HomeIPL 2026ಅಯ್ಯೋ ಇದೆಂಥ ದುರಾದೃಷ್ಟ ಗುರು: ಆರ್‌ಸಿಬಿ ವಿರುದ್ಧ ಅಬ್ಬರದ ಬೌಂಡರಿ ಬಾರಿಸಿ ಅದೇ ಎಸೆತದಲ್ಲಿ ಔಟ್...

ಅಯ್ಯೋ ಇದೆಂಥ ದುರಾದೃಷ್ಟ ಗುರು: ಆರ್‌ಸಿಬಿ ವಿರುದ್ಧ ಅಬ್ಬರದ ಬೌಂಡರಿ ಬಾರಿಸಿ ಅದೇ ಎಸೆತದಲ್ಲಿ ಔಟ್ ಆದ ಗುಜರಾತ್ ಆಟಗಾರ; ವಿಡಿಯೊ

ನಿನ್ನೆ ( ಮೇ 26 ) ಧರಂಶಾಲಾ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಐಪಿಎಲ್ 2026ರ ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ಆರ್‌ಸಿಬಿ ಗುಜರಾತ್ ವಿರುದ್ಧ 92 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದುಕೊಂಡಿತು. ಈ ಮೂಲಕ ಕಳೆದ ಬಾರಿ ಟ್ರೋಫಿ ಗೆದ್ದಿದ್ದ ಆರ್‌ಸಿಬಿ ಸತತ ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ಬೌಲಿಂಗ್ ಆರಿಸಿಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿ ಗುಜರಾತ್ ಟೈಟನ್ಸ್‌ಗೆ 255 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿ ಆರ್‌ಸಿಬಿ ಬೌಲಿಂಗ್ ದಾಳಿಗೆ ನಲುಗಿದ ಗುಜರಾತ್ ಟೈಟನ್ಸ್ 19.3 ಓವರ್‌ಗಳಲ್ಲಿ 162 ರನ್‌ಗಳಿಗೆ ಆಲ್‌ಔಟ್ ಆಯಿತು.

ಹೀಗೆ ಸೋಲುಂಡ ಗುಜರಾತ್ ಟೈಟನ್ಸ್ ಎಲಿಮಿನೇಟರ್‌ನಲ್ಲಿ ಗೆಲ್ಲಲಿರುವ ತಂಡದ ಜತೆ ಎರಡನೇ ಕ್ವಾಲಿಫಯರ್‌ನಲ್ಲಿ ಎರಡನೇ ಬಾರಿಗೆ ಫೈನಲ್ ಪ್ರವೇಶಕ್ಕಾಗಿ ಸೆಣಸಾಟ ನಡೆಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಈ ಪಂದ್ಯದಲ್ಲಿ ಆರ್‌ಸಿಬಿ ನೀಡಿದ ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ಪರ ಆರಂಭಿಕರಾಗಿ ಕಣಕ್ಕಿಳಿದ ಸಾಯಿ ಸುದರ್ಶನ್ 9 ಎಸೆತಗಳಲ್ಲಿ 14 ರನ್ ಬಾರಿಸಿ ಔಟ್ ಆದರು. ಜೇಕಬ್ ಡಫಿ ಎಸೆದ ಮೊದಲ ಓವರ್‌ನಲ್ಲಿ ಎರಡು ಬೌಂಡರಿ ಬಾರಿಸಿದ ಸಾಯಿ ಸುದರ್ಶನ್ ಮತ್ತೆ ಡಫಿ ಎಸೆದ ಮೂರನೇ ಓವರ್‌ನ ಎರಡನೇ ಎಸೆತಕ್ಕೆ ಭರ್ಜರಿ ಬೌಂಡರಿ ಬಾರಿಸಿ ಮೂರನೇ ಎಸೆತಕ್ಕೂ ಬೌಂಡರಿ ಚಚ್ಚಿದರು. ಸಾಯಿ ಬಾರಿಸಿದ ರಭಸಕ್ಕೆ ರಾಕೆಟ್‌ನಂತೆ ಚೆಂಡು ಬೌಂಡರಿಗೆ ಸಾಗಿತು. ಆದರೆ ಸಾಯಿ ಸುದರ್ಶನ್ ಕೈನಿಂದ ಜಾರಿದ ಬ್ಯಾಟ್ ವಿಕೆಟ್‌ಗೆ ಬಡಿದು ಹಿಟ್ ವಿಕೆಟ್ ಆಗಿ ಔಟ್ ಆದರು.

ಈ ಮೂಲಕ ಸಾಯಿ ಸುದರ್ಶನ್ ಬೌಂಡರಿ ಬಾರಿಸಿದರೂ ಬ್ಯಾಟ್ ವಿಕೆಟ್‌ಗೆ ಬಡಿದ ಕಾರಣ ಹಿಟ್ ವಿಕೆಟ್ ಆಗಿ ವಿಚಿತ್ರ ಡಿಸ್ಮಿಸಲ್ ಪಟ್ಟಿ ಸೇರಿಕೊಂಡರು. ಸಾಯಿ ಔಟ್ ಆದ ಪರಿ ಸದ್ಯ ಭಾರೀ ವೈರಲ್ ಆಗಿದ್ದು, ಎಂಥ ಅನ್‌ಲಕ್ಕಿ ಆಟಗಾರ ಎಂದು ಕಾಮೆಂಟ್‌ಗಳು ಬರುತ್ತಿವೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular