HomeKarnatakaಮಧ್ಯರಾತ್ರಿ ಸ್ನೇಹಿತನ ಜನ್ಮದಿನ ಆಚರಿಸಿದ ಬೆನ್ನಲ್ಲೇ ಈಜುಕೊಳಕ್ಕೆ ಬಿದ್ದು ಯುವಕ ಸಾವು

ಮಧ್ಯರಾತ್ರಿ ಸ್ನೇಹಿತನ ಜನ್ಮದಿನ ಆಚರಿಸಿದ ಬೆನ್ನಲ್ಲೇ ಈಜುಕೊಳಕ್ಕೆ ಬಿದ್ದು ಯುವಕ ಸಾವು

ಬೆಂಗಳೂರು: ಸ್ನೇಹಿತನ ಜನ್ಮದಿನ ಆಚರಿಸಲು ರೆಸಾರ್ಟ್ ಗೆ ಬಂದಿದ್ದ ಯುವಕನೊಬ್ಬ ನಿದ್ದೆ ಮಂಪರಿನಲ್ಲಿ ಈಜುಕೊಳಕ್ಕೆ ಬಿದ್ದು ಮೃತಪಟ್ಟ ಘಟನೆ ದೊಡ್ಡಬಳ್ಳಾಪುರದ ಹೊಸಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಚರಮಂಗನಹಳ್ಳಿಯ ಅಭಿಲಾಶ್(20) ಮೃತಪಟ್ಟ ಯುವಕ. ಮೇ 17ರಂದು ಸ್ನೇಹಿತರ ತಂಡ ಜನ್ಮದಿನ ಆಚರಿಸಲು ಕೋಲಾರದಿಂದ ಹೊಸಹಳ್ಳಿ ರಸ್ತೆಯಲ್ಲಿರುವ ರೆಸಾರ್ಟ್ ಗೆ ಬಂದಿದೆ. ಮೇ 18ರ ಮಧ್ಯರಾತ್ರಿ ಸ್ನೇಹಿತರೆಲ್ಲ ಸೇರಿ ಜನ್ಮದಿನ ಆಚರಿಸಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

ನಂತರ ಎಲ್ಲರೂ ರೂಂಗೆ ಹೋಗಿ ಮಲಗಿದ್ದಾರೆ. ಈ ವೇಳೆ ಹೊರಬಂದ ಅಭಿಲಾಶ್ ಹೆಚ್ಚಿನ ಸಮಯವಾದರೂ ಮರಳಿ ಬಾರದ ಕಾರಣ ಸ್ನೇಹಿತರು ಹುಡುಕಾಡಿದ್ದಾರೆ. ಆದರೆ, ಕತ್ತಲೆಯಲ್ಲಿ ಆತ ಕಂಡು ಬಂದಿರಲಿಲ್ಲ. ನಂತರ ರೆಸಾರ್ಟ್ ಮಾಲೀಕರಿಗೆ ಮಾಹಿತಿ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳಗ್ಗೆ ಈಜುಕೊಳದಲ್ಲಿ ಯುವಕನ ಶವ ತೇಲುವುದನ್ನು ಗಮನಿಸಿದ ರೆಸಾರ್ಟ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಹೊಸಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಿದ್ದೆ ಮಂಪರಿನಲ್ಲಿ ತೆರಳಿದ್ದ ಅಭಿಲಾಶ್ ಆಕಸ್ಮಿಕವಾಗಿ ಈಜುಕೊಳಕ್ಕೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular