 ದಿಂದ ಗರಿಷ್ಠ ₹1 ಲಕ್ಷದವರೆಗೆ.

ಶೂಸ್: ಕನಿಷ್ಠ ₹1 ಲಕ್ಷದಿಂದ ಗರಿಷ್ಠ ₹3 ಲಕ್ಷದವರೆಗೆ.

ವಾಚ್: ಹೈ-ಎಂಡ್ ಮಾಡೆಲ್‌ಗಳು ಕೋಟಿ ರೂಪಾಯಿಗಳನ್ನು ದಾಟುತ್ತವೆ.

Ferragamo (ಫೆರಾಗಮೋ):
ಶೂಸ್ (ಇದಕ್ಕೆ ಅತ್ಯಂತ ಪ್ರಸಿದ್ಧ): ಕನಿಷ್ಠ ₹50,000 ದಿಂದ ಗರಿಷ್ಠ ₹1.5 ಲಕ್ಷಕ್ಕೂ ಹೆಚ್ಚು.

ಬಟ್ಟೆ ಮತ್ತು ಆಕ್ಸೆಸರೀಸ್: ₹25,000 ದಿಂದ ಹಿಡಿದು ₹2 ಲಕ್ಷದವರೆಗೆ.

ಕೋಟಿ ಕೋಟಿ ಮೌಲ್ಯದ ಗಡಿಯಾರಗಳು ಮತ್ತು ಪೆನ್ನುಗಳ ಕಲೆಕ್ಷನ್:

ಡಿ.ಕೆ. ಶಿವಕುಮಾರ್ ಅವರ ವಾಚ್ ಕಲೆಕ್ಷನ್ ಅತ್ಯಂತ ಅದ್ಭುತವಾಗಿದ್ದು, ಇವರ ಬಳಿ ವಿಶ್ವದ ಟಾಪ್ ಬ್ರ್ಯಾಂಡ್‌ಗಳಾದ Rolex Cosmograph Daytona, Cartier Santos, ಮತ್ತು Hublot ನಂತಹ ಲಕ್ಷಾಂತರ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಹೈ-ಎಂಡ್ ಗಡಿಯಾರಗಳಿವೆ. ಇದರೊಂದಿಗೆ Louis Vuitton ನ ಸನ್‌ಗ್ಲಾಸ್‌ಗಳು ಮತ್ತು ಕಲೆಕ್ಟಬಲ್ ಐಷಾರಾಮಿ ಡಿಸೈನರ್ ಪೆನ್ನುಗಳನ್ನು ಇವರು ಬಳಸುತ್ತಾರೆ.

DKS ಚಾರಿಟಬಲ್ ಇನ್‌ಸ್ಟಿಟ್ಯೂಟ್ ಟ್ರಸ್ಟ್ ಮತ್ತು ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಟ್ರಸ್ಟ್ ಮೂಲಕ ನಡೆಯುತ್ತಿರುವ ಪ್ರಮುಖ ಸಂಸ್ಥೆಗಳು:

ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ (GAT): ರಾಜರಾಜೇಶ್ವರಿನಗರದಲ್ಲಿರುವ ಪ್ರಸಿದ್ಧ ಸ್ವಾಯತ್ತ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು.

ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ (NHVPS): ಬನಶಂಕರಿ ಮತ್ತು ಆರ್‌ಆರ್ ನಗರದಲ್ಲಿ ಶಾಖೆಗಳನ್ನು ಹೊಂದಿರುವ ಪ್ರತಿಷ್ಠಿತ ಕೆ-12 ಶಾಲೆ.

IKON ಫಾರ್ಮಸಿ ಮತ್ತು ನರ್ಸಿಂಗ್ ಕಾಲೇಜುಗಳು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿದೆ.

ಗ್ಲೋಬಲ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್: ಬೆಂಗಳೂರು.

ಡಿ.ಕೆ. ಶಿವಕುಮಾರ್ ಕಾಲೇಜ್ ಆಫ್ ಎಜುಕೇಶನ್: ಭದ್ರಾವತಿಯಲ್ಲಿರುವ ಶಿಕ್ಷಕರ ತರಬೇತಿ ಸಂಸ್ಥೆ (B.Ed).

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular