ಚಾಮರಾಜನಗರ: ಜಮೀನಿನಲ್ಲಿದ್ದ ರೈತನ ಮೇಲೆ ಒಂಟಿ ಸಲಗ ದಾಳಿ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ. ಕಾಡಾನೆ ದಾಳಿಯಿಂದ ರೈತ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮರೂರು ಗ್ರಾಮದ ಅಂಕಪ್ಪಸ್ವಾಮಿ(75) ಅವರ ಮೇಲೆ ಆನೆ ದಾಳಿ ನಡೆಸಿದೆ. ಹಲಸಿನ ಹಣ್ಣು ತಿನ್ನಲು ಬಂದು ರೈತನ ಮೇಲೆ ಆನೆ ದಾಳಿ ನಡೆಸಿದೆ. ಆನೆ ಓಡಿಸಲು ಮುಂದಾದ ವೇಳೆ ದಾಳಿ ಮಾಡಿದೆ. ಆನೆ ದಾಳಿಯ ವೇಳೆ ರೈತ ಅಂಕಪ್ಪಸ್ವಾಮಿ ಅವರ ಕಾಲು, ಕೈ ಮೂಳೆ ಮುರಿದಿವೆ. ಮೈಸೂರು ಖಾಸಗಿ ಆಸ್ಪತ್ರೆಗೆ ಅಂಕಪ್ಪಸ್ವಾಮಿ ಅವರನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

