HomeSportsIPL 2026: ಆತ 3 ಓವರ್‌ ಬೌಲಿಂಗ್ ಮಾಡಿದರೆ ಆರ್‌ಸಿಬಿ ಕಥೆ ಮುಗಿಯಿತು, ಫೈನಲ್‌ನಲ್ಲಿ ಪಕ್ಕಾ...

IPL 2026: ಆತ 3 ಓವರ್‌ ಬೌಲಿಂಗ್ ಮಾಡಿದರೆ ಆರ್‌ಸಿಬಿ ಕಥೆ ಮುಗಿಯಿತು, ಫೈನಲ್‌ನಲ್ಲಿ ಪಕ್ಕಾ ಸೋಲ್ತಾರೆ; ಆತ ತಂಡದಲ್ಲೇ ಇರಬಾರದು ಎಂದ ಶ್ರೀಕಾಂತ್!

ಇಂದು ( ಮೇ 31 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಕಳೆದ ಎರಡು ತಿಂಗಳ ಕಾಲ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026ಕ್ಕೆ ತೆರೆ ಬೀಳಲಿದೆ.

ಈ ಬಾರಿಯ ಟೂರ್ನಿಯ ಲೀಗ್ ಹಂತದ ಅಂಕಪಟ್ಟಿಯಲ್ಲಿ ಟಾಪ್ ಎರಡು ಸ್ಥಾನಗಳನ್ನು ಪಡೆದು ಕ್ವಾಲಿಫಯರ್ ಒಂದನೇ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳೇ ಫೈನಲ್ ಪಂದ್ಯದಲ್ಲಿ ಮತ್ತೆ ಮುಖಾಮುಖಿಯಾಗುತ್ತಿವೆ.

ಇನ್ನು ಈ ಪಂದ್ಯದಲ್ಲಿ ಗೆಲ್ಲಲಿರುವ ತಂಡ ಟೂರ್ನಿಯಲ್ಲಿ ತನ್ನ ಎರಡನೇ ಟ್ರೋಫಿಯನ್ನು ಗೆಲ್ಲಲಿದ್ದು, ಯಾವ ತಂಡ ಈ ಸಾಧನೆ ಮಾಡಲಿದೆ ಎಂಗ ಕುತೂಹಲ ಮೂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪಂದ್ಯದಲ್ಲಿ ಕಣಕ್ಕಿಳಿಯುವ ಆಡುವ ಬಗಳಗಗಳು ಹೇಗಿದ್ದರೆ ಎದುರಾಳಿ ತಂಡಗಳಿಗೆ ಟಕ್ಕರ್ ಕೊಡಬಹುದು ಎನ್ನುವುದರ ಕುರಿತು ಹೆಚ್ಚು ಚರ್ಚೆಗಳು ನಡೆಯುತ್ತಿದ್ದು, ಭಾರತದ ಮಾಜಿ ಕ್ರಿಕೆಟಿಗ ಕ್ರಿಸ್ ಶ್ರೀಕಾಂತ್ ಸಹ ಆರ್‌ಸಿಬಿ ಹಾಗೂ ಗುಜರಾತ್ ತಂಡಗಳಿಗೆ ಕೆಲ ಸಲಹೆಗಳನ್ನು ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಕ್ರಿಸ್ ಶ್ರೀಕಾಂತ್ ಆರ್‌ಸಿಬಿಯ ಓರ್ವ ಆಟಗಾರ ತಂಡದಲ್ಲಿದ್ದರೆ ತಂಡ ಸೋಲನ್ನು ಕಾಣಲಿದೆ ಎಂದಿದ್ದಾರೆ. ಹೌದು, ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಆರ್‌ಸಿಬಿ ಆಡುವ ಬಗಳಗದ ಕುರಿತು ಮಾತನಾಡಿದ ಕ್ರಿಸ್ ಶ್ರೀಕಾಂತ್ ‘ ಫಿಲ್ ಸಾಲ್ಟ್ ಫಿಟ್‌ನೆಸ್ ಬಗ್ಗೆ ಯಾವುದೇ ಸುದ್ದಿಯಿಲ್ಲ. ಆತ ಚೇತರಿಸಿಕೊಂಡಿದ್ದರೂ ಸಹ ಆಡುವ ಬಳಗಕ್ಕೆ ಕರೆದುಕೊಳ್ಳಬಾರದು. ಏಕೆಂದರೆ ಬದಲಿ ಆಟಗಾರನಾಗಿ ವೆಂಕಟೇಶ್ ಐಯ್ಯರ್ ಒಳ್ಳೆಯ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಆರ್‌ಸಿಬಿ ಸೋಲಲು ಇರುವ ಒಂದೇ ಮಾರ್ಗವೆಂದರೆ ಅದು ರೊಮಾರಿಯೊ ಶೆಫರ್ಡ್ ಮೂರು ಓವರ್‌ಗಳನ್ನು ಬೌಲಿಂಗ್ ಮಾಡಿದರೆ. ಹೌದು, ಆತನೇನಾದರೂ ಮೂರು ಓವರ್‌ ಬೌಲಿಂಗ್ ಮಾಡಿದರೆ ಆರ್‌ಸಿಬಿ ಕಥೆ ಮುಗಿದಂತೆ. ಶೆಫರ್ಡ್ ಬೌಲಿಂಗ್ ಮಾಡಕೂಡದು. ಆತ ಆಡುವ ಬಳಗದಲ್ಲೇ ಇರಬಾರದು’ ಎಂದು ಕ್ರಿಸ್ ಶ್ರೀಕಾಂತ್ ಬೋಲ್ಡ್ ಹೇಳಿಕೆ ನೀಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular