HomeKarnatakaಪಾಗಲ್ ಪ್ರೇಮಿಯ ಹುಚ್ಚಾಟ: ಮದುವೆಗೆ ಒಪ್ಪಿಲ್ಲವೆಂದು ತಾಯಿ-ಮಗಳ ಮೇಲೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ

ಪಾಗಲ್ ಪ್ರೇಮಿಯ ಹುಚ್ಚಾಟ: ಮದುವೆಗೆ ಒಪ್ಪಿಲ್ಲವೆಂದು ತಾಯಿ-ಮಗಳ ಮೇಲೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ

ಚಿಕ್ಕಮಗಳೂರು: ಇಲ್ಲೋರ್ವ ಪಾಗಲ್ ಪ್ರೇಮಿ ತಾಯಿ ಹಾಗೂ ಮಗಳ ಮೇಲೆ ಮಾರಣಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯ ಬಳಿ ಈ ಘಟನೆ ನಡೆದಿದೆ. ತಾಯಿ ಲಕ್ಷ್ಮೀ ಹಾಗೂ ಮಗಳು ಕೃಪಾ ಮೇಲೆ ಕಬ್ಬಿಣದ ರಾಡ್ ನಿಂದ ಪಾಗಲ್ ಪ್ರೇಮಿ ಹಲ್ಲೆ ನಡೆಸಿದ್ದಾನೆ. ಶಂಕರಪುರ ನಿವಾಸಿ ಕುಮಾರ್ ಎಂಬಾತ ಹಲ್ಲೆ ನಡೆಸಿರುವ ಆರೋಪಿ. ಹಲ್ಲೆಯಿಂದಾಗಿ ತಾಯಿ-ಮಗಳು ಇಬ್ಬರೂ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ದಾಳಿ ಬಳಿಕ ಆರೋಪಿ ಕುಮಾರ್ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಕೃಪಾಳನ್ನು ಕುಮಾರ್ ಪ್ರೀತಿಸುತ್ತಿದ್ದನಂತೆ. ಆಕೆಯನ್ನು ತನಗೆ ಮದುವೆ ಮಾಡಿಕೊಡುವಂತೆ ಕೃಪಾಳ ತಾಯಿ ಲಕ್ಷ್ಮೀಗೆ ನಿತ್ಯವೂ ಪೀಡಿಸುತ್ತಿದ್ದನಂತೆ. ತನ್ನನ್ನು ಮದುವೆಯಾಗುವಂತೆ ಕೃಪಾಳಿಗೆ ಕಿರುಕುಳ ನೀಡುತ್ತಿದ್ದನಂತೆ. ಆದರೆ ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದ್ದಲ್ಲದೇ ಮದುವೆಯಾಗಲು ಒಪ್ಪಿರಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒನ್ ಸೈಡ್ ಲವ್ ಆಗಿದ್ದಕ್ಕೆ ಯುವತಿ ಮದುವೆಯಾಗಲು ನಿರಾಕರಿಸಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿ ಸ್ಕೂಟಿಯಲ್ಲಿ ತೆರಳುತ್ತಿದ್ದ ತಾಯಿ-ಮಗಳನ್ನು ಅಡ್ಡಗಟ್ಟಿ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ. ತಾಯಿ- ಮಗಳು ಇಬ್ಬರೂ ತಪ್ಪಿಸಿಕೊಳ್ಳಲು ಖಾಸಗಿ ಶಾಲೆಯ ಕಾಂಪೌಂಡ್ ಒಳಗೆ ಓಡಿದರೂ ಬಿಡದೇ ಹಿಂಬಾಲಿ ರಾಡ್ ನಿಂದ ಹೊಡೆದಿದ್ದಾನೆ. ಬಳಿಕ ಠಾಣೆಗೆ ಬಂದು ಶರಣಾಗಿದ್ದಾನೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular