HomeLatest NewsWatch Video: ರೋಹಿತ್ ಶರ್ಮಾ ಕೈಯಲ್ಲಿದ್ದ ₹3.25 ಕೋಟಿ ಬೆಲೆಯ ರೋಲೆಕ್ಸ್ ವಾಚ್ ಕದಿಯಲು ಯತ್ನ:ಶಾಕಿಂಗ್ ವೀಡಿಯೋ...

Watch Video: ರೋಹಿತ್ ಶರ್ಮಾ ಕೈಯಲ್ಲಿದ್ದ ₹3.25 ಕೋಟಿ ಬೆಲೆಯ ರೋಲೆಕ್ಸ್ ವಾಚ್ ಕದಿಯಲು ಯತ್ನ:ಶಾಕಿಂಗ್ ವೀಡಿಯೋ ವೈರಲ್

ಮುಂಬೈ: ಟೀಮ್ ಇಂಡಿಯಾದ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಅವರಿಗೆ ಮುಂಬೈ ಬೀದಿಗಳಲ್ಲಿ ಅನಿರೀಕ್ಷಿತ ಮತ್ತು ಆತಂಕಕಾರಿ ಘಟನೆಯೊಂದು ಎದುರಾಗಿದೆ. ಅಭಿಮಾನಿಗಳನ್ನು ಮಾತನಾಡಿಸಲು ಹೋದ ಸ್ಟಾರ್ ಕ್ರಿಕೆಟಿಗನ ಮಣಿಕಟ್ಟಿನಲ್ಲಿದ್ದ ಕೋಟ್ಯಂತರ ರೂಪಾಯಿ ಬೆಲೆಯ ಕೈಗಡಿಯಾರವನ್ನೇ ಕದಿಯಲು ಕಿಡಿಗೇಡಿಗಳು ಯತ್ನಿಸಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ

ನಡೆದಿದ್ದೇನು?:

ರೋಹಿತ್ ಶರ್ಮಾ ಅವರು ತಮ್ಮ ಐಷಾರಾಮಿ ಕಾರಿನಲ್ಲಿ ಸಂಚರಿಸುತ್ತಿದ್ದಾಗ, ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಕಂಡು ಕಾರಿನ ಕಿಟಕಿ ಗಾಜನ್ನು ಕೆಳಗಿಳಿಸಿ ಕೈಬೀಸಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡ ಇಬ್ಬರು ಯುವಕರು ರೋಹಿತ್ ಅವರ ಕೈಯನ್ನು ಬಲವಾಗಿ ಹಿಡಿದು ಮಣಿಕಟ್ಟಿನಲ್ಲಿದ್ದ ವಾಚ್ ಬಿಚ್ಚಲು ಹರಸಾಹಸ ಪಟ್ಟಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ರೋಹಿತ್ ಕೈಯನ್ನು ಒಳಕ್ಕೆ ಎಳೆದುಕೊಂಡು ವಿಂಡೋ ಗ್ಲಾಸ್ ಏರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಚ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ:

ರೋಹಿತ್ ಅಂದು ಧರಿಸಿದ್ದು ವಿಶ್ವವಿಖ್ಯಾತ ರೋಲೆಕ್ಸ್ ಜಿರಾಫೆ (Rolex Giraffe) ಮಾಡೆಲ್‌ನ ವಾಚ್. ಇದರ ಅಂದಾಜು ಮೌಲ್ಯ ಬರೋಬ್ಬರಿ ₹3.25 ಕೋಟಿ ಇದೇ ಕಾರಣಕ್ಕೆ ಕಿಡಿಗೇಡಿಗಳು ಅಭಿಮಾನಿಗಳ ಸೋಗಿನಲ್ಲಿ ಬಂದು ಕೈ ಹಾಕಿದ್ದಾರೆ ಎನ್ನಲಾಗುತ್ತಿದೆ.

ಸಾರ್ವಜನಿಕ ಪ್ರದೇಶಗಳಲ್ಲಿ ಸ್ಟಾರ್ ಕ್ರಿಕೆಟಿಗರಿಗೇ ಇಂತಹ ಸ್ಥಿತಿ ಬಂದರೆ ಸಾಮಾನ್ಯರ ಗತಿಯೇನು? ಈ ಘಟನೆ ಈಗ ಕ್ರೀಡಾ ವಲಯದಲ್ಲಿ ಭದ್ರತೆಯ ಕುರಿತು ದೊಡ್ಡ ಚರ್ಚೆ ಹುಟ್ಟುಹಾಕಿದೆ.

ಐಪಿಎಲ್ 2026: ಗಾಯದ ನಂತರ ಹಿಟ್‌ಮ್ಯಾನ್ ಅಬ್ಬರ

ಒಂದೆಡೆ ಈ ಆಘಾತಕಾರಿ ಘಟನೆ ನಡೆದಿದ್ದರೆ, ಇನ್ನೊಂದೆಡೆ ಮೈದಾನದಲ್ಲಿ ರೋಹಿತ್ ಶರ್ಮಾ ಅಬ್ಬರಿಸುತ್ತಿದ್ದಾರೆ.ಏಪ್ರಿಲ್ 12ರಂದು ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ರೋಹಿತ್, ಮೇ 4ರಂದು ಲಕ್ನೋ ವಿರುದ್ಧ ಕಮ್‌ಬ್ಯಾಕ್ ಮಾಡಿದರು.ಬಂದಿದ್ದೇ ತಡ, ಕೇವಲ 44 ಎಸೆತಗಳಲ್ಲಿ 84 ರನ್ ಸಿಡಿಸಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.

ಮುಂದಿನ ಬಿಗ್ ಫೈಟ್: ಮುಂಬೈ vs ಆರ್‌ಸಿಬಿ

ಮುಂಬೈ ಇಂಡಿಯನ್ಸ್ ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಬೇಕಾದರೆ ಮುಂದಿನ ಪಂದ್ಯಗಳಲ್ಲಿ ಗೆಲ್ಲಲೇಬೇಕು. ಮೇ 10ರಂದು ರಾಯ್‌ಪುರದಲ್ಲಿ ನಡೆಯಲಿರುವ ಹೈ-ವೋಲ್ಟೇಜ್ ಪಂದ್ಯದಲ್ಲಿ ಮುಂಬೈ ತಂಡ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಎದುರಿಸಲಿದೆ. ಹಿಟ್‌ಮ್ಯಾನ್ ಫಾರ್ಮ್‌ಗೆ ಮರಳಿರುವುದು ಆರ್‌ಸಿಬಿ ಪಾಳಯದಲ್ಲಿ ನಡುಕ ಹುಟ್ಟಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular