HomeEntertainmentBIG NEWS: ನಟ ಜಯಂ ರವಿ ದಾಂಪತ್ಯದಲ್ಲಿ ಬಿರುಕು ಪ್ರಕರಣ: ಸುದ್ದಿಗೋಷ್ಠಿಯಲ್ಲಿ ಕಿರುಚಾಡಿ, ಕೂಗಾಡಿ, ಕಣ್ಣೀರು...

BIG NEWS: ನಟ ಜಯಂ ರವಿ ದಾಂಪತ್ಯದಲ್ಲಿ ಬಿರುಕು ಪ್ರಕರಣ: ಸುದ್ದಿಗೋಷ್ಠಿಯಲ್ಲಿ ಕಿರುಚಾಡಿ, ಕೂಗಾಡಿ, ಕಣ್ಣೀರು ಹಾಕುತ್ತಾ ಪತ್ನಿ ವಿರುದ್ಧ ಆರೋಪಗಳ ಸುರಿಮಳೆಗೈದ ನಟ

ಚೆನ್ನೈ: ಕಾಲಿವುಡ್ ಖ್ಯಾತ ನಟ ಜಯಂ ರವಿ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಎರಡು ವರ್ಷಗಳ ಹಿಂದೆಯೇ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಡಿವೋರ್ಸ್ ಕೇಸ್ ಶುರುವಾದ ಬಳಿಕ ನನಗೆ ಪತ್ನಿ ಹಾಗೂ ಅವರ ಕುಟುಂಬದಿಂದ ಕಿರುಕುಳ ಮತ್ತಷ್ಟು ಹೆಚ್ಚಾಗಿದೆ ಎಂದು ಜಯಂ ರವಿ ಆರೋಪಿಸಿದ್ದಾರೆ.

ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿದ ನಟ ಜಯಂ ರವಿ, ನನ್ನ ಪತ್ನಿ ಆರತಿ ಹಾಗೂ ಅಕೆಯ ಕುಟುಂಬದಿಂದ ನನಗೆ ಕಿರುಕುಳ ನೀಡಲಾಗುತ್ತಿದೆ. ನನ್ನ ಮಕ್ಕಳನ್ನು ನೋಡಲು ನನಗೆ ಸಾಧ್ಯವಾಗುತ್ತಿಲ್ಲ. ನನ್ನ ಮಕ್ಕಳಿಗೆ ಫೋನ್ ಮಾಡಲು ಕೂಡ ಬಿಡುತ್ತಿಲ್ಲ. ಶಾಲೆಗೆ ಬಾಡಿಗಾರ್ಡ್ ಕಳುಹಿಸಿ ಮಕ್ಕಳನ್ನು ಭೇಟಿಯಾಗದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನನ್ನ ಮಕ್ಕಳನ್ನು ನಾನು ನೋಡದೇ ಇರಲು ಸಾಧ್ಯವಾಗುತ್ತಿಲ್ಲ. ಇದೇ ನೋವಲ್ಲಿ ನನ್ನ ಕೈಗಳನ್ನು ಕುಯ್ದುಕೊಂಡೆ ಎಂದು ಕಣ್ಣೀರಿಡುತ್ತಾ ಕೈಗಳಲ್ಲಿನ ಗಾಯಗಳನ್ನು ತೋರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನನ್ನ ಜೀವನವನ್ನು ಹಾಳು ಮಾಡಿದ ಯಾರನ್ನೂ ಸುಮ್ಮನೇ ಬಿಡುವುದಿಲ್ಲ. 14 ವರ್ಷಗಳಿಂದ ನಾನು ಸುಮ್ಮನಿದ್ದೆ. ಇನ್ನು ನಾನು ಸುಮ್ಮನೆ ಕೂರುವುದಿಲ್ಲ. ಎಲ್ಲಾ ಸತ್ಯಗಳನ್ನು ಹೊರ ತರುತ್ತೇನೆ. ನನ್ನ ಪತ್ನಿ ಹಾಗೂ ಆಕೆಯ ಕುಟುಂಬದವರಿಂದ ಎಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗೊತ್ತೇ? ಎಂದು ಕಿರುಚಾಡಿ, ಕೂಗಾಡಿದ್ದಾರೆ.

ನನ್ನನ್ನು ಗುಲಾಮನಂತೆ ಇರಿಸಿಕೊಳ್ಳಲಾಗಿತ್ತು. ಸಾಕಷ್ಟು ಕಷ್ಟಗಳನ್ನು ನೀಡಿದ್ದಾರೆ ಎಂದು ಪತ್ನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನನ್ನಗೆ ವಿಚ್ಛೇದನ ಸಿಗುವವರೆಗೂ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ. ನನಗೆ ಆಗಿರುವ ಅವಮಾನ, ಹಾನಿ ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇನೆ. ಎಲ್ಲಾ ನೋವಿನಿಂದ ಹೊರಬರುತ್ತೇನೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular