HomeLatest NewsBIG NEWS: ನಟಿ ಟ್ವಿಶಾ ಶರ್ಮಾ ನಿಗೂಢ ಸಾವು ಪ್ರಕರಣ: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ...

BIG NEWS: ನಟಿ ಟ್ವಿಶಾ ಶರ್ಮಾ ನಿಗೂಢ ಸಾವು ಪ್ರಕರಣ: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ಪತಿ

ಭೋಪಾಲ್: ನಟಿ, ಮಾಡೆಲ್ ಟ್ವಿಶಾ ಶರ್ಮಾ ನಿಗೂಢ ಸಾವು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪತಿ ವಕೀಲ ಸರ್ಮರ್ಥ್ ಸಿಂಗ್ ಮಧ್ಯಪ್ರದೇಶ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾರೆ.

ಭೋಪಾಲ್ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ ಬಳಿಕ ಗುರುವಾರ ಸಮರ್ಥ್ ಸಿಂಗ್ ಹೈಕೋರ್ಟ್ ನಲ್ಲಿ ನಿರೀಕ್ಷಣ ಅಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದಿರುವುದಾಗಿ ಸಮರ್ಥ್ ಪರ ವಕೀಲ ಜಯದೀಪ್ ಕೌರ್ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಪೊಲೀಸರ ಮುಂದೆ ಶರಣಾಗಲೇಬೇಕಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇ 12ರಂದು ಟ್ವಿಶಾ ಶರ್ಮಾ ಅವರ ಮೃತದೇಹ ಭೋಪಾಲ್ ನ ಕತಾರ ಹಿಲ್ಸ್ ಪ್ರದೇಶದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯ ಕತ್ತಿನ ಭಾಗದಲ್ಲಿ ಹಾಗೂ ದೇಹದ ಮೇಲ್ಲೆ ಗಾಯದ ಗುರುತುಗಳು ಪತ್ತೆಯಾಗಿದ್ದವು. ವರದಕ್ಷಿಣೆ ಕಿರುಕುಳ ಹಾಗೂ ಹಿಂಸೆ ನೀಡಿ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಟ್ವಿಶಾ ಶರ್ಮಾ ಪೋಷಕರು ಆರೋಪಿಸಿದ್ದಾರೆ. ಟ್ವಿಶಾ ಮಾದಕ ವ್ಯಸನಿಯಾಗಿದ್ದಳು. ಬೇರೆಯವರೊಂದಿಗೆ ಸಂಬಂಧವಿತ್ತು ಎಂದು ಸಮರ್ಥ್ ಕುಟುಂಬದವರು ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೇ ಟ್ವಿಶಾ ಅವರ ಅಣ್ಣನ ಜೊತೆ ಸಮರ್ಥ್ ತಾಯಿ ಮಾತನಾಡುತ್ತಿರುವ ಕೆಲ ಆರೋಪಗಳ ಆಡಿಯೋ ವೈರಲ್ ಆಗಿದೆ. ಈ ನಡುವೆ ಟ್ವಿಶಾ ಪೋಷಕರು ಮತ್ತೊಮ್ಮೆ ಮಗಳ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದು, ಕೋರ್ಟ್ ಕೂಡ ಇದಕ್ಕೆ ಒಪ್ಪಿದೆ.

ಕೇಸ್ ದಾಖಲಾಗುತ್ತಿದ್ದಂತೆ ಪತಿ ಸಮರ್ಥ್ ಸಿಂಗ್ ತಲೆ ಮರೆಸಿಕೊಂಡಿತ್ತು. ಅತ್ತೆ ನಿವೃತ್ತ ಜಡ್ಜ್ ಗಿರಿಬಾಲಾ ಸಿಂಗ್ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ಸಮರ್ಥ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಆತನ ಬಗ್ಗೆ ಸುಳಿವು ನೀಡಿದವರಿಗೆ 30 ಸಾವಿರ ನಗದು ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular