HomeLatest NewsSHOCKING : ಅಪ್ರಾಪ್ತ ಬಾಲಕಿಯ ಅಶ್ಲೀಲ ವಿಡಿಯೋ ತಂದೆಗೆ ಕಳುಹಿಸಿ 10 ಲಕ್ಷಕ್ಕೆ ಬೇಡಿಕೆಯಿಟ್ಟ 9ನೇ...

SHOCKING : ಅಪ್ರಾಪ್ತ ಬಾಲಕಿಯ ಅಶ್ಲೀಲ ವಿಡಿಯೋ ತಂದೆಗೆ ಕಳುಹಿಸಿ 10 ಲಕ್ಷಕ್ಕೆ ಬೇಡಿಕೆಯಿಟ್ಟ 9ನೇ ತರಗತಿ ವಿದ್ಯಾರ್ಥಿ !

ಕೃಷ್ಣಗಿರಿ: ತಮಿಳುನಾಡಿನಲ್ಲಿ ಸಮಾಜವೇ ತಲೆತಗ್ಗಿಸುವಂತಹ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಬಾಲಕಿಯೊಬ್ಬಳ ಅಶ್ಲೀಲ ವಿಡಿಯೋಗಳನ್ನು ರೆಕಾರ್ಡ್ ಮಾಡಿದ 9ನೇ ತರಗತಿಯ ವಿದ್ಯಾರ್ಥಿ, ಅವುಗಳನ್ನು ಆಕೆಯ ತಂದೆಗೇ ಕಳುಹಿಸಿ 10 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ.

ಏನಿದು ಘಟನೆ?

ತಮಿಳುನಾಡಿನ ಕೃಷ್ಣಗಿರಿ ನಗರದ ಸಮೀಪದ ರಾಯಕ್ಕೋಟೈಸಾಲೈ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್‌ ಒಂದರಲ್ಲಿ ವಾಸಿಸುತ್ತಿರುವ 9ನೇ ತರಗತಿಯ ಬಾಲಕನೊಬ್ಬ ಅನಾರೋಗ್ಯದ ಕಾರಣದಿಂದ ಕಳೆದ ಕೆಲವು ದಿನಗಳಿಂದ ಶಾಲೆಗೆ ಹೋಗದೆ ಮನೆಯಲ್ಲೇ ಇದ್ದನು. ಈ ನಡುವೆ, ಶಾಲೆ ಬಿಟ್ಟಿದ್ದ ಇತರ ಇಬ್ಬರು ಹುಡುಗರ ಪರಿಚಯ ಆತನಿಗೆ ಆಗಿತ್ತು.

ಫೇಕ್ ಅಕೌಂಟ್ ಮೂಲಕ ಜಾಲ:

ಈ ಮೂವರು ಆರೋಪಿಗಳು ಸೇರಿ, ಅದೇ ಅಪಾರ್ಟ್‌ಮೆಂಟ್‌ನ ಮೇಲಿನ ಮಹಡಿಯಲ್ಲಿ ವಾಸಿಸುವ ಬಾಲಕಿಯ ಮೇಲೆ ಕಣ್ಣಿಟ್ಟಿದ್ದರು. ಆಕೆ ಓದುತ್ತಿದ್ದ ಶಾಲೆಯದೇ ವಿದ್ಯಾರ್ಥಿಯಾಗಿದ್ದ ಈ ಬಾಲಕ, ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ (ಫೇಕ್) ಖಾತೆಯನ್ನು ತೆರೆದು ಆಕೆಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದನು. ಬಾಲಕಿ ಅದನ್ನು ಒಪ್ಪಿಕೊಂಡ ನಂತರ, ಆಕೆಯ ಪ್ರೊಫೈಲ್‌ನಿಂದ ಫೋಟೋಗಳನ್ನು ಡೌನ್‌ಲೋಡ್ ಮಾಡಿ ಅವುಗಳನ್ನು ಅಶ್ಲೀಲವಾಗಿ ಮಾರ್ಫಿಂಗ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನ್ಯೂಡ್ ವಿಡಿಯೋ ಕಾಲ್‌ಗಾಗಿ ಬೆದರಿಕೆ:

ಆ ಮಾರ್ಫಿಂಗ್ ಫೋಟೋಗಳನ್ನು ಬಾಲಕಿಗೆ ಕಳುಹಿಸಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಬಿದ್ದ ಬಾಲಕಿಗೆ ನ್ಯೂಡ್ ವಿಡಿಯೋ ಕಾಲ್ ಮಾಡುವಂತೆ ಮತ್ತು ಇನ್ನಷ್ಟು ಫೋಟೋಗಳನ್ನು ಕಳುಹಿಸುವಂತೆ ಒತ್ತಾಯಿಸಿದ್ದಾರೆ. ಬಾಲಕಿ ಭಯದಿಂದ ವಿಡಿಯೋ ಕಾಲ್ ಮಾಡಿದಾಗ, ಆರೋಪಿಗಳು ಅದನ್ನು ರೆಕಾರ್ಡ್ ಮಾಡಿ ಸೇವ್ ಮಾಡಿಕೊಂಡಿದ್ದಾರೆ.

ತಂದೆಗೆ ಬ್ಲ್ಯಾಕ್‌ಮೇಲ್:

ನಂತರ ಆ ವಿಡಿಯೋಗಳನ್ನು ಬಾಲಕಿಯ ತಂದೆಯ ವಾಟ್ಸಾಪ್‌ಗೆ ಕಳುಹಿಸಿ, 10 ಲಕ್ಷ ರೂಪಾಯಿ ನೀಡದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಆ ವಿಡಿಯೋಗಳನ್ನು ನೋಡಿ ಶಾಕ್ ಆದ ತಂದೆ, ಚಾಕಚಕ್ಯತೆಯಿಂದ ಆ ಫೋನ್ ನಂಬರ್ ಯಾರದ್ದು ಎಂದು ಪತ್ತೆ ಹಚ್ಚಿದಾಗ.. ಅದು ತಮ್ಮ ಕೆಳಗಿನ ಮಹಡಿಯಲ್ಲಿ ವಾಸಿಸುವ ಬಾಲಕನದ್ದೇ ಎಂದು ತಿಳಿದುಬಂದಿದೆ.

ಪೊಲೀಸರ ಕ್ರಮ:

ಸಂತ್ರಸ್ತ ತಂದೆಯ ದೂರಿನ ಮೇರೆಗೆ ಕೃಷ್ಣಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೂವರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಅವರನ್ನು ಬಂಧಿಸಿ ಜುವೆನೈಲ್ ಹೋಂಗೆ (ಬಾಲಾಪರಾಧಿಗಳ ವಸತಿ ಗೃಹ) ರವಾನಿಸಲಾಗಿದೆ. ಈ ಘಟನೆ ಸ್ಥಳೀಯವಾಗಿ ತೀವ್ರ ಸಂಚಲನ ಮೂಡಿಸಿದೆ.


For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular