HomeKarnatakaBREAKING : ನೇಮಕಗೊಂಡ ಜನಗಣತಿ ಕಾರ್ಯಕರ್ತರನ್ನು ಮಾರ್ಚ್ 31 ರವರೆಗೆ ವರ್ಗಾವಣೆ ಮಾಡದಂತೆ ರಾಜ್ಯ ಸರ್ಕಾರ...

BREAKING : ನೇಮಕಗೊಂಡ ಜನಗಣತಿ ಕಾರ್ಯಕರ್ತರನ್ನು ಮಾರ್ಚ್ 31 ರವರೆಗೆ ವರ್ಗಾವಣೆ ಮಾಡದಂತೆ ರಾಜ್ಯ ಸರ್ಕಾರ ಆದೇಶ

2027ರ ಜನಗಣತಿ ಕಾರ್ಯವು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು, ಕರ್ನಾಟಕ ಸರ್ಕಾರವು ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಜನಗಣತಿ ಕಾರ್ಯಕ್ಕಾಗಿ ನೇಮಕಗೊಂಡು ತರಬೇತಿ ಪಡೆದಿರುವ ರಾಜ್ಯ, ಜಿಲ್ಲಾ, ತಾಲೂಕು ಮತ್ತು ಬ್ಲಾಕ್ ಮಟ್ಟದ ಅಧಿಕಾರಿಗಳನ್ನು ಮಾರ್ಚ್ 31, 2027 ರವರೆಗೆ ವರ್ಗಾವಣೆ ಮಾಡದಂತೆ ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಕ2027ರ ಜನಗಣತಿ ಕಾರ್ಯಕ್ಕೆ ನಿಯೋಜಿತರಾಗಿರುವ ಮತ್ತು ತರಬೇತಿ ಪಡೆದಿರುವ ಅಧಿಕಾರಿಗಳನ್ನು ಮಾರ್ಚ್ 31, 2027 ರವರೆಗೆ ವರ್ಗಾವಣೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ, 1948ರ ಜನಗಣತಿ ಕಾಯ್ದೆ ಮತ್ತು 1990ರ ಜನಗಣತಿ ನಿಯಮಗಳಡಿ 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ.ಜನಗಣತಿ ಕಾರ್ಯಗಳಿಗೆ ನಿಯೋಜಿತರಾಗಿರುವ ರಾಜ್ಯ, ಜಿಲ್ಲಾ, ತಾಲೂಕು ಮತ್ತು ಬ್ಲಾಕ್ ಮಟ್ಟದ ಅಧಿಕಾರಿಗಳು ತಮ್ಮ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸಬೇಕಾಗಿರುವುದರಿಂದ, ಅವರನ್ನು ಮಾರ್ಚ್ 31, 2027 ರವರೆಗೆ ವರ್ಗಾವಣೆ ಮಾಡದಂತೆ ಸೂಚಿಸಲಾಗಿದೆ.

ಜನಗಣತಿ ಕಾರ್ಯಕ್ಕಾಗಿ ತರಬೇತಿ ಪಡೆದ ಮತ್ತು ನಿಯೋಜಿತರಾದ ಅಧಿಕಾರಿಗಳ ಇಲಾಖಾವಾರು ವಿವರಗಳನ್ನು ಮುಂದಿನ 03 ದಿನಗಳ ಒಳಗಾಗಿ ಸರ್ಕಾರಕ್ಕೆ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.ಈ ಮಾಹಿತಿಯನ್ನು ನಿಗದಿತ Google Spread Sheet ಲಿಂಕ್ ಮೂಲಕ ಸಲ್ಲಿಸಬೇಕಾಗಿದೆ: https://docs.google.com/spreadsheets/d/1AwEDTTs9h5YEpFGvEUw5-JA-fPTIOHyMhIQuS4UelE/edit?gid=1301332344#gid=1301332344

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular